ಸಮೀಕ್ಷೆಯಲ್ಲಿ ಧರ್ಮ ಮತ್ತು ಜಾತಿ ಗಮನಿಸಿ ಮುಸ್ಲಿಮರು ಹೆಸರನ್ನು ನಮೂದಿಸಿ: ಲಾಯಕ ಅಲಿ
Please consider religion and caste in the survey and include the names of Muslims: Layaka Ali
ಕೊಪ್ಪಳ 22: ಕರ್ನಾಟಕ ರಾಜ್ಯ ಸರ್ಕಾರ ಸೆಪ್ಟೆಂಬರ್ 22 ಇಂದಿನಿಂದ ರಾಜ್ಯದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಾದಲ್ಲಿ ಮುಸ್ಲಿಂ ಸಮುದಾಯದ ಸಮಾಜ ಬಾಂಧವರು ಧರ್ಮದ ಕಾಲಮೀ ನಲ್ಲಿ ಇಸ್ಲಾಂ ಮತ್ತು ಜಾತಿ ಕಾಲಮಿನಲ್ಲಿ ಮುಸ್ಲಿಂ ಎಂದು ನಮೂದಿಸಿ ಎಂದು ಸಮಾಜ ದ ಹಿರಿಯ ಮುಖಂಡ ನಿವೃತ್ತ ಉಪ ತಹಶೀಲ್ದಾರರು ಹಾಗೂ ರಾಬಿತಾ, ಏ, ಮಿಲ್ಲತ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾದ ಎಂ ಲಾಯಕ್ ಅಲಿ ಪ್ರಕಟಣೆಯ ಮೂಲಕ ಮುಸ್ಲಿಂ ಸಮುದಾಯದ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು ಮುಸ್ಲಿಮರು ಜಾಗೃತಿ ವಹಿಸಿ ಸಮೀಕ್ಷೆ ಯಲ್ಲಿ ತಮ್ಮ ಹೆಸರು ಮತ್ತು ಜಾತಿ ನಿಗದಿತ ಕಾಲಮಿನಲ್ಲಿ ಸರಿಯಾದ ರೀತಿಯಲ್ಲಿ ನಮೂದಿಸಿ, ಮತ್ತು ಸರ್ಕಾರ ನಡೆಸಿರುವ ಈ ಸಮೀಕ್ಷಾ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ವಿವರಿಸಿದರು, ಸದ್ರಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ವಿವಿಧ ವರ್ಗಗಳ ಮತ್ತು ಜಾತಿಗಳ ಹಿಂದುಳಿದ ಜನ ಗಳಿಗೆ ಸೌಲಭ್ಯಗಳನ್ನು ಒದಗಿಸುವ ಬಹುಮುಖ್ಯವಾದ ಸಮೀಕ್ಷೆ ಯಾಗಿದೆ ಇದನ್ನು ನೆನಪಿನಲ್ಲಿಟ್ಟುಕೊಂಡು ಮುಸ್ಲಿಂ ಸಮಾಜ ದ ಪ್ರತಿಯೊಬ್ಬ ವ್ಯಕ್ತಿಯು ಸಮೀಕ್ಷೆಯಲ್ಲಿ ಪಾಲ್ಗೊಂಡು ಸಮೀಕ್ಷೆಯ 60 ಕಾಲಂ ಗಳನ್ನು ಯಾವುದೇ ತಪ್ಪು, ಸಂಭವಿಸಿದಂತೆ ನಿಖರವಾಗಿ ವಿವರಗಳನ್ನು ನೋಂದಾಯಿಸಿ ,ಮುಖ್ಯವಾಗಿ ಧರ್ಮ ಮತ್ತು ಜಾತಿಯ ಕಾಲಂಗಳಲ್ಲಿ ಇಸ್ಲಾಂ ಮತ್ತು ಮುಸ್ಲಿಂ ಎಂಬುವುದು ಸರಿಯಾದ ರೀತಿಯಲ್ಲಿ ಕಡ್ಡಾಯವಾಗಿ ನಮೂದಿಸಿ ಸದರಿ ಸಮೀಕ್ಷ ಕಾರ್ಯ ಸಪ್ಟಂಬರ್ 22 ರಿಂದ ಅಕ್ಟೋಬರ್ 7 ರ ವರೆಗೆ ನಡೆಯಲಿದ್ದು ಇದರ ಸದುಪಯೋಗ ಪಡೆದುಕೊಂಡು ಜಾಗೃತೆಯಿಂದ ತಮ್ಮ ಮಾಹಿತಿ ನೀಡಬೇಕೆಂದು ಕೊಪ್ಪಳ ನಗರದ ಮುಸ್ಲಿಂ ಸಮಾಜದ ಹಿರಿಯ ಮುಖಂಡ ನಿವೃತ ಉಪ ತಹ ಸಿಲ್ದಾರರು ಹಾಗೂ ರಾಬಿತಾ, ಏ, ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಂ ಲಾಯಕ್ ಅಲಿ ಪ್ರಕಟಣೆ ಮೂಲಕ ತಿಳಿಸಿ ಮುಸ್ಲಿಂ ಸಮಾಜ ಬಾಂಧವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 