ಕೋವಿಡ್-19 ಸಂಬಂಧ ಹೋಮ್ ಡೆಲಿವರಿ ಸಹಾಯವಾಣಿಗೆ ಆರ್. ಅಶೋಕ್ ಚಾಲನೆ
ಬೆಂಗಳೂರು, ಏ.12,ಕೋವಿಡ್-19 ಸಂಬಂಧ ಅಗತ್ಯ ವಸ್ತುಗಳ ಹೋಮ್ ಡೆಲಿವರಿ ಸಹಾಯವಾಣಿಗೆ ಮೇಯರ್ ಗೌತಮ್ ಕುಮಾರ್ ಹಾಗೂ ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಇಂದು ಬಿಬಿಎಂಪಿ ಕಚೇರಿಯಲ್ಲಿ ಚಾಲನೆ ನೀಡಿದರು.ಈ ವೇಳೆ ಉಪಮಹಾಪೌರ ರಾಮಮೋಹನ ರಾಜು, ದಕ್ಷಿಣ ವಲಯ ಜಂಟಿ ಆಯುಕ್ತರು ವೀರಭದ್ರ ಸ್ವಾಮಿ, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್-19 ಸಂಬಂಧ ಅಗತ್ಯ ವಸ್ತುಗಳನ್ನು ಮನೆ ಮೆನೆಗೆ ತಲುಪಿಸುವ ಉದ್ದೇಶದಿಂದ ಈಗಾಗಲೇ ಪ್ರಾಯೋಗಿಕವಾಗಿ ಕತ್ರಿಗುಪ್ಪೆ ವಾರ್ಡ್ ನಲ್ಲಿ 'ಹೋಮ್ ಡೆಲಿವರಿ' ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಇದೀಗ ಬೆಂಗಳೂರು ದಕ್ಷಿಣ ಲೊಕಸಭಾ ಕ್ಷೇತ್ರ ವ್ಯಾಪ್ತಿಯ ಬಸವನಗುಡಿ, ಜಯನಗರ, ಪದ್ಮನಾಭನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುತ್ತಿದೆ.ಅಗತ್ಯ ದಿನಬಳಕೆಯ ಸಾಮಗ್ರಿಗಳು, ದಿನಸಿ, ತರಕಾರಿ, ಔಷಧ ಸಾಮಗ್ರಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ಹೋಮ್ ಡೆಲಿವರಿ ಸೇವೆ ಇದಾಗಿದೆ. ಸಹಾಯವಾಣಿ ಸಂಖ್ಯೆ 080 61914960ಗೆ ಕರೆ ಮಾಡಿ ಅಗತ್ಯ ವಸ್ತುಗಳನ್ನು ಪಡೆಯಬಹುದಾಗಿದೆ.
ಈ ಭಾಗದಲ್ಲಿ 7.5 ಲಕ್ಷ ಜನಸಂಖ್ಯೆ, 2.5 ಲಕ್ಷ ಮನೆಗಳು ಹಾಗೂ ದಿನಸಿ ಅಂಗಡಿ, ತರಕಾರಿ ಮಳಿಗೆ, ಔಷಧಿ ಮಳಿಗೆ, ಮಾಂಸದಗಡಿಗಳು ಸೇರಿದಂತೆ ಒಟ್ಟು 1926 ಮಳಿಗೆಗಳನ್ನು ಮ್ಯಾಪಿಂಗ್ ಮಾಡಲಾಗಿದ್ದು, ಉಚಿತವಾಗಿ ಡಿಲಿವರಿ ವ್ಯವಸ್ಥೆಯನ್ನು ಮಾಡಲಾಗಿದೆ.ಪ್ರಸ್ತುತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮಾತ್ರ ಈ ಸೇವೆ ಇರಲಿದ್ದು, ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಗರಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಅಶೋಕ್ ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 