ಅಭಿಮಾನಿಗಳ ಪ್ರೀತಿಯಲ್ಲಿ ಮಿಂದೆದ್ದ ರಾಮ್ ಚರಣ್ ನ್ಯಾಷನಲ್ ಅವಾರ್ಡ್ ಗೆಲ್ಲಲಿದೆ ಪೆದ್ದಿ: ಶಿವರಾಜ್ ಕುಮಾರ್
Ram Charan, who is loved by his fans, will definitely win the National Award: Shivarajkumar
ಬೆಂಗಳೂರು 25: ಬಹು ನೀರೀಕ್ಷಿತ ಪ್ಯಾನ್ ಇಂಡಿಯಾ ’ಪೆದ್ದಿ’ ಸಿನಿಮಾ ಬಿಡುಗಡೆ ದಿನಗಣನೆ ಆರಂಭವಾಗಿದ್ದು, ಸಿನಿಮಾ ಪ್ರಮೋಷನ್ ಗಾಗಿ ನಿನ್ನೆ (ಮೇ 25) ನಟ ರಾಮ್ ಚರಣ್ ಅವರು ಬೆಂಗಳೂರಿಗೆ ಬಂದಿದ್ದರು. ರಾಮ್ ಚರಣ್ ಸುದ್ದಿಗೋಷ್ಠಿಯ ಸ್ಥಳಕ್ಕೆ ನುಗ್ಗಿದ ಅಭಿಮಾನಿಗಳು ತನ್ನ ಪ್ರೀತಿಯ ನಟನನ್ನು ನೋಡಿ ಹರ್ಷೋದ್ಗಾರ ಮೊಳಗಿಸಿದರು. ಪೆದ್ದಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದ್ದು, ಕನ್ನಡಕ್ಕೂ ಡಬ್ ಆಗಿ ತೆರೆಕಾಣಲಿದೆ. ಹಾಗಾಗಿ ಬೆಂಗಳೂರಿಗೆ ಬಂದಿರುವ ರಾಮ್ ಚರಣ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈಗಾಗಲೇ ಟ್ರೇಲರ್ ನಲ್ಲಿ ಕ್ರಿಕೇಟರ್ ಹಾಗೂ ಕುಸ್ತಿಪಟುವಾಗಿ ಕಾಣಿಸಿಕೊಂಡ ರಾಮಚರಣ್ ಈ ಸಿನಿಮಾದಲ್ಲಿ ವರ್ಕೌಟ್ ಮಾಡಿ ಪೈಟ್, ಡ್ಯಾನ್ಸ್ ನಲ್ಲಿ ಮಿಂಚಿರುವುದು ಖಚಿತ. ಶಿವರಾಜ್ ಕುಮಾರ್ ಸರ್ ಜೊತೆ ನಟಿಸಿರುವ ಬಗ್ಗೆ ಹೆಮ್ಮೆಯಿದೆ. ದೊಡ್ಡ ದೊಡ್ಡ ಕಲಾವಿದರ ಜೊತೆಗೆ ನಟಿಸಿರುವ ಪೆದ್ದಿ ಸಿನಿಮಾ ನನ್ನ ಸಿನಿ ಬದುಕಿನಲ್ಲಿ ಒಂದು ವಿಶೇಷ ಸಿನಿವಾಗಲಿದೆ, ಎಂದು ಪತ್ರಿಕಾಘೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.
ನಟ ಶಿವರಾಜ್ ಕುಮಾರ್ ಮಾತನಾಡಿ, ’ಚಿರಂಜೀವಿ, ಪವನ್ ಕಲ್ಯಾಣ್ ಮತ್ತು ರಾಮ್ ಚರಣ್ ಅವರ ಪ್ರೀತಿ ನಮಗೆ ಯಾವಾಗಲೂ ಸಿಕ್ಕಿದೆ. ರಾಮ್ ಚರಣ್ ಡ್ಯಾನ್ಸ್ ಎಂದರೆ ನನಗಾಗಲಿ ಅಪ್ಪುಗಾಗಲಿ ತುಂಬಾ ಇಷ್ಟ. ಈ ಸಿನಿಮಾಕ್ಕೆ ಪಾತ್ರ ಇದೆ ಎಂದ ತಕ್ಷಣ ಬೇರೆ ಯೋಚನೆ ಮಾಡದೆ ಒಪ್ಪಿಕೊಂಡೆ. ಈ ಚಿತ್ರದ ಕಂಟೆಂಟ್ ಕ್ರೀಡಾ ಮನೋಭಾವಕ್ಕೆ ಸಂಬಂದಿಸಿದ್ದು. ಡ್ಯಾನ್ಸ್, ಆ್ಯಕ್ಷನ್ ಪ್ರತಿಯೊಂದರಲ್ಲೂ ರಾಮ್ ಚರಣ್ ಹಾಗೂ ಜಾನವಿ ಅದ್ಭುತವಾಗಿ ಮಾಡಿದ್ದಾರೆ’. ಈ ಸಿನಿಮಾ ಅಭಿನಯಕ್ಕಾಗಿ ರಾಮ್ ಚರಣ್ ಗೆ ನ್ಯಾಷನಲ್ ಅವಾರ್ಡ್ ಗೆಲ್ಲುವುದು ಖಚಿತ, ಎಂದು ಶಿವಣ್ಣ ಹೇಳಿದರು. ನಾಯಕಿ ಜಾನವಿ ಕಪೂರ್ ಮಾತನಾಡಿ, ಈ ಸಿನಿಮಾ ಅಭಿನಯಿಸಿದ ಅನುಭವ ತುಂಬಾ ಅದ್ಬುತವಾಗಿದೆ. ರಾಮ್ ಚರಣ್ ಅವರ ಡ್ಯಾನ್ಸ್ ಗೆ ನಾನು ಫಿದಾ ಆಗಿದ್ದೇನೆ’ ಎಂದು ಸಿನಿಮಾ ಬಗ್ಗೆ ಮಾತನಾಡಿದರು. ಈ ಸಿನಿಮಾದ ಡಿಸ್ಟ್ರಿಬ್ಯುಷನ್ ಹೊಣೆಯನ್ನು ಕಿಶೋರ್ ಫಿಲಂಸ್ ಹೊತ್ತಿದ್ದಾರೆ. ಜೂನ್ 4 ರಂದು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿದ್ದು, ಸಿನಿಮಾ ಅಭಿಮಾನಿಗಳು ಟಿಕೇಟ್ ಬುಕ್ಕಿಂಗ್ ಗೆ ಸಜ್ಜಾಗಿದ್ದಾರೆ.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 