ನೇಹಾ ಹಿರೇಮಠ ಹತ್ಯೆ ಖಂಡಿಸಿ ಪ್ರತಿಭಟನೆ

ಅಂಕಲಿಯಲ್ಲಿ ರಸ್ತೆತಡೆ ನಡೆಸಿ ಗ್ರಾಮಸ್ಥರು, ಹಿಂದುಪರ ಸಂಘಟನೆ ಕಾರ್ಯಕರ್ತರ ಆಕ್ರೋಶ  

ಮಾಂಜರಿ 20: ವಿದ್ಯಾರ್ಥಿನಿ ನೇಹಾ ಹಿರೇಮಠ ಅಮಾನುಷ ಕೊಲೆಗೈದ ಕ್ರೂರಿಫಯಾಜ್ ಮೇಲೆ ಕಠಿಣ ಕ್ರಮತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಶನಿವಾರ ದಿ. 20ರಂದು  ಅಂಕಲಿ ಗ್ರಾಮದ ಯುವ ಮುಖಂಡ ಅಕ್ಷಯ್ ಕೋರೆ ಇವರ ನೇತೃತ್ವದಲ್ಲಿ ಹಿಂದು ಸಂಘಟನೆಗಳ ಕಾರ್ಯ ಕರ್ತರು ಮತ್ತು ವಿವಿಧ ಸಮಾಜದ ಮುಖಂಡರು ಹಾಗೂ ಶಾಲಾ ವಿದ್ಯಾರ್ಥಿಗಳ ಗ್ರಾಮದ ಪ್ರಮುಖ ಬೇದಿಯಲ್ಲಿ  ಪ್ರತಿಭಟನೆ ಮೆರವಣಿಗೆ ಮಾಡಿ ಕ್ರೂರಿ ಫಯಾಜಿಗೆ ಗಲ್ಲು ಶಿಕ್ಷೆ ಇಲ್ಲವಾದರೆ ಎನ್ಕೌಂಟರ್ ನಡೆಸಬೇಕೆಂದು ಗ್ರಾಮ ಅಭಿವೃದ್ಧಿ ಅಧಿಕಾರಿ ವಿನೋದ್ ಭಂಡಾರಿ ಹಾಗೂ ಅಂಕಲಿ ಪೊಲೀಸ್ ಠಾಣೆಯ ಪಿಎಸ್‌ಐ ಕಾಡಪ್ಪ ಜಕ್ಕಣ್ಣವರ್ ಇವರಿಗೆ ಮನವಿ ಸಲ್ಲಿಸಿದರು. 

ಅಂಕಲಿ ಗ್ರಾಮದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅಂಕಲಿ ಗ್ರಾಮ ಪಂಚಾಯಿತಿಯ ಸದಸ್ಯ ಸುರೇಶ್ ಪಾಟೀಲ್ ಹಿಂದು ಹೆಣ್ಣು ಮಗಳ ಮೇಲಿನ ಕೃತ್ಯ ಅತ್ಯಂತ ಕ್ರೂರವಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಜನತೆಗೆ ಸುರಕ್ಷತೆ ಇಲ್ಲದಾಗಿದೆ. ವಿದ್ಯಾರ್ಥಿನಿ ಹಂತಕನನ್ನು ಎನ್‌ಕೌಂಟರ್ ಮಾಡುವ ಮೂಲಕ ಕೊಲೆಗಡುಕರಿಗೆ ಎಚ್ಚರಿಕೆ ನೀಡಬೇಕಿದೆ. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಹೆತ್ತವರು ತೀವ್ರ ದುಃಖದಲ್ಲಿದ್ದು, ಕೊಲೆಗಡುಕ ರಾಕ್ಷಸನಿಗೆ ಕಠಿಣ ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸಿದರು. 

ಹಿಂದೂಪರ ಸಂಘಟನೆಯ ಮುಖಂಡ ಅನಿಲ್ ಸನದಿ ಮಾತನಾಡಿ, ಹಿಂದು ಸಮಾಜದ ಹೆಣ್ಣುಮಗಳನ್ನು ಫಯಾಜ್ ಎಂಬ ದುಷ್ಟ ಭೀಕರವಾಗಿ ಕೊಲೆ ಮಾಡಿದ್ದು, ಕೊಲೆಗಾರನಿಗೆ ಗಲ್ಲುಶಿಕ್ಷೆ ವಿಧಿಸುವ ಮೂಲಕ ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ನೀಡಬೇಕೆಂದು ಆಗ್ರಹಿಸಿದರು. 

ಬಜರಂಗದಳ ಹಾಗು ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಪರಶುರಾಮ್ ಬಂಕಾಪುರ  ಮಾತನಾಡಿ, ಲವ್ ಜಿಹಾದ್ ಕಾರಣಕ್ಕಾಗಿ ಅಮಾಯಕ ಮುಗ್ಧ ವಿದ್ಯಾರ್ಥಿನಿಯ ಕೊಲೆ ಮಾಡಿದ ವಿಷ ಜಂತುಗಳನ್ನು ಹೊಸಕಿ ಹಾಕುವ ಕಾರ್ಯವನ್ನು ಸರ್ಕಾರಮಾಡಬೇಕು. ಘಟನೆ ಖಂಡಿಸಿ ಗ್ರಾಮದ ಎಲ್ಲ ಅಂಗಡಿ ಮುಂಗಟ್ಟು ಬಂದ್ ಮಾಡಿ ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ ಎಂದು ತಿಳಿಸಿದರು. 

ಅಂಕಲಿ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಯುವ ಮುಖಂಡ ಅಕ್ಷಯ್ ಕೋರೆ  ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸುವುದರ ಜೊತೆಗೆ ಆರೋಪಿಗೆ ಕಠಿಣ ಶಿಕ್ಷೆಯನ್ನು ನೀಡಲು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು., ಲವ್ ಜಿಹಾದ್‌ನಿಂದಾಗಿ ರಾಜ್ಯದಲ್ಲಿ ಹಿಂದು ಹೆಣ್ಣು ಮಕ್ಕಳು. ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿದರು. ಈ ಪ್ರತಿಭಟ ರ್ಯಾಲಿಯ್ಲಲಿ ಗ್ರಾಮದ ಗೋಮ್ಮಟೇಶ್ ಶಿಕ್ಷಣ ಸಂಸ್ಥೆ  ಕೆಎಲ್‌ಇ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಗ್ರಾಮದ ಹಿಂದೂಪರ ಸಂಘಟನೆಯ ಎಲ್ಲಾ ಕಾರ್ಯಕರ್ತರು ಜೊತೆಗೆ ಭಾರತೀಯ ಜನತಾ ಪಾರ್ಟಿಯ ಯುವ ಮುಖಂಡ ವಿಕಾಸ್ ಪಾಟೀಲ್ ಸಂಜಯ್ ಚೌದರಿ ಸಚಿನ್ ಕುಟ್ಹೊಳೆ ವಿವೇಕ್ ಕಾಮತೆ ಸಂಜಯ್ ಕದಮ್   ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.