ಪಂಚಾಯತ್ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
Protest demanding fulfillment of demands of Panchayat employees
ಹೂವಿನಹಡಗಲಿ 25: ಗ್ರಾಮ ಪಂಚಾಯಿತಿಯ ನೌಕರರ ಸಮಸ್ಯೆಗಳ ಬಗ್ಗೆ ಶಾಸಕ ಕೃಷ್ಣನಾಯಕ ಚಳಿಗಾಲ ಅಧಿವೇಶನದಲ್ಲಿ ಮಾತನಾಡಲು ಶಾಸಕರ ಆಪ್ತ ಸಹಾಯಕ ಪಿ.ಮಲ್ಲಣ್ಣ ಅವರಿಗೆ ಗ್ರಾಪಂ ನೌಕರರಿಂದ ಶಾಸಕರ ನಿವಾಸದಲ್ಲಿ ಮನವಿ ಸಲ್ಲಿಸಲಾಯಿತು.
ಬಿಲ್ ಕಲೆಕ್ಟರ್ ನಾಗಭೂಷಣ ರೆಡ್ಡಿಮಾತನಾಡಿ, ಗ್ರಾಮ ಪಂಚಾಯತಿ ನೌಕರರ ಪ್ರಮುಖ ಬೇಡಿಕೆಗಳಿಗಾಗಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಚರ್ಚಿಸುವ ಕುರಿತು ರಾಜ್ಯದಲ್ಲಿ ಸುಮಾರು 63 ಸಾವಿರಗ್ರಾಮಪಂಚಾಯತನೌಕರರು, ಕರ ವಸೂಲಿಗಾರರಾಗಿ, ಕ್ಲರ್ಕ ಕಂ ಡಾಟಾ ಎಂಟ್ರಿ ಅಪರೇಟರಗಳಾಗಿ, ಸ್ವಚ್ಛತಾಗಾರರು, ಸಿಪಾಯಿ ಮತ್ತು ವಾಟರಮನ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೊಟ್ಟಷ್ಟು ವೇತನಕ್ಕೆ ದುಡಿಯುತ್ತಿದ್ದ ಪಂಚಾಯತಿ ನೌಕರರಿಗೆ ಇಡೀ ರಾಜ್ಯದಲ್ಲಿ ಸಂಘಟಿಸಿ ನಿರಂತರ ಹೋರಾಟಮಾಡಿದ್ದರ ಫಲವಾಗಿ ಪಂಚಾಯತ ನೌಕರರನ್ನು ಕನಿಷ್ಠ ವೇತನ ಕಾಯ್ದೆಯಲ್ಲಿ ಸೇರಿಸಲಾಗಿದೆ. ಆದರೆ ಅವರಿಗೆ ಬದುಕಿ ಉಳಿಯುಷ್ಟು ವೇತನ ಮಾತ್ರ ಸಿಗುತ್ತಿಲ್ಲ ಮತ್ತು ಪಂಚಾಯತ್ ಮಟ್ಟದಲ್ಲಿ ಸ್ವಚ್ಚವಾಹಿನಿ ನೌಕರರು ಎಂದು ಸರ್ಕಾರ ತರಬೇತಿ ನೀಡಿ ಸಂಜೀವಿನಿ ಒಕ್ಕೂಟದಿಂದ ನೇಮಕಾತಿ ಮಾಡಿಕೊಂಡು ಗುತ್ತಿಗೆ ಆಧಾರದಲ್ಲಿ ಗುಲಾಮರಂತೆ ದುಡಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಅವರಿಗೆ ಪಂಚಾಯತ್ ನೌಕರರು ಎಂದು ಪರಿಗಣಿಸಬೇಕು ಮತ್ತು ಒಂದು ನಿಗದಿತ ವೇತನ ನೀಡಬೇಕು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವ ಕುರಿತು ಶಾಸಕರು ಸದನದಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 