ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡಿ
ಲೋಕದರ್ಶನ ವರದಿ
ಹೂವಿನಹಡಗಲಿ 09: ವಿದ್ಯಾರ್ಥಿಗಳು ಆರೋಗ್ಯಕ್ಕೆ ಪ್ರಮುಖ ಆದ್ಯತೆ ನೀಡಬೇಕು ಎಂದು ಉಪನ್ಯಾಸಕ ಕವಿ ಶಂಕರ್ ಬೆಟಗೇರಿ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಸೋಗಿ ಗ್ರಾಮದ ಪಟ್ಟೇದ ಸಿದ್ಧಮಲ್ಲಪ್ಪ ಸ.ಪ. ಪೂರ್ವ ಕಾಲೇಜಿನಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ನಡೆದ "ಸ್ವಾಸ್ಥ್ಯ ಸಂಕಲ್ಪ" ವಿಶೇಷ ಉಪನ್ಯಾಸ ನೀಡಿದರು. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ವೈಯಕ್ತಿಕ ಸ್ವಚ್ಛತೆ ಹಾಗೂ ಸಕಾರಾತ್ಮಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಜ್ಯೋತಿ ಎಸ್., ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆಯನ್ನೂ ವೃದ್ಧಿಸುತ್ತವೆ ಎಂದು ಹೇಳಿದರು. ಉಪನ್ಯಾಸಕ ವೆಂಕಟೇಶ್, ಪರಶುರಾಮ ನಾಗೋಜಿ, ಜಯಪ್ರಕಾಶ್, ನರೇಶ್ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳಾದ ವನಜಾಕ್ಷಿ ಮತ್ತು ನಾಗರತ್ನ ಇದ್ದರು.