ಪರಿಸರದ ಬಗ್ಗೆ ಜನರಲ್ಲಿ ಕಾಳಜಿ ಮೂಡಬೇಕು: ಯಾದಗಿರಿ
People should be concerned about the environment: Yadagiri
ತಾಳಿಕೋಟೆ 08: ಇರುವುದೊಂದೇ ಭೂಮಿಯನ್ನು ನಮಗಾಗಿ ಅಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಗೆ ಉಳಿಸುವುದಕ್ಕಾಗಿ ಈ ಪರಿಸರ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕಿದೆ ಎಂದು ಸರ್ಕಾರಿ ಪ್ರೌಢಶಾಲೆ ಆಲೂರ ನ ಮುಖ್ಯ ಶಿಕ್ಷಕ ವಿದ್ಯಾಧರ ಯಾತಗಿರಿ ಹೇಳಿದರು. ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ( ಕನ್ನಡ ಮಾದರಿ ಶಾಲೆ) ಆವರಣದಲ್ಲಿ ಹಸಿರು ಸಂಪದ ಬಳಗ, ಅರಣ ಇಲಾಖೆ ಹಾಗೂ ಪುರಸಭೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವಪರಿಸರ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಭಾನುವಾರ ಮಾತನಾಡಿದರು.
ನಮ್ಮ ಐಷಾರಾಮಿ ಜೀವನಕ್ಕಾಗಿ ಈ ಭೂಮಿಯನ್ನು ಸಂಪನ್ಮೂಲಗಳನ್ನು ನಾಶ ಮಾಡುತ್ತಿದ್ದೇವೆ.. ಇರುವಷ್ಟನ್ನಾದರೂ ರಕ್ಷಿಸಬೇಕಿದೆ. ನಿಸರ್ಗದ ನಡುವಿನ ಪ್ರತಿ ಜೀವಿಗಳ ನಡುವಿನ ಪರಸ್ಪರ ಸಹಸಂಬಂಧ, ಅವಲಂಭನೆಯಿದೆ. ಅವಲಂಬನೆಯ ಒಂದು ಕೊಂಡಿ ಕಳಚಿದರೂ ಹಲವು ಜೀವಪ್ರಬೇಧಗಳು ನಾಶವಾಗುತ್ತ ಹೋಗಿ, ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತವೆ ಎಂದರು. ಪ್ರಕೃತಿಯಲ್ಲಿ ಪರ್ಯಾಯ ಶಕ್ತಿಮೂಲಗಳ ಬಳಕೆಯಾಗಬೇಕು. ಪರಿಸರ ರಕ್ಷಣೆಯ ಹತ್ತು ಹಲವಾರು ದಿನಗಳಿದ್ದು ಅವುಗಳು ದಿನದರ್ಶಿಕೆಯಲ್ಲಿ ಮುದ್ರಿತವಾಗುವಂತೆ ಮಾಡಿ ಅವುಗಳನ್ನು ಮಕ್ಕಳಿಗೆ ಅದರ ಉದ್ದೇಶವನ್ನು ತಿಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಅರಣ್ಯ ಇಲಾಖೆಯ ವೃಕ್ಷ ರಕ್ಷಕ ಮಹಾಂತೇಶ ಹಾದಿಮನಿ, ಅರಣ್ಯ ಇಲಾಖೆಯಿಂದ ರೈತರಿಗೆ ಕೃಷಿ ಅರಣ್ಯ ಯೋಜನೆಯಿದ್ದು ಕಡಿಮೆ ದರದಲ್ಲಿ ಸಸಿಗಳು ಲಭ್ಯವಿದ್ದು ಅದರ ಸದುಪಯೋಗ ಪಡಿಸಿಕೊಳ್ಳಿ, ಎಂದರು.ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಫಿರೋಜ ಮುಲ್ಲಾಮಾತನಾಡಿ, ಪಟ್ಟಣವನ್ನು ಸ್ವಚ್ಛ, ಆರೋಗ್ಯವಂತ ಹಾಗೂ ಮಾದರಿ ಪಟ್ಟಣವನ್ನಾಗಿಸಲು ಪುರಸಭೆಯೊಂದಿಗೆ ಕೈಜೋಡಿಸಿ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ ಅಧ್ಯಕ್ಷತೆಯನ್ನು ವಹಿಸಿದ್ದರು. ಹಸಿರು ಸಮಪದ ಬಳಗದ ಅಧ್ಯಕ್ಷ ಡಾ.ವಿ.ಎಸ್.ಕಾರ್ಚಿ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಕೋಳೂರ ಮಾತನಾಡಿದರು.ಸಿದ್ದು ಕರಡಿ ನಿರ್ವಹಿಸಿದರು. ಗುಂಡೂರಾವ್ ಧನಪಾಲ ಸ್ವಾಗತಿಸಿದರು. ಅಪ್ಪಾಸಾಹೇಬಗೌಡ ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಶಿನಾಥ ಸಜ್ಜನ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಬಳಗದ ಪದಾಧಿಕಾರಿಗಳಾದ ಆರ್.ಎಸ್.ಪಾಟೀಲ ಕೂಚಬಾಳ, ಕಾಶಿನಾಥ ಮುರಾಳ, ಪ್ರಭುಗೌಡ ಮದರಕಲ್ಲ, ಅಲ್ಲಾಭಕ್ಷ ನಮಾಜಕಟ್ಟಿ, ಡಾ.ಆನಂದ ಭಟ್ಟ, ಡಾ.ಶ್ರೀಶೈಲ ಹುಕ್ಕೇರಿ, ಡಾ. ನಜೀರ ಕೊಳ್ಯಾಳ,ರಾಜು ಸೊಂಡೂರ, ಡಾ.ಗುರು ಚಿತ್ತರಗಿ, ಸಿ.ಎಂ.ಹಿರೇಮಠ, ಅನಿತಾ ಸಜ್ಜನ, ದ್ಯಾಮನಗೌಡ ಪಾಟೀಲ, ಸಂಗನಗೌಡ ಅಸ್ಕಿ, ರುದ್ರಮ್ಮ ದೇಸಾಯಿ,ದಿನಕರ ಜೋಶಿ, ಶಫೀಕ ಇನಾಮದಾರ, ಪ್ರಕಾಶ ಸುರಪುರ, ಟಿ.ಸಿ.ಸಜ್ಜನ, ಬಸವರಾಜ ಬಲಕಲ್ಲ, ಪ್ರವೀಣ ಸರ್, ಸಾಹಿಲ ಮುರಾಳ, ಹುಸೇನ ಪಟೇಲ,ರಾಜು ವಿಜಾಪುರ, ಪ್ರಶಾಂತ ಜನಾದ್ರಿ, ಪ್ರಶಾಂತ ಅಂಬಿಗೆರ, ರಾಜು ಅಲ್ಲಾಪುರ, ಬಾಬುಸಾಬ ವಠಾರ, ಎಂ.ಎಂ.ಅತ್ತಾರ, ಶರಣು ಕಸ್ತೂರಿ, ಗೋಪಾಲ ಕಟ್ಟಿಮನಿ, ಸಂಚಾಲಕ ಎಸ್.ಎಸ್.ಗಡೇದ ಇತರರು ಇದ್ದರು.
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ 