ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ಫಿಸಿಯೋಥೆರಪಿ ಶಿಬಿರ
Physiotherapy camp organized by Rotary Club of Karwar
ಕಾರವಾರ 10: ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ವಿಶ್ವ ಭೌತಚಿಕಿತ್ಸೆ ದಿನದ (ವರ್ಲ್ಡ ಫಿಸಿಯೋಥೆರಪಿ ಡೇ) ಅಂಗವಾಗಿ ಉಚಿತವಾಗಿ ಆಸನದ ಭಂಗಿ ಹಾಗೂ ಬೆನ್ನುಮೂಳೆ ಆರೋಗ್ಯ ಶಿಬಿರವನ್ನು “ಸ್ಪಿನ್ ಕ್ಲಿನಿಕ್ ಫಿಸಿಯೋಥೇರಪಿ ್ಘ ಚೈಲ್ಡ್ ಡೆವಲೊಪ್‌ಮೆಂಟ್ ಸೆಂಟರ್’ ಮಾಜಾಳಿಯಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕಾರವಾರ ಹಾಗೂ ಗೋವಾ ರಾಜ್ಯದ ಸುಮಾರು 65 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರಾರ್ಥಿಗಳು ಮುಖ್ಯ ವೈದ್ಯರು ಮತ್ತು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಡಾಽಽ ಅರ್ಜುನು ಉಪಾಧ್ಯಾಯಾ ರವರಿಂದ ತಮ್ಮ ಆರೋಗ್ಯವನ್ನು ತಪಾಶಿಸಿಕೊಂಡು ವೈದ್ಯರಿಂದ ಚಿಕಿತ್ಸೆ ಹಾಗೂ ಸಲಹೆಯನ್ನು ಪಡೆದುಕೊಂಡರು. ಕಾರ್ಯಕ್ರಮವನ್ನು ದೀಪಬೆಳಗಿಸುವುದರೊಂದಿಗೆ ಪ್ರಾರಂಭಿಸಲಾಯಿತು.
ಶಿಬಿರದಲ್ಲಿ ಡಾಽಽ ಲಿಯಾಂಡರ್ ಲಿಯೋ ಲೂವಿಸ್, ಡಾಽಽ ಪೂಜಾ ನಾಯ್ಕ ಮತ್ತು ಸಹಾಯಕಳಾಗಿ ಸಂಜನಾರವರು ಭಾಗವಹಿಸಿ ಸಹಕರಿಸಿದರು. ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ವಿನೋದ ಕೊಠಾರಕರ, ಖಜಾಂಚಿ ಯೊಗೇಶ ಭಂಡಾರಕರ, ಸದಸ್ಯರಾದ ಲಿಯೋ ಲುವಿಸ್, ಮನೋಹರ ಕಾಂಬ್ಳಿ, ಅಮರನಾಥ ಶೇಟ್ಟಿ, ನಾಗರಾಜ ಜೋಶಿ, ರಾಘವೇಂದ್ರ ಪ್ರಭು, ಕೃಷ್ಣಾ ಕೆಳಸ್ಕರ, ಅನಮೋಲ ರೇವಣಕರ, ಗುರುದತ್ತ ಬಂಟ, ಗುರುರಾಜಯ ಭಟ, ಆನಂದ ನಾಯ್ಕ, ಪ್ರಶಾಂತ ಕೊಡಾರಕರ, ಹಾಗೂ ಇನ್ನರ್‌ವ್ಹೀಲ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 