ಜೋಗಿ ಸಮುದಾಯದ ಜನಪದ ಕಲೆ, ಸಂಸ್ಕೃತಿ ಸಂರಕ್ಷಣೆ ಅಗತ್ಯ: ಡಾ. ಆನಂದಪ್ಪ
Preservation of the folk art and culture of the Jogi community is essential: Dr. Anandappa
ಲೋಕದರ್ಶನ ವರದಿ
ಧಾರವಾಡ, ಜು.15: ಜೋಗಿ ಬುಡಕಟ್ಟು ಸಮುದಾಯವು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಜನಪದ ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಮೃದ್ಧವಾಗಿ ಉಳಿಸಿಕೊಂಡಿದೆ ಎಂದು ಗೊಟಗೋಡಿ ಜನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಆನಂದಪ್ಪ ಬಿ.ಎಚ್. (ಜೋಗಿ) ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಲೆ ಮತ್ತು ಜನಪದ ಮಂಟಪ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ "ಬುಡಕಟ್ಟು ಜೋಗಿ ಸಮುದಾಯದ ಅಸ್ಮಿತೆ" ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಜೋಗಿ ಸಮುದಾಯದಲ್ಲಿ 27 ಉಪಪಂಗಡಗಳಿದ್ದು, ಈ ಸಮುದಾಯದವರು ಜನಪದ ಕಲೆ, ಹಾಡುಗಳು ಹಾಗೂ ಸಂಸ್ಕೃತಿಯ ಮೂಲಕ ನಾಡು-ನುಡಿ, ನೆಲ-ಜಲ ಮತ್ತು ಜೀವನ ಮೌಲ್ಯಗಳನ್ನು ಉಳಿಸಿಕೊಂಡಿದ್ದಾರೆ. ಅವರ ಪರಂಪರೆಯ ಜ್ಞಾನ ಹಾಗೂ ಜನಪದ ಸಾಹಿತ್ಯವು ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಜೋಗಿ ಕಲಾವಿದರ ಜನಪದ ಕಲೆ, ವೇಷಭೂಷಣ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಿ ಬೆಳೆಸಲು ಸರ್ಕಾರ ಹಾಗೂ ಸಮಾಜದಿಂದ ಹೆಚ್ಚಿನ ಸಹಕಾರ, ಪ್ರೋತ್ಸಾಹ ಮತ್ತು ಸಂರಕ್ಷಣೆ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಕೋಶಾಧ್ಯಕ್ಷ ಸತೀಶ ತುರುವಮರಿ ವಹಿಸಿ ಮಾತನಾಡಿ, ಜನಪದ ಸಾಹಿತ್ಯವು ಸಮಾಜದ ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದ್ದು, ಜೋಗಿ ಸಮುದಾಯದ ಕೊಡುಗೆ ವಿಶಿಷ್ಟವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 2025-26ನೇ ಸಾಲಿನ ಕಲೆ ಮತ್ತು ಜನಪದ ಮಂಟಪದ ಸಲಹಾ ಸಮಿತಿ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜಯಶ್ರೀ ಪಾಟೀಲ ಪ್ರಾರ್ಥಿಸಿದರು. ಭೀಮಪ್ಪ ಖಟಾವಿ ಸ್ವಾಗತಿಸಿದರು. ಡಾ. ಮಹೇಶ್ ಧ. ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿ, ಶ್ರೀನಿವಾಸ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಆರ್.ಎಸ್. ಬಾಳನಗೌಡರ, ಮೋಹನ ಪಾಟೀಲ, ಗಣಪತಿ ಬಡಿಗೇರ, ಲಾಲಸಾಬ್ ಬೂದಿಹಾಳ, ಕಲ್ಲನಗೌಡ ಸಿದ್ದಾಪೂರ, ಡಾ. ವೀಣಾ ಬಿರಾದಾರ, ಶ್ರೀಮತಿ ಶೋಭಾ ಸಜ್ಜನ, ಸದಾಶಿವ ಚೌಶೆಟ್ಟಿ, ಪ್ರಕಾಶ ಮಲ್ಲಿಗವಾಡ, ಬಿ.ಎಂ. ಈಳಿಗೇರ, ಶಿವಣ್ಣ ಬೆಂಗೇರಿ, ಸಿದ್ದರಾಮ ಹಿಪ್ಪರಗಿ, ಮಡಿವಾಳಪ್ಪ ಹೆಗ್ಗೇರಿ, ಎಂ.ಜಿ. ವಸ್ತ್ರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು 