ಗ್ರಾಮೀಣ ಪರಂಪರೆಯ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಿ
Preserve and nurture rural folk culture and heritage
ಹೂವಿನಹಡಗಲಿ 09- ನಮ್ಮ ಸನಾತನ ಜಾನಪದ ಕಲೆ ಮತ್ತು ಸಂಸ್ಕೃತಿಗಳು ಗ್ರಾಮೀಣ ಪರಂಪರೆ ಸೂಗಡನ್ನು ಪ್ರತಿಬಿಂಬಿಸುತ್ತವೆ. ಸಾಹಿತ್ಯ ಮತ್ತು ಕಲೆಗಳ ಮೂಲ ಬೇರುಗಳು ಜಾನಪದದಲ್ಲಿವೆ. ಆದ್ದರಿಂದ ಯುವಕರು ಆಧುನಿಕ ಅಬ್ಬರಗಳಿಗೆ ಮಾರುಹೋಗದೆ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದು ಜಾನಪದ ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಸಲಹೆ ನೀಡಿದರು.ತಾಲೂಕಿನ ಸೋಗಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಡಾ.ಬಸವರಾಜ ಮಲಶೆಟ್ಟಿ ಬಯಲಾಟ ಕಲಾ ತಂಡ ಶನಿವಾರ ಆಯೋಜಿಸಿದ್ದ ಜಾನಪದ ಸಂಗೀತ ಕಾರ್ಯಕ್ರಮ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಯುವಕರು ಆಧುನಿಕತೆ ಅಬ್ಬರದ ಶೈಲಿಗೆ ಅಂಟಿಕೊಂಡು ಸತ್ವಯುತವಾದ ಜಾನಪದ ಕಲೆಯನ್ನು ನಿರ್ಲಕ್ಷಿಸಿದ್ದಾರೆ ಇದು ಹೀಗೆ ಮುಂದುವರೆದರೆ ಗ್ರಾಮೀಣ ಸಂಸ್ಕೃತಿ ಮತ್ತು ಜಾನಪದ ಕಲೆಗಳು ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ನೌಕರ ಪತ್ರೆಪ್ಪ ಮಾತನಾಡಿ ಕಲಾವಿದರು ಮಸಾಶನಕ್ಕೆ ಸೀಮಿತವಾಗಬಾರದು ಎಂದರು. ಸಂಗೀತ ಶಿಕ್ಷಕ ಯುವರಾಜಗೌಡ ಪಂಡಿತ ಪುಟ್ಟರಾಜ ಗವಾಯಿಗಳ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯಕ್ಕ ಮತ್ತು ಸಂಗಡಿಗರು ಜಾನಪದ ಸಂಗೀತ ನಡೆಸಿಕೊಟ್ಟರು. ಕಲಾವಿದರನ್ನು ಸನ್ಮಾನಿಸಲಾಯಿತು.ಇದೇ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತ ಗವಾಯಿ ಹುಗ್ಗಿ ಮಲ್ಲಿನಾಥ, ಡಿ.ಕೊಟ್ರೇಶ, ಹೆಚ್.ಸಿದ್ದಪ್ಪ, ಕರಿಬಸಪ್ಪ, ಮಲ್ಲಿನಾಥ, ವೀರಣ್ಣ ಇದ್ದರು. ಎಂ.ತಿರುಕಪ್ಪ, ಡಾ.ಕರಿಬಸಪ್ಪ ವೈ . ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 