ಚಿಕ್ಕೋಡಿ

ಕಾಲುವೆಗೆ ನೀರು ಹರಿಸದ ಕಾರಣ ಅಡ್ಡಲಾಗಿ ಮಲಗಿ ಪ್ರತಿಭಟನೆ

ಕಾಲುವೆಗೆ ನೀರು ಹರಿಸದ ಕಾರಣ ಅಡ್ಡಲಾಗಿ ಮಲಗಿ ಪ್ರತಿಭಟನೆ

ಮಾಂಜರಿ 16 : ಚಿಕ್ಕೋಡಿ  ತಾಲ್ಲೂಕಿನ ಡೊಣವಾಡ ಗ್ರಾಮದ ಮಹಾಂತ ನಗರ ಸೇರಿ ವಿವಿಧ ತೋಟದ ವಸತಿ ಪ್ರದೇಶದ ಜನರು ಶುಕ್ರವಾರ ನೀರಾವರಿ ಕಾಲುವೆಯಲ್ಲೇ ಅಡ್ಡಲಾಗಿ ಮಲಗಿ, ಪ್ರತಿಭಟನೆ ಮಾಡಿದರು. ’ಕೊಟಬಾಗಿ ಏತ ನೀರಾವರಿಯ ಕಾಲುವೆಗೆ ನೀರು ಹರಿಸದ ಕಾರಣ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ. ಕೊನೆಯ ಭಾಗದವರೆಗೆ ನೀರು ಹರಿಸಿ’ ಎಂದು ಆಗ್ರಹಿಸಿದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ನಿರ್ವಹಣೆ ಆಗುವ 17 ಕಿ.ಮೀ ಉದ್ದದ ಕಾಲುವೆಯಲ್ಲಿ 178.62 ಕ್ಯೂಸೆಕ್ ನೀರು ಹರಿಯಬೇಕಿತ್ತು ಎಂದು ಪ್ರತಿಪಾದಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆರವು ಕಾಲುವೆಯ ಮಾಡಲಾಗಿದೆ. ಆದರೆ, ಅಧಿಕಾರಿಗಳು ನೀರು ಬಿಡುಗಡೆಗೆ ಮೀನ-ಮೇಷತೋರುತ್ತಿದ್ದಾರೆ’ ಎಂದು ರೈತ ಮುಖಂಡ ರಾಚಪ್ಪ ಶಿವಾಪೂರೆ ಆರೋಪಿಸಿದರು.

’ಕೆಲವೆಡೆ ಕಾಲುವೆ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಕಾಲುವೆ ಕೊನೆವರೆಗೆ ನೀರು ಹರಿಯುತ್ತಿಲ್ಲ. ರೈತರು ನೀರಿಲ್ಲದೆಬೆಳೆಯನ್ನು ಉಳಿಸಿಕೊಳ್ಳುವುದು ಹೇಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿದೆ’ ಎಂದು ರೈತ ಬಾಬುಮಗದುಮ್ಮ ತಿಳಿಸಿದರು.  

ಸುದ್ದಿ ಓದಿ