ಧಾರವಾಡ - ಹುಬ್ಬಳ್ಳಿ

ಹುಬ್ಬಳ್ಳಿ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಹುಬ್ಬಳ್ಳಿ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಲೋಕದರ್ಶನ ವರದಿ 

ಹುಬ್ಬಳ್ಳಿ   09: ಸಾರ್ವಜನಿಕ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹುಬ್ಬಳ್ಳಿ ನಗರ ಮತ್ತು ಉಪನಗರ ಬಸ್ ನಿಲ್ದಾಣ ಹಾಗೂ ನಗರ ಸಾರಿಗೆ (ಸಿಬಿಟಿ) ಬಸ್ ನಿಲ್ದಾಣದಲ್ಲಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ (ಆರ್‌ಒ) ಘಟಕಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯೂಕೆಆರ್ಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಪ್ರಿಯಾಂಕಾ ಎಂ., ಭಾ.ಆ.ಸೇ., ಉದ್ಘಾಟಿಸಿದರು.  ಇನ್ಫೋಸಿಸ್ ಫೌಂಡೇಶನ್ನ ಸಿಎಸ್‌ಆರ್ ಯೋಜನೆಯಡಿ ಇನ್ಫೋಸಿಸ್ ಲಿಮಿಟೆಡ್, ಹುಬ್ಬಳ್ಳಿ ವತಿಯಿಂದ ಈ ಆರ್‌ಒ ಘಟಕಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಮತ್ತು ಉಪನಗರ ಬಸ್ ನಿಲ್ದಾಣ ಹಾಗೂ ಸಿಬಿಟಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ಈ ಸೌಲಭ್ಯದಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ.  

ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಲಿಮಿಟೆಡ್, ಹುಬ್ಬಳ್ಳಿ ಕೇಂದ್ರದ ಮುಖ್ಯಸ್ಥ ಅಲ್ಲಾಬಕ್ಷ ಅಸಾದುಲ್ಲಾ, ಹಿರಿಯ ತಾಂತ್ರಿಕ ವ್ಯವಸ್ಥಾಪಕ ಶಿವಾನಂದ ಕೂಡ್ಲಮಠ, ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ, ಮುಖ್ಯ ಕಾಮಗಾರಿ ಅಭಿಯಂತರ ದಿವಾಕರ್ ಯರಗೊಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗಬಾನ್, ಹೆಚ್‌. ರಾಮನಗೌಡರ, ಅಧಿಕಾರಿಗಳಾದ ರವಿ ಅಂಚಿಗಾವಿ, ನವೀನಕುಮಾರ ತಿಪ್ಪಾ, ಸಂಗಮೇಶ ಮಟೋಳಿ ಸೇರಿದಂತೆ ಹು-ಧಾ ನಗರ ಸಾರಿಗೆ ವಿಭಾಗ ಹಾಗೂ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ