ರಸಪ್ರಶ್ನೆ ಸ್ಪರ್ಧೆ: ವಿಜೇತರಿಗೆ ಬಹುಮಾನ

ರಸಪ್ರಶ್ನೆ ಸ್ಪರ್ಧೆ: ವಿಜೇತರಿಗೆ ಬಹುಮಾನ  Quiz Competition: Prizes for Winners

ಲೋಕದರ್ಶನ ವರದಿ 

ಬೆಟಗೇರಿ 19: ಗೋಕಾಕ ತಾಲೂಕಿನ ಬೆಟಗೇರಿ   ವಿನಾಯಕ ಮಿತ್ರ ಮಂಡಳಿ ಆಶ್ರಯದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶನಿವಾರ ರಸಪ್ರಶ್ನೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಿತು. ಸ್ಥಳೀಯ ಗಣೇಶ ಹಬ್ಬದ ಅಂಗವಾಗಿ ಸೆ.14ರಿಂದ 20ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸೆ.20ರಂದು ರಾತ್ರಿ 10 ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ಶಿವರಾಜ ಪತ್ತಾರ ತಿಳಿಸಿದ್ದಾರೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಮಾರು 88 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕವಿರಾಜ ಬುಳ್ಳಿ 84 ಅಂಕ ಗಳಿಸಿ ಪ್ರಥಮ, ಕಾವೇರಿ ಸವದತ್ತಿ 82 ಅಂಕ ಗಳಿಸಿ ದ್ವಿತೀಯ ಹಾಗೂ ಸ್ವಾತಿ ಪಾಟೀಲ 80 ಅಂಕ ಗಳಿಸಿ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಸ್ಥಳೀಯ ಕೆನರಾ ಬ್ಯಾಂಕ್ ವತಿಯಿಂದ ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನಗಳನ್ನು ಸೆ.20ರಂದು ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಭಕ್ತರಿಗೆ ಹೊಳಿಗೆ ಊಟದ ಸವಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಗ್ರಾಮದೇವಿ ದ್ಯಾಮವ್ವದೇವಿ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂಜೆ ಭಕ್ತರಿಗೆ ಬಿಸಿ ಬಿಸಿ ಹೊಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ನೂರಾರು ಭಕ್ತರು ಸಾಲಾಗಿ ಕುಳಿತು ಹೊಳಿಗೆ ಊಟ ಸವಿದು ಸಂಭ್ರಮಿಸಿದರು. ಬೆಟಗೇರಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಜಗದೀಶ ಜಾಧವ, ಶಿವರಾಜ ಪತ್ತಾರ, ಸಂತೋಷ ಬಡಿಗೇರ, ವಿಠ್ಠಲ ಬಡಿಗೇರ, ಭೀಮಶೆಪ್ಪ ಬಡಿಗೇರ, ಮಾರುತಿ ಬಡಿಗೇರ, ಪ್ರಕಾಶ ಬಡಿಗೇರ, ಮಾಂತು ಬಡಿಗೇರ, ಬಸವರಾಜ ಬಡಿಗೇರ, ಮಂಜು ಪತ್ತಾರ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ವಿನಾಯಕ ಮಿತ್ರ ಮಂಡಳಿಯ ಹಿರಿಯ ನಾಗರಿಕರು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.