ಬೆಂಬಲ ಬೆಲೆಯಲ್ಲಿ ರಾಗಿ,ಬಿಳಿ ಜೋಳ ಖರೀದಿ ಕೇಂದ್ರ ಪ್ರಾರಂಭ
Ragi, white jowar purchase centre launched at support price
ಹೂವಿನ ಹಡಗಲಿ 26: ದೇಶದ ಆರ್ಥಿಕತೆಯ ಬೆನ್ನೆಲುಬು ರೈತರು, ಸರ್ಕಾರದ ಅನುದಾನ ಮಂಜೂರಾತಿ ಮಾಡಿಸಿ ತಾಲೂಕಿನಲ್ಲಿ ಹೆಚ್ಚಿನ ನೀರಾವರಿ ಕ್ಷೇತ್ರ. ಅಭಿವೃದ್ಧಿ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ಕೃಷ್ಣನಾಯಕ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ಕೇಂದ್ರ ಸರ್ಕಾರವು 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ (ಒಖಕ) ಯೋಜನೆಯಡಿ ಮುಂಗಾರು ರಾಗಿ ಮತ್ತು ಹಿಂಗಾರು ಬಿಳಿ ಜೋಳ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ ಈ ಭಾಗದಲ್ಲಿಹೆಚ್ಚು ಕೃಷಿಯನ್ನು ಅವಲಂಬಿಸಿದ್ದು,ತುಂಗಭದ್ರಾ ನದಿ ಪಕ್ಕದಲ್ಲೇ ಇದ್ದರು ನೀರಾವರಿ ಸೌಲಭ್ಯ ಕೊರತೆ ಇದೆ. ಕೂಡಲೇ ನೀರಾವರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ರೈತರ ಬೆಳೆದ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ನಿಗದಿಪಡಿಸಬೇಕು ಎಂದು ಸರ್ಕಾರ ವನ್ನು ಒತ್ತಾಯಿಸುವುದಾಗಿ ಹೇಳಿದರು.
ರೈತ ಸಂಘದ ಅದ್ಯಕ್ಷ ಸಿದ್ದಪ್ಪ ಗುಜನೂರು ಮಾತನಾಡಿ ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಘೋಷಣೆ ಮಾಡಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು. ಟಿಎಪಿಸಿಎಂಎಸ್ ವ್ಯವಸ್ಥಾಪಕ ಸೊಪ್ಪಿನ ವೀರಣ್ಣ ಮಾತನಾಡಿ ರೈತರು ಬೆಳೆದ ಮುಂಗಾರು ರಾಗಿ 4886 ಮತ್ತು ಹಿಂಗಾರು ಬಿಳಿ ಜೋಳಕ್ಕೆ 3,669 (ಕ್ವಿಂಟಾಲ್ಗೆ) ಬೆಲೆ ನಿಗದಿಪಡಿಸಲಾಗಿದ್ದು,ಮುಂಗಾರು ರಾಗಿ ಬೆಳೆಗೆ 2308 ರೈತರಿಂದ 71599,50 ಕ್ವಿಂಟಲ್ , ಬಿಳಿ ಜೋಳ ಬೆಳೆ 181 ರೈತರಿಂದ 14322.00 ಹಾಗೂ ಹಿಂಗಾರು ಬಿಳಿ ಜೋಳು ಬೆಳೆ 105 ರೈತರಿಂದ 4865.50 ಕ್ವಿಂಟಲ್ ಖರೀದಿಸಲಾಗುತ್ತದೆ ಎಂದರು. ಇದೇ ವೇಳೆ ಟಿಎಪಿಸಿಎಂಎಸ್ ಅದ್ಯಕ್ಷ ಮಲ್ಕಿಒಡೆಯರ್ ನಾಗಭೂಷಣ, ಸಹಕಾರ ಸಂಘದ ನಿಬಂಧಕ ಶರಣಬಸಪ್ಪ, ಆಹಾರ ನೀರೀಕ್ಷಕ ಭಾರತಿ ಮತ್ತು ನಿರ್ದೇಶಕ ರಾದ ಟಿ.ಮಹಾಂತೇಶ, ಎಂ.ನೆಪೋಲಿಯನ್, ಹಕ್ಕಂಡಿ ಮಹಾದೇವ,ಹಣ್ಣಿ ಸುಮಾ,ಸಂಧ್ಯಾ ಇತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 