ಆಥರ್ಿಕ ನೆರವಿಗೆ ಫೋಟೋಗ್ರಾಫರಗಳ ಮನವಿ

ಧಾರವಾಡ 09: ಕೊರೋನಾ ವೈರಸ್ ನಿಂದ ವಿಶ್ವವೇ  ತಲ್ಲಣಗೊಂಡು  ಜನಜೀವನ  ಅಕ್ಷರಶಃ  ತತ್ತರಿಸಿದೆ. ಕಳೆದೆರಡು ತಿಂಗಳಗಳಿಂದ ಲಾಕ್ ಡೌನ್ ಇರುವುದರಿಂದ ಹುಬ್ಬಳ್ಳಿ ಧಾರವಾಡ ಅವಳಿನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರಿಸುಮಾರು 200 ಜನರು ತಮ್ಮ ಜೀವನಾಧಾರಕ್ಕಾಗಿ ಛಾಯಾಗ್ರಹಣ ವೃತ್ತಿಯಲ್ಲಿ ತೊಡಗಿಕೊಂಡಿರುವವರು ಸಂಕಷ್ಟಕ್ಕೆ ಗುರಿಯಾಗುವಂತೆ ಮಾಡಿದೆ. ಹೀಗಾಗಿ ಛಾಯಾಗ್ರಹಕ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಆಥರ್ಿಕ ಪರಿಹಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಧಾರವಾಡ ಫೋಟೋ ಮತ್ತು ವಿಡಿಯೋ ವಿಡಿಯೋಗ್ರಾಫಸರ್್ ಸಂಘದಿಂದ ಮನವಿ ಸಲ್ಲಿಸಿದರು.

ಮಾಚರ್್ ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಮದುವೆ ಹಾಗೂ ಇನ್ನಿತರ ಪ್ರಮುಖ ಸಮಾರಂಭಗಳು ಹೆಚ್ಚಾಗಿ ಇರುತ್ತವೆ, ಈ ಮೂರು ತಿಂಗಳುಗಳನ್ನು ಹೊರತು ಪಡಿಸಿ ಇನ್ನುಳಿದ ದಿನಗಳಲ್ಲಿ ಹೆಚ್ಚಾಗಿ ಯಾವುದೇ ರೀತಿಯ ಸಮಾರಂಭಗಳು ಇರುವುದಿಲ್ಲ, ಆದರೆ ದುರಾದೃಷ್ಟದಿಂದ ಫೆಬ್ರುವರಿ ತಿಂಗಳ ಕೊನೆಯಿಂದ ಕೊರೊನಾ ವೈರಸ್ನ ತೊಂದರೆಯಿಂದಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜನಸಂದಣಿ ಆಗುವುದನ್ನು ತಡೆಯಲು ಸಕರ್ಾರವು ಮದುವೆ ಮತ್ತು ಇನ್ನಿತರ ಸಮಾರಂಭಗಳನ್ನು ಸರಳವಾಗಿ ಆಚರಿಸಿಕೊಳ್ಳುವಂತೆ ಸೂಚಿಸಿತ್ತು,

ಅದಲ್ಲದೇ ಲಾಕ್ ಡೌನ್ ಸಮಯದಲ್ಲಿ ಮುಂಗಡವಾಗಿ ಕಾಯ್ದುರಿಸಲಾದಂತಹ ಸಮಾರಂಭಗಳೆಲ್ಲವೂ ರದ್ದಾಗಿದ್ದವು, ಈಗ ಲಾಕ್ ಡೌನ್ ಅವಧಿ ಮುಗಿದ ನಂತರವೂ ಯಾವುದೇ ರೀತಿಯ ಸಭೆ ಸಮಾರಂಭಗಳು ನಡೆಯುತ್ತಿಲ್ಲ,

ಮತ್ತು ಶಾಲಾ ಕಾಲೇಜುಗಳಿಗೂ ರಜೆ ಇರುವುದರಿಂದ ನಮಗೆ ಯಾವುದೇ ರೀತಿಯ ಕೆಲಸವಿಲ್ಲದೆ ಛಾಯಾಗ್ರಹಣ ವೃತ್ತಿಯನ್ನೇ ನಂಬಿಕೊಂಡಿರುವ ನಾವು ಮತ್ತು ನಮ್ಮ ಕುಟುಂಬದವರು ಬೀದಿಗೆ ಬರುವ ಪರಿಸ್ಥಿತಿಯುಂಟಾಗಿದೆ. ಈ ಸಮಯದಲ್ಲಿ ಸಕರ್ಾರವು ನಮ್ಮಂತಹ ಅಸಾಹಾಯಕರ ಪರಿಹಾರ ನೀಡಬೇಕೆಂದು ಫೋಟೋಗ್ರಾಫರುಗಳ ಸಂಘದ ಅಧ್ಯಕ್ಷ ಅನಿಲ್ ಕಲಾಲ್, ಸಿ.ಎಸ್.ಪಾಟೀಲ, ಮಹದೇವ ಪಾಟೀಲ,  ಹಿರೇಮಠ ಮನವಿ ಸಲ್ಲಿಸಿದರು.