ಲೋಕದರ್ಶನ ವರದಿ
ಕವಿ ಸಂಘದ ಚುನಾವಣೆ: ಪಾಪು ಬಳಗ ಕಚೇರಿ ಉದ್ಘಾಟನೆ
ಧಾರವಾಡ 15: ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯ ಕ್ಷಮತೆ ಕುಗ್ಗುತ್ತಿರುವ ಈ ಸಂದರ್ಭದಲ್ಲಿ ಅದರ ಗತವೈಭವವನ್ನು ಮರುಕಳಿಸಲು ಬದಲಾವಣೆಯ ಪರ್ವದ ಅವಶ್ಯಕತೆಯನ್ನು ಮತದಾರರು ಅರಿತಿರುವರು. ಈ ಬಾರಿ ಚುನಾವಣೆಯಲ್ಲಿ ಮೋಹನ ಲಿಂಬಿಕಾಯಿ ಮತ್ತು ಪ್ರಕಾಶ ಉಡಿಕೇರಿ ಅವರ ತಂಡಕ್ಕೆ ಮತ ನೀಡುವ ಮೂಲಕ ಸಂಘದ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಶಕ್ತಿ ತುಂಬುವರು ಎಂದು ಪಿ.ಸಿ.ಜಾಬಿನ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎಸ್.ಸಿ ಹಿರೇಮಠ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯ ಪ್ರಯುಕ್ತ ಪಾಪು ಅಭಿಮಾನಿ ಬಳಗದ ಕೆಂಪಗೆರಿಯ ಹೇಮಾ ನಿಲಯದಲ್ಲಿ ಚುನಾವಣಾ ಕಚೇರಿಯ ಉದ್ಘಾಟನೆ ಮಾಡಿ ಮಾತನಾಡುತ್ತಾ ಉತ್ತರ ಕರ್ನಾಟಕ ಗಂಡುಮೆಟ್ಟಿದ ನೆಲದ ಕರ್ನಾಟಕದ ಹೆಮ್ಮೆಯ ಸಂಘದಿಂದ ಅನೇಕ ಸಾಹಿತಿಗಳು, ದಿಗ್ಗಜರು, ಹಾಕಿಕೊಟ್ಟ ಸೇವೆಗಳು ಮರೆಮಾಚುತ್ತಾ ಸೀಮಿತ ಹಂತಕ್ಕೆ ತಲುಪುತ್ತಿವೆ. ಇದರಿಂದ ಮಹತ್ತರ ಸಂಸ್ಥೆ ಸೋರಗುತ್ತಿದೆ. ಪಾಟೀಲ ಪುಟ್ಟಪ್ಪ ಅವರ ದೇಯೋದ್ದೇಶದೊಂದಿಗೆ ಚುನಾವಣೆ ಎದುರಿಸುತ್ತಿರುವ ಪಾಪು ಅಭಿಮಾನಿ ಬಳಗಕ್ಕೆ ಮತದಾರರು ಬೆಂಬಲಿಸಬೇಕು. ಹೊಸ ಮನ್ವಂತರಕ್ಕೆ ಕಾರಣರಾಗಬೇಕು ಎಂದು ಹೇಳಿದರು.
ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೆಟ್ಟಿ ಮಾತನಾಡಿ ಪಾಪು ಅಭಿಮಾನಿಗಳ ಬಳಗಕ್ಕೆ ಮತದಾರರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಾವು ಎಲ್ಲರು ಸಹಕಾರತ್ವದಡಿಯಲ್ಲಿ ಕಾರ್ಯ ಮಾಡಲು ವಿನಂತಿ. ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡತ್ವದ ಸಂಘ, ಇದು ಪಕ್ಷಾತೀತ ಮತ್ತು ಜಾತ್ಯಾಶತೀತ ಮನೋಭಾವನೆದ ಸಂಘ. ಇಂತಹ ಸಂಘದ ಈ ಚುನಾವಣೆಯಲ್ಲಿ ಪಕ್ಷಾತೀತ ಮತ್ತು ಜಾತ್ಯಾತೀತ ಪಾಪು ಅಭಿಮಾನಿ ಬಳಗದ ಮೋಹನ ಲಿಂಬಿಕಾಯಿ ಮತ್ತು ಪ್ರಕಾಶ ಉಡಿಕೇರಿ ಅವರ ತಂಡ ಉತ್ತಮ ಕಾರ್ಯ ಮಾಡುವ ಭರವಸೆಯನ್ನು ಮತದಾರರು ವ್ಯಕ್ತಪಡಿಸುತ್ತಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯ-ಚಟುವಟಿಕೆಗಳು ಸೀಮಿತಗೊಳ್ಳುತ್ತಿದೆ. 136 ವರ್ಷದ ಇತಿಹಾಸದ ಸಂಘಕ್ಕೆ ನಾಡಿನ ಪ್ರಮುಖರು, ಸಾಹಿತಿಗಳು, ಯುವ ಬರಹಗಾರು, ವ್ಯಾಪಾರಸ್ಥರು, ಎಲ್ಲರು ಹಿರಿಯರು, ಕಿರಿಯರ ಸಭಿಕ್ಷೆಯಿಂದ ಬಹಳಷ್ಟು ವಿಚಾರಮಾಡಿ ನಾವು ಚುನಾವಣೆಗೆ ಸ್ಪರ್ಧಿಸಿದೇವೆ. ಎಲ್ಲಾ ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಎದುರಿಸೋಣ ಮತ್ತು ಚುನಾವಣೆಯನ್ನು ಚುನಾವಣೆಯಾಗಿ ಸ್ವೀಕರಿಸೋಣ. ಅಲ್ಲದೇ ಮತದಾರರಲ್ಲಿ ಕಡ್ಡಾಯವಾಗಿ ಮತ ಚಲಾಯಿಸಲು ವಿನಂತಿಸೋಣ ಪಾಪು ಬಳಗವನ್ನು ಗೆಲ್ಲಿಸಲು ವಿನಿಂತಿಸಿಕೊಳ್ಳೋಣ ಎಂದು ಹೇಳಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಶರಣಪ್ಪ ಕೊಟಗಿ, ಕೋಸಾಧ್ಯಕ್ಷ ಸ್ಥಾನದ ಅಭ್ಯರ್ಥಿ ವೀರಣ್ಣ ಯಳಲ್ಲಿ ಮಾತನಾಡಿದರು
ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಪ್ರಕಾಶ ಉಡಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಸ್ಥಾನದ ಅಭ್ಯರ್ಥಿ ಡಾ ರತ್ನಾ ಐರಸಂಗ ಸ್ವಾಗತಿಸದರು. ಸಹ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಧ್ಯಕ್ಷ ನಾರಾಯಣ ಭಜಂತ್ರಿ ವಂದಿಸಿದರು.
ಸ್ಪರ್ಧಿಗಳಾದ ಎಸ್.ಎಮ್ ದಾನಪಗೌಡರ, ಪ್ರಭು ಹಂಚಿನಾಳ, ಪ್ರಭು ಕುಂದರಗಿ, ಡಾ, ವಿಶ್ವನಾಥ ಚಿಂತಾಮಣಿ, ವಿಶ್ವನಾಥ ಅಮರಶೆಟ್ಟಿ, ಆನಂದ ಏಳಗಿ ಇದ್ದರು.
ಈ ಕಾರ್ಯಕ್ರಮದಲ್ಲಿ ಶಾಂತಣ್ಣ ಕಲಿವಾಳ, ವೆಂಕನಗೌಡ ಪಾಟೀಲ, ಎಸ್.ಎಸ್. ಕರಗುದರಿ, ಎಮ್..ಬಿ ಕಟ್ಟಿ, ಶಾಂತವೀರ ಬೆಟಗೇರಿ, ಪ್ರಭಾಕರ ಲಗಮ್ಮಣನವರ, ಎಸ್,ಬಿ,ಕೇಸರಿ, ಮಹೇಶ ಪರಸಣ್ಣವರ, ರಾಜುಸಿಂಗ ಹಲವಾಯಿ, ಈಶ್ವರ ಕತ್ತಿ, ಬುಡಾನಖಾನ್ಸರ್, ಆರ್,ಎಸ್ ಬೋಸಲೆ, ಚನ್ನವೀರಗೌಡರ, ಕಿರಣ ಸಿದ್ದಾಪೂರ, ಮಕಬುಲ್ ಹುಣಸಿಕಟ್ಟಿ, ಜಗದೀಶ ಗುಂಡಕಲ್ಲಮಠ, ಇದ್ದರು.