ರಾಹುಲ ಪ್ರದೀಪ್ ಸಸಾನೆ ವ್ಯಕ್ತಿ ಕಾಣೆ
Rahul Pradeep Sasane is a missing person
ಬೆಳಗಾವಿ, ಡಿ.08: ನಗರದ ರಾಜೀವ ಗಾಂಧಿ ನಗರದಲ್ಲಿ ವಾಸವಾಗಿದ 25 ವರ್ಷ ವಯಸ್ಸಿನ ರಾಹುಲ ಪ್ರದೀಪ್ ಸಸಾನೆ ಎಂಬ ವ್ಯಕ್ತಿಯು ಕಾಣೆಯಾಗಿರುತ್ತಾನೆ ಎಂದು ಎ. ಪಿ. ಎಮ್. ಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಣೆಯಾದ ವ್ಯಕ್ತಿಯು 6 ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ಸದೃವಾದ ಮೈಕಟ್ಟು, ಮರಾಠಿ, ಹಿಂದಿ ಹಾಗೂ ಅಲ್ಪ ಸ್ವಲ್ಪ ಕನ್ನಡ ಭಾಷೆ ಮಾತನಾಡುತ್ತಾನೆ. ಪಿಸ್ತಾಗ್ರೀನ್ ಕಲರ್ ಟೋಪಿ ಇರುವ ಪುಲ ತೋಳಿನ ಶರ್ಟ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ನಗರದ ಪೊಲೀಸ ಆಯುಕ್ತರಿಗೆ, ಎ. ಪಿ. ಎಮ್. ಸಿ ಪೊಲೀಸ ಠಾಣೆಯ ಇನ್ಸಪೆಕ್ಟರ್ ಅವರಿಗೆ ಅಥವಾ ಎ. ಪಿ. ಎಮ್. ಸಿ ಪೊಲೀಸ ಠಾಣೆಯ ದೂರವಾಣಿ ಸಂಖ್ಯೆ : 0831-2405250, 9480804106, 9480804047 ಗೆ ಸಂಪರ್ಕಿಸಬಹುದಾಗಿದೆ ಎಂದು ಎ. ಪಿ. ಎಮ್. ಸಿ ಪೊಲೀಸ ಠಾಣೆಯ ಇನ್ಸಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 