ರಬಕವಿ-ಬನಹಟ್ಟಿ ಸರ್ಕಾರಿ ಪದವಿ ಮಹಾವಿದ್ಯಾಲಯ ಮಾದರಿ : ಶಾಸಕ ಸವದಿ
Rabakavi-Banahatti Government Degree College: A Model – MLA Savadi
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ 17: ಸುತ್ತೆಲ್ಲ ಹಸಿರು ಹೊದಿಕೆ, ಸುಂದರವಾದ ಅಚ್ಚುಕಟ್ಟಾದ ವ್ಯವಸ್ಥೆ, ಶಿಸ್ತುಭರಿತ ವಾತಾವರಣ ಹೊಂದಿರುವ ಈ ಮಹಾವಿದ್ಯಾಲಯ ಇತರೆ ಕಾಲೇಜುಗಳಿಗೆ ಮಾದರಿಯಯಾಗಿದೆ ಯೆಂದು ಶಾಸಕ ಸಿದ್ದು ಸವದಿ ಪ್ರಶಂಸಿಸಿದರು. ರಬಕವಿ-ಬನಹಟ್ಟಿ ಸರ್ಕಾರಿ ಮಹಾವಿದ್ಯಾಲಯದಲ್ಲಿ ನಡೆದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಮಕ್ಕಳ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ ಇಲ್ಲಿನ ಸ್ವಚ್ಛತೆ, ಶಿಸ್ತು ಹಾಗೂ ಸುಂದರ ಹಸಿರು ಪರಿಸರ ಕಾಯ್ದುಕೊಳ್ಳುವ ಮೂಲಕ ಇದೊಂದು ಮಾದರಿ ಕಾಲೇಜಾಗಿದೆ.
ಈ ಕಾಲೇಜು ಗುಣಮಟ್ಟದ ಶಿಕ್ಷಣ, ಶಿಸ್ತು, ಪರಿಸರ ಪ್ರೇಮ ಬೆಳೆಸುವತ್ತ ಕೈಗೊಂಡ ಕಾರ್ಯ ತಾಲೂಕಿನ ಇತರೆ ಕಾಲೇಜಿಗಳಿಗೆ ಪ್ರೇರಣೆಯಾಗಲೆಂದರು. ಮುಖ್ಯ ಅತಿಥಿ ಪಟ್ಟಣ ಕಾಲೇಜು ಪ್ರಾಚಾರ್ಯ ಬಿ.ಎಸ್.ಕಾಂಬಳೆ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯಪಾಲನೆ ಮಹತ್ತರವಾಗಿದ್ದು, ಸಮಯಪಾಲನೆ ಮೌಲ್ಯವರಿತು ಮಕ್ಕಳು ಶ್ರಮದಿಂದ ತಮ್ಮ ಭವಿತವ್ಯದ ಬದುಕು ರೂಪಿಸಿಕೊಳ್ಳಬೇಕು. ಕೇವಲ ಅಂಕ ಗಳಿಕೆಯಷ್ಟೇ ಮುಖ್ಯ ಧ್ಯೇಯವಾಗದೇ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಾರತೀಯ ಸಂಸ್ಕೃತಿಯ ಮೌಲ್ಯ, ಸಂಸ್ಕಾರ ಜೊತೆಗೆ ಉತ್ತಮ ನಡವಳಿಕೆಯಿಂದ ದೇಶದ ಜವಾಬ್ದಾರಿಯುತ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಶಿವಾನಂದ ಹಂದಿಗುಂದ ಕಾಲೇಜಿನ ಪ್ರತಿಯೊಬ್ಬ ಪ್ರಾಧ್ಯಾಪಕರು ಅಚ್ಚುಕಟ್ಟಾಗಿ ಮತ್ತು ಸಮರಾ್ಣ ಮನೋಭಾವನೆ ಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಮಾದರಿ ಕಾಲೇಜು ರೂಪುಗೊಂಡಿದ್ದು, ಶಾಸಕರೇ ಪ್ರಶಂಸಿರುವುದು ನಮಗೆಲ್ಲ ಹೆಮ್ಮೆ ತಂದಿದೆ ಎಂದರು. ಬಿಸಿಎ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಲಕ್ಷ್ಮೀ ಖವಾಸಿ ಸಾಸಕರಿಂದ ಸನ್ಮಾನಿತರಾದರು. ಮಹಾವೀರ ಖವಟಗೊಪ್ಪ ಪ್ರಾಸ್ತಾವಿಕ ಮಾತುಗಳಾಡಿದರು. ಡಾ.ಪುಂಡಲೀಕ ಬಾಡಗಿ ಸ್ವಾಗತಿಸಿದರು. ಭೀಮಾಸಾಹೇಬ ದೇಸಾಯಿ ನಿರೂಪಿಸಿದರು. ಅಶೋಕ ಮುದೆನ್ನವರ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 