ವಿಷಯದ ಕುರಿತು ವಿಶೇಷ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ವಿಷಯದ ಕುರಿತು ವಿಶೇಷ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ Prize distribution to the winners of the special drawing competition on the subject

ಲೋಕದರ್ಶನ ವರದಿ 

  ಗದಗ 01  : ಈ ವರ್ಷ ಮುಂಗಾರಿನ ಮೇಲೆ ‘ಎಲ್ ನಿನೊ’ ಪ್ರಭಾವ ತೀವ್ರವಾಗಿದ್ದು, ಇದರ ಪರಿಣಾಮಗಳ ಕುರಿತು ಜನ ಜಾಗೃತಿ ಮೂಡಿಸಲು ಅಂತರ್ಜಲ ಇಲಾಖೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ ನಿನೋ ಎನ್ನುವುದು ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ಅಸಾಮಾನ್ಯವಾಗಿ ಬೆಚ್ಚಗಾಗುವ, ಮಳೆ ಕೊರತೆಯನ್ನು ಉಂಟು ಮಾಡುವ ಹಾಗೂ ಜಾಗತಿಕ ಹವಾಮಾನದ ಮೇಲೆ ಪರಿಣಾಮ ಬೀರುವ ಒಂದು ನೈಸರ್ಗಿಕ ಹವಾಮಾನ ವಿದ್ಯಮಾನವಾಗಿದೆ. 

ಇದರ ಕುರಿತು ಜನಸಾಮಾನ್ಯರಲ್ಲಿ ಜನಜಾಗೃತಿ ಮೂಡಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಂತರ್ಜಲ ನಿರ್ದೇಶನಾಲಯ, ಬೆಂಗಳೂರು, ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಛೇರಿ, ಗದಗ, ಹಾಗೂ ಶಾಲಾ ಶಿಕ್ಷಣ ಇಲಾಖೆ,  ಮತ್ತು ರಿನಿವ್   ಸೋಲಾರ್ ಪ್ರೈ ಲಿ, ಲಕ್ಕುಂಡಿ ತಾ/ಜಿಽಽ ಗದಗ ಇವರ ಸಂಯುಕ್ತಾಶ್ರಯದಲ್ಲಿ “ನಮ್ಮ-ಭೂಮಿ ನಮ್ಮ-ನೀರು ನಮ್ಮ-ಶಕ್ತಿ" ಘೋಷವಾಕ್ಯಗಳೊಂದಿಗೆ "ನೀರಿದ್ದರೆ-ನಾಳೆ" ಕಾರ್ಯಕ್ರಮದಡಿ "ಜಲ ಸಂರಕ್ಷಣೆ ಮತ್ತು ಸದ್ಬಳಕೆ" ವಿಷಯದ ಕುರಿತಾಗಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಚಿತ್ರಕಲಾ ಸ್ಪರ್ಧೆಯು  ‘ನೀರಿದ್ದರೆ ನಾಳೆ ಘೋಷವಾಕ್ಯದಡಿ ತಾಲೂಕಾ  ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಗಸ್ಟ್‌ 1ರಂದು ಗದಗ ನಗರದ ಯು ಆರ್ ಸಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಈ ಒಂದು ಜನ ಜಾಗೃತಿಯ ವಿಶೇಷ ಅವಲೋಕನಾತ್ಮಕ ಚಿತ್ರಕಲಾ ಸ್ಪರ್ಧೆಯಲ್ಲಿ ಗದಗ ಶಹರದ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಇಂದು ಜರುಗಿದ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನದಲ್ಲಿ  ಸಿ ಡಿ ಓ ಜೈನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ, ಅನನ್ಯ ರಾಘವೇಂದ್ರ ಪಾಲನಕರ, ದ್ವಿತೀಯ ಸ್ಥಾನದಲ್ಲಿ ಬೆಟಗೇರಿಯ ಎಸ್ ಎಸ್ ಕೆ ಪ್ರೌಢಶಾಲೆಯ ವಿದ್ಯಾರ್ಥಿಯಾದ ವಿನಾಯಕ ಬಸ್ಮೆ,  ತೃತೀಯ ಸ್ಥಾನದಲ್ಲಿ ಗದಗ ಶಾಸ್ತ್ರೀ ಜೀ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಪೂಜಾ ದೇಸಾಯಿ ಯವರು ಸ್ಪರ್ಧೆಯಲ್ಲಿ ವಿಜೇತರಾದ ಪ್ರಯುಕ್ತ ಅವರಿಗೆ ಪ್ರಥಮ ಬಹುಮಾನವಾಗಿ 3000, ದ್ವಿತೀಯ 2000, ತೃತೀಯ 1000 ನಗದು ಮತ್ತು ಪ್ರಮಾಣ ಪತ್ರ, ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಅಂತರ್ಜಲ ಕಚೇರಿಯ ಭೂ ವಿಜ್ಞಾನಿಗಳಾದ ಮಲ್ಲಪ್ಪ ಕಲ್ಲಾಪೂರ, ಪ್ರವೀಣ ಕರಬಸಣ್ಣವರ,  ಪ್ರೌಢಶಾಲೆ ವಿಭಾಗದ ಶಿಕ್ಷಣ ಸಂಯೋಜಕರಾದ ಮುರಳಿ ಸೋಲಾಪೂರ, ಹಾಗೂ ರೀನೀವ   ಸೋಲಾರ್ ಪ್ರೈವೇಟ್ ಲಿ ನ ಅಭಿಯಂತರರಾದ ಕಾರ್ತೀಕ ಪಾಟೀಲ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.