ಮಳೆ ನೀರು ಸಂಗ್ರಹ: ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭೀತಿ
Rainwater harvesting: Mosquitoes are a major source of infectious diseases
ಮಳೆ ನೀರು ಸಂಗ್ರಹ: ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭೀತಿ
ಆಲಮೇಲ 09: ಪಟ್ಟಣದ ಬಸ್ ನಿಲ್ದಾಣ ಕಾಂಪೌಂಡ್ ಹತ್ತಿರ ಪೋಸ್ಟ್ ಆಫೀಸ್ ಜಾಗದಲ್ಲಿ ಮಳೆ ನೀರು ಸಂಗ್ರಹಣೆಯಾಗಿ ಸೊಳ್ಳೆಗಳಿಗೆ ಆಶ್ರಯ ತಾಣವಾಗಿ ಪರಿಣಮಿಸಿದೆ. ಅಲ್ಲದೆ ವೈನ್ ಶಾಪಗೆ ಬಂದು ಮಧ್ಯ ಸೇವಿಸಿ ಪ್ಲಾಸ್ಟಿಕ್ ಗ್ಲಾಸುಗಳನ್ನು ಅಲ್ಲೇ ಎಸೆಯುತಿರುತ್ತಾರೆ. ವೈನ್ ಶಾಪ ಮಾಲೀಕರು ಜಾಗವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಜಾಗದಲ್ಲಿ ಕಸ ಮತ್ತು ನೀರು ಸಂಗ್ರಹಣೆ ಕಂಡು ಹತ್ತಿರದಲ್ಲಿ ಇದ್ದ ಚಿಕ್ಕ ಮಕ್ಕಳ ದವಾಖಾನೆ (ಪಾಟೀಲ್ )ಗೆ ಬಂದಿದ್ದ ಪಾಲಕರು ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಮನ ಹರಿಸಬೇಕು ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳ ಕಾಟ ಅತಿಯಾಗಿ ಮಲೇರಿಯಾ ಟೈಫೈಡ್ ಅನೇಕ ರೋಗಗಳು ಹರಡುತ್ತಿದ್ದಾವೆ. ಚಿಕ್ಕ ಮಕ್ಕಳ ದವಾಖಾನೆಗೆ ಬಂದಿದ್ದ ಪಾಲಕರು ನಾವು ಪೇಷಂಟ ಆಗುತ್ತಿದ್ದೇವೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ಆಲಮೇಲ ನೂತನ ತಾಲೂಕು ಆಗಿರುವುದರಿಂದ ಮೇನ್ ಬಸ್ ನಿಲ್ದಾಣ ಹತ್ತಿರ ಗಲೀಜು ಇರುವುದರಿಂದ ಈ ತಾಲೂಕಿಗೆ ಕೆಟ್ಟ ಹೆಸರು ಬರುವುದು ಯಾವುದೇ ಸಂದೇಹವಿಲ್ಲ ಎಂದು ರಾಜು ವಡ್ಡರ ಹೇಳಿದರು.
ಇದು ದವಾಖಾನೆ ಮತ್ತು ಬಸ್ ಸ್ಟ್ಯಾಂಡ್ ಹತ್ತಿರ ಇರುವುದರಿಂದ ರಾತ್ರಿ ವೇಳೆ ದವಾಖಾನೆಯಲ್ಲಿ ಇದ್ದ ರೋಗಿಗಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿವೆ. ಪೇಷಂಟ್‌ಗಳಿಗೆ ತೊಂದರೆಯಾಗುತ್ತಿದೆ. ಸಂಬಂಧ ಪಟ್ಟ ಇಲಾಖೆ ಆದಷ್ಟು ಬೇಗ ಇದನ್ನು ಸ್ವಚ್ಛಗೊಳಿಸಬೇಕು. ಡಾ. ರಾಜೇಶ್ ಜಿ. ಪಾಟೀಲ : ಚಿಕ್ಕ ಮಕ್ಕಳ ವೈದ್ಯರು ಆಲಮೇಲ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 