ಭಾವನಾತ್ಮಕ ಲೋಕಕ್ಕೆ ಕರೆದೊಯ್ಯುವ 'ಫಾದರ್' ಥೀಮ್ ವಿಡಿಯೋ
Producer R. Chandru to dedicate a movie to his father
ಲೋಕದರ್ಶನ ವರದಿ
ತಮ್ಮ ತಂದೆಗೆ ಸಿನಿಮಾ ಡೆಡಿಕೇಟ್ ಮಾಡಲಿದ್ದಾರೆ ನಿರ್ಮಾಪಕ ಆರ್. ಚಂದ್ರು
ಅರ್.ಸಿ ಸ್ಟುಡಿಯೋಸ್ ಫಿಲ್ಮ್ ಬ್ಯಾನರ್‌ನಲ್ಲಿ ಆರ್. ಚಂದ್ರು ನಿರ್ಮಾಣ ಮಾಡಿರುವ ಬಹು ನೀರೀಕ್ಷಿತ 'ಫಾದರ್' ಚಿತ್ರದಿಂದ ಫಾದರ್ ಥೀಮ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಹೌದು ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ತಯಾರಾಗುತ್ತಿರುವ ಫಾದರ್ ಚಿತ್ರದ ನಾಯಕನಾಗಿ ಡಾಲಿಂರ್ಗ್ ಕೃಷ್ಣ, ನಾಯಕಿಯಾಗಿ ಅಮೃತ ಅಯ್ಯಂಗಾರ್ ನಟಿಸಿದ್ದಾರೆ. ಇದೊಂದು ತಂದೆ-ಮಗನ ಸಂಬಂಧದ ಭಾವನಾತ್ಮಕ ಚಿತ್ರವಾಗಿದ್ದು ತಂದೆಯಾಗಿ ಪ್ರಕಾಶ್ ರಾಜ್ ಅಭಿನಯ ಮಾಡಿದ್ದಾರೆ. ನಿರ್ಮಾಪಕ ಆರ್ ಚಂದ್ರು ಈ ಚಿತ್ರವನ್ನು ಅವರ ತಂದೆ ರಾಮಣ್ಣ ಅವರಿಗೆ ಡೆಡಿಕೇಟ್ ಮಾಡುತ್ತಿದ್ದಾರೆ. ಫಾದರ್ ಥೀಮ್ ವಿಡಿಯೋವನ್ನು ಚಂದ್ರು ಅವರ ತಂದೆ ಬಿಡುಗಡೆ ಮಾಡಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ನವರಸನ್, ರಾಜೇಶ್, ಮಾಧವನ್ ಶಿರಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ಆರ್. ಚಂದ್ರು, ಎಲ್ಲರಿಗೂ ತಂತಮ್ಮ ತಂದೆ ಎಂದರೆ ಪ್ರೀತಿ ಇರುತ್ತದೆ, ಆ ತಂದೆಯ ವ್ಯಾಲ್ಯೂ ಏನೆಂದು ಇವತ್ತು ಬಿಡುಗಡೆಯಾದ ಥೀಮ್ ವಿಡಿಯೋ ಮೂಲಕ ತೋರಿಸಿದ್ದೇವೆ. ಫಾದರ್ ಸಿನಿಮಾದಲ್ಲಿ ಸಾಕಷ್ಟು ವಿಷಯಗಳಿವೆ, ರಾಜ್‌ಮೋಹನ್ ತುಂಬಾ ಚೆನ್ನಾಗಿ ಕಥೆಯನ್ನು ರೆಡಿ ಮಾಡಿಕೊಂಡು ಬಂದಿದ್ದರು. ಅವರು ಒಂದು ಲೈನ್ ಕಂಟೆಂಟ್ ಹೇಳಿದಾಗಲೇ ನನಗೆ ಇಷ್ಟವಾಯಿತು. ನಮ್ಮ ಚಿತ್ರವನ್ನು ಹೊಸ ವರ್ಷದ ಪ್ರಥಮಾರ್ಧದೊಳಗೇ ರೀಲೀಸ್ ಮಾಡುವ ಯೋಜನೆಯಿದೆ. ಇವತ್ತು ಹೊಸ ವರ್ಷದ ಅಂಗವಾಗಿ ನಮ್ಮ ಚಿತ್ರದ ಫಾದರ್ ಥೀಮ್ ವಿಡಿಯೋ ಬಿಡುಗಡೆ ಮಾಡಿದ್ದೇವೆ. ತಂದೆ ಮಗನ ನಡುವಿನ ಬಾಂಧವ್ಯದ ಕಥೆಯನ್ನು ನಮ್ಮ ಚಿತ್ರ ಹೇಳುತ್ತದೆ. ಸಿನಿಮಾದ ನಾಯಕ ಡಾಲಿಂರ್ಗ್ ಕೃಷ್ಣ ಅವರ ನಿರ್ದೇಶನ, ನಟನೆಯ ಲವ್ ಮಾಲ್ 3 ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ನಾವಿಬ್ಬರೂ ಕೂತು ಮಾತಾಡಿಕೊಂಡು ಆದಷ್ಟು ಬೇಗನೇ ಪ್ರೇಕ್ಷಕರ ಮುಂದೆ ನಮ್ಮ ಚಿತ್ರಗಳನ್ನು ತರಲಿದ್ದೇವೆ. ನಾನು ಕೂಡ ಆದಷ್ಟು ಬೇಗನೇ ನಿಮ್ಮ ಮುಂದೆ ಬರುತ್ತೇನೆ' ಎಂದು ಹೇಳಿದರು.
ನಂತರ ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ 'ನಂಗೆ ಹೆಮ್ಮೆಯ ವಿಷಯ ಈ ಚಿತ್ರದಲ್ಲಿ ಇರೋದು. ಕಥೆ ತುಂಬಾ ಚನ್ನಾಗಿದೆ. ಫಾದರ್ ಪಾತ್ರ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಈ ಚಿತ್ರ ತಿಳಿಸುತ್ತದೆ. ಎಲ್ಲಾ ಕಲಾವಿದರು ನಟನೆ ಕೂಡ ಅದ್ಭುತವಾಗಿ ಮಾಡಿದ್ದಾರೆ. ಈ ಚಿತ್ರಕ್ಕೆ ಸಂಗೀತ ನೀಡಬೇಕು ಎಂದಾಗ ತುಂಬಾ ಖುಷಿ ಆಯ್ತು. ಚಿತ್ರದಲ್ಲಿ 5 ಹಾಡುಗಳಿವೆ' ಎಂದರು. ನಟ ನಾಗಭೂಷಣ, 'ನಾನು ಮತ್ತು ಕೃಷ್ಣ ಲಕ್ಕಿ ಜೋಡಿ. ಮೂರನೇ ಸಲ ಒಂದಾಗಿದ್ದೇವೆ. ಕಥೆ ಕೇಳಿ ಕೃಷ್ಣ ನಾಗಭೂಷಣ ಮಾಡಿದ್ರೆ ಚನ್ನಾಗಿರುತ್ತೆ ಅಂತ ಹೇಳಿದ್ದರಂತೆ. ಹಾಗಾಗಿ ತಂಡ ಸೇರಿದೆ. ನಾನು ಒಂದು ಒಳ್ಳೆಯ ತಂಡದಲ್ಲಿ ಇದ್ದ ಖುಷಿ ಇದೆ. ಇದು ಎಮೋಷನಲ್ ಚಿತ್ರ ಆದರೂ ಮನರಂಜನೆಗೆ ಕೊರತೆ ಇಲ್ಲ' ಎನ್ನುವರು. ವೇದಿಕೆಯಲ್ಲಿ ಚಿತ್ರದ ನಾಯಕ ಕೃಷ್ಣ, ನಾಯಕಿ ಅಮೃತಾ, ನಿರ್ದೇಶಕ ರಾಜ್‌ಮೋಹನ್, ಚಿತ್ರದ ಮೂರು ಹಾಡುಗಳಿಗೆ ಸಾಹಿತ್ಯ ಬರೆದಿರುವ ಕಿನ್ನಾಳ ರಾಜ್ ತಮ್ಮ ಅನುಭವ ಹಂಚಿಕೊಂಡುರು.
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು 