ಸಾಹಿತ್ಯ ಕೃತಿಗಳ ಪರಿಚಯ ಕಾರ್ಯಕ್ರಮ

ಸಾಹಿತ್ಯ ಕೃತಿಗಳ ಪರಿಚಯ ಕಾರ್ಯಕ್ರಮ  Program Introducing Literary Works


ಬೆಳಗಾವಿ 24: ಡಾ. ಮಲ್ಲಿಕಾರ್ಜುನ ಛಬ್ಬಿ ಅವರ ವಿಮರ್ಶಾ ಕೃತಿ ಅನುವರ್ತನ, ನವಿಲುತೋಟ ಹಾಗೂ ಶ್ರೀಶೈಲ ಸಿ. ಹೆಬ್ಬಳ್ಳಿ (ದೊಡ್ಡವಾಡ) ಅವರ ಗಜಲ್ಗಳನ್ನು ಒಳಗೊಂಡ ನೋವಿರದ ನಲಿವು ಎಲ್ಲಿರುವುದು, ಬಾಳ ಕಡಲಿನ ತೆರೆಗಳು ಕವನ ಸಂಕಲನ ಹಾಗೂ ಅಪ್ಪಾಸಾಹೇಬ ಬ. ಲಿಂಬಿಗಿಡ ಅವರ ಕವನ ಸಂಕಲನಗಳನ್ನು ಒಳಗೊಂಡ ಕಳಕಳಿಯ ಕಂದಮ್ಮಗಳು ಸೇರಿದಂತೆ ವಿವಿಧ ಕೃತಿಗಳನ್ನು ಪರಿಚಯಿಸಲಾಯಿತು.  

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ಪ್ರಕಟಿಸಿರುವ ಪ್ರೊ. ಜೆ.ಆರ್‌. ಲಕ್ಷ್ಮಣರಾವ್ ಹಾಗೂ ಪ್ರೊ. ಅಡ್ಯನಡ್ಕ ಕೃಷ್ಣಭಟ್ಟ ಅವರು ಸಂಪಾದಿಸಿರುವ ಇಂಗ್ಲಿಷ್‌-ಕನ್ನಡ ವಿಜ್ಞಾನ ಶಬ್ದಕೋಶದ ಆರು ಸಂಪುಟಗಳನ್ನೂ ಪರಿಚಯಿಸಲಾಯಿತು.  

ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಪಿ.ವೈ. ಗ್ರಾಮದ ಆರೂಢ ಜ್ಯೋತಿ ಚೈತನ್ಯ ಪ್ರಾಥಮಿಕ ಶಾಲೆಯ ಕೋಚಿಂಗ್ ವಿಭಾಗದ ಶಿಕ್ಷಕ, ಉದಯೋನ್ಮುಖ ಬರಹಗಾರ ಹಾಗೂ ಕವಿ ಶಿವಾನಂದ ಬಸನಾಯ್ಕ ಪಟ್ಟಿಹಾಳ (ಇಂಚಲ) ಅವರಿಗೆ ಕೃತಿಗಳನ್ನು ಪರಿಚಯಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯಲು ಪ್ರೋತ್ಸಾಹ ನೀಡಿದರು.