ಭದ್ರಬಾಹು ಮಹಾರಾಜರ 99ನೇ ಜಯಂತಿ ಆಚರಣೆ

ಭದ್ರಬಾಹು ಮಹಾರಾಜರ 99ನೇ ಜಯಂತಿ ಆಚರಣೆ  Celebration of the 99th Birth Anniversary of Maharaja Bhadrabahu

ಲೋಕದರ್ಶನ ವರದಿ 

ಬೆಳಗಾವಿ ಸೆ.14: ನಗರದ ಸ್ಥಳೀಯ ಹಿಂಡವಾಡಿಯ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ಸಂಸ್ಥಾಪಕ ಅಧಿಷ್ಠಾತೃ ಶಿಕ್ಷಣ ಮಹರ್ಷಿ, ಜ್ಞಾನಯೋಗಿ, ಪರಮ ಪೂಜ್ಯ 105 ಜೈನೈಕ್ಯ ಶ್ರೀ ಭದ್ರಬಾಹು ಮಹಾರಾಜರ 99ನೇ ಜಯಂತಿಯನ್ನು ಸೋಮವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.  

ಗೋಮಟೇಶ ವಿದ್ಯಾಪೀಠದ ಅಧಿಷ್ಠಾತೃಗಳು ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮಾಜಿ ಶಾಸಕರು, ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿಗಳಾದ ಸಂಜಯ ಬಿ. ಪಾಟೀಲ ಮತ್ತು ಗೋಮಟೇಶ ವಿದ್ಯಾಪೀಠದ ಉತ್ತರಾಧಿಕಾರಿ ಅಧಿಷ್ಠಾತೃ ವೃಷಭ ಸಂಜಯ ಪಾಟೀಲ ಅವರು ಮಹಾರಾಜರ ಪ್ರತಿಮೆಗೆ ಮಾಲಾರೆ​‍್ಣ ಮಾಡಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

ಕಾರ್ಯಕ್ರಮದಲ್ಲಿ ಗೋಮಟೇಶ ವಿದ್ಯಾಪೀಠದ ನಿರ್ದೇಶಕರಾದ ಸನತ್ಕುಮಾರ, ದೀಲೀಪ್ ಬಿ. ಪಾಟೀಲ, ರಾಜೇಶ ಡಿ. ಪಾಟೀಲ, ಮೋಕ್ಷ ಸನತ್ಕುಮಾರ, ಅಕ್ಷಯ ಕಬೂರೆ, ಬಾಪುಸೋ ಪಾಟೀಲ, ಉಪಪ್ರಾಂಶುಪಾಲರಾದ ಗೌತಮ ಯು.ವಿ., ಮಹೇಶ ಕಾರೇಕರ್, ಸುನೀಲ ಬಿ. ಪಾಟೀಲ, ಬೈರು ಪಾಟೀಲ, ಸಾವಿತ್ರಿ ಬಿ. ಪಾಟೀಲ ಸೇರಿದಂತೆ ಮುಖ್ಯಾಧ್ಯಾಪಕರಾದ ಸರೋಜಾ ಎಂ. ಪಾಟೀಲ, ಪರಶುರಾಮ ನಾಯ್ಕ ಹಾಗೂ ವಿದ್ಯಾಪೀಠದ ಶಿಕ್ಷಕ-ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಪಾಲ್ಗೊಂಡು ಭಕ್ತಿಪೂರ್ವಕ ನಮನ ಸಲ್ಲಿಸಿದರು.