43 ಮಿಲಿಯನ್ ಜನತೆಯಿಂದ ಪಿಂಕ್ ಬಾಲ್ ಟೆಸ್ಟ್ ವೀಕ್ಷಣೆ
ಮುಂಬೈ, ಮಾ 24, ಕಳೆದ ನವೆಂಬರ್ ನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ದೇಶದ ಮೊದಲ ಗುಲಾಬಿ ಚೆಂಡಿನ ಟೆಸ್ಟ್ (ಪಿಂಕ್ ಚೆಂಡು) ಅನ್ನು 43 ಮಿಲಿಯನ್ ಜನ ಹಾಗೂ 2 ಬಿಲಿಯನ್ ನಿಮಿಷಗಳು ವೀಕ್ಷಿಸಲಾಗಿದೆ ಎಂದು ಬಾರ್ಕ್ ಹೇಳಿದೆ. ಇದಲ್ಲದೆ 2018-19ನೇ ಸಾಲಿನಲ್ಲಿ ನಡೆದ ಯಾವುದೇ ಟೆಸ್ಟ್ ಪಂದ್ಯವೊಂದರ ಮೊದಲ ದಿನದ ಅತ್ಯಧಿಕ ವೀಕ್ಷಣೆ ಇದಾಗಿದೆ ಎಂದು ವೀಕ್ಷಣೆ ರೇಟಿಂಗ್ ನೀಡುವ ಬಾರ್ಕ್ ತಿಳಿಸಿದೆ.ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಆಸ್ಟ್ರೇಲಿಯಾದಲ್ಲಿ ಹೊನಲು ಬೆಳಕಿನ ಟೆಸ್ಟ್ ಆಡಲು ತಂಡ ನಿರಾಕರಿಸಿದ ಬಳಿಕ ಪ್ರಾಯೋಗಿಕವಾಗಿ ಭಾರತವು ಗುಲಾಬಿ ಚೆಂಡಿನ ಸವಾಲನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿತ್ತು.ಹಲವು ನಿರೀಕ್ಷೆ ಹಾಗೂ ಅಪಾರ ಪ್ರೇಕ್ಷಕರೆದುರು ವಿರಾಟ್ ಕೊಹ್ಲಿ ಸಾರಥ್ಯದ ಭಾರತ ಮತ್ತು ಬಾಂಗ್ಲಾದೇಶ ನಡುವೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಹೊನಲು ಬೆಳಕಿನ ದ್ವಿತೀಯ ಟೆಸ್ಟ್ ನಲ್ಲಿ ಪಿಂಕ್ ಚೆಂಡನ್ನು ಬಳಸಲಾಗಿತ್ತು. ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಭಾಗವಾಗಿದ್ದ ಈ ಟೆಸ್ಟ್, ಮೂರನೇ ದಿನಕ್ಕೆ ಮುಕ್ತಾಯಗೊಂಡಿತ್ತು. ಆತಿಥೇಯ ಭಾರತ ಇನಿಂಗ್ಸ್ ಹಾಗೂ 46 ರನ್ ಗಳಿಂದ ಗೆದ್ದು 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 