ಬೂತ್ ಮಟ್ಟದಲ್ಲಿ ಕಠಿಣ ಪರಿಶ್ರಮದಿಂದ ಪಕ್ಷ ಸಂಘಟಿಸಬೇಕು: ಶಾಸಕ ಡಾ. ಚಂದ್ರು ಲಮಾಣಿ

ಶಿರಹಟ್ಟಿ 05: ನಮ್ಮ ದೇಶವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಿದ ಭಾರತ ಮಾತೆಯ ಪುತ್ರ, ಹೆಮ್ಮೆಯ ನಾಯಕ ನರೆಂದ್ರ ಮೋದಿಯಂತಹ ಮಹಾನ್ ವ್ಯಕ್ತಿ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ. ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಶಾಸಕನನ್ನಾಗಿ ಮಾಡಿದ್ದು ಬಿಜೆಪಿ ಪಕ್ಷ, ಕಟ್ಟಕಡೆಯ ವ್ಯಕ್ತಿಗೂ ಉನ್ನತ ಹುದ್ದೆಗಳನ್ನು ನೀಡುವ ಎಕೈಕ ಪಕ್ಷ ಬಿಜೆಪಿ ಪಕ್ಷವಾಗಿದೆ. ನಮ್ಮ ಭಾರತ ದೇಶವನ್ನು ಇನ್ನೂ ಸುಭದ್ರಗೊಳಿಸಲು ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸಿ ಮೋದಿಯವರ ಕೈಬಲಪಡಿಸಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಂಸದರಾಗಿ ಆಯ್ಕೆ ಮಾಡಲು ಪಕ್ಷದ ಪ್ರತಿಯೂಬ್ಬ ಕಾರ್ಯಕರ್ತರು ಕೆಲಸ ಮಾಡಿ ಅವರನ್ನು ಕೇಂದ್ರದ ಮಂತ್ರಿಯನ್ನಾಗಿಸಲು ಶ್ರಮವಹಿಸಿ ಎಂದು  ಡಾ. ಚಂದ್ರು ಲಮಾಣಿ ಹೇಳಿದರು. 

ಅವರು ಪಟ್ಟಣದಲ್ಲಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಆಯ್ಕೆ ಹಾಗೂ ಆದೇಶ ಪ್ರತಿ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್‌. ವಿ ಸಂಕನೂರ ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರು ತನ್ನ ಬೂತ್ ಮಟ್ಟದಲ್ಲಿ ಕಠಿಣ ಪರಿಶ್ರಮದಿಂದ ಪಕ್ಷ ಸಂಘಟಿಸಬೇಕು. ಮತದಾರರಲ್ಲಿ ದೇಶದ ಭವಿಷ್ಯ ನಿರ್ಮಾಣ ಮಾಡಲು ಪ್ರಧಾನಿ ಮೋದಿಯವರಿಗೆ ಮತ ನೀಡುವಂತೆ ಮನವಿ ಮಾಡಿದರು. ದೇಶದ ಅಭಿವೃದ್ಧಿಗಾಗಿ, ಆರ್ಥಿಕ ಬೆಳವಣಿಗೆಗಾಗಿ, ಜನರ ಹಿತಕ್ಕಾಗಿ, ವಿಶ್ವಗುರು ದೇಶವನ್ನಾಗಿಸಲು ಮತದಾರರು ಈ ಬಾರಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಮೋದಿಯವರ ಕೈ ಬಲಪಡಿಸಿ ಎಂದರು.  

ಈ ವೇಳೆ ರಾಜ್ಯ ಎಸ್‌.ಸಿ ಮೋರ್ಚಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಚಂದ್ರು ಲಮಾಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಘಟಕ ಅಧ್ಯಕ್ಷ ನಾಗರಾಜ ಲಕ್ಕುಂಡಿ ವಹಿಸಿದ್ದರು. ಕಾರ್ಯಕ್ರಮವನ್ನು ಬಸವರಾಜ ವಡವಿ ನಿರುಪಿಸಿದರು.  

ನಗರ ಘಟಕದ ಉಪಾಧ್ಯಕ್ಷರಾಗಿ ಸುಧೀರ ಜಮಖಂಡಿ, ಸುರೇಶ ಹವಳದ, ಮಂಜುನಾಥ ಸೊಂಟನೂರ, ಅನ್ನಪೂರ್ಣ ಕಟ್ಟೆಕಾರ, ಕಾರ್ಯದರ್ಶಿಗಳಾಗಿ ಅನೀಲ ಪಾಶ್ಚಪುರ, ಸಂತೋಷ ತೋಡೆಕಾರ, ಮಲ್ಲು ಕುದರಿ, ರಾಜು ಮಾತಾಡೆ, ವಿಜಯಲಕ್ಷ್ಮೀ ತಳವಾರ, ಕೋಶಾಧ್ಯಕ್ಷರಾಗಿ ಮಹೇಶ ಕಲ್ಲಪ್ಪನವರ, ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ರೂಪಾ ಪಾಶ್ಚಪುರ, ಪ್ರಧಾನ ಕಾರ್ಯದರ್ಶಿಗಳಾಗಿ ರೇಖಾ ಬೋರಶೆಟ್ಟರ, ಕಲಾವತಿ ನಾವ್ಹಿ, ಯುವ ಮೋರ್ಚಾದ ಅಧ್ಯಕ್ಷರಾಗಿ ಮಲ್ಲೇಶ ಕಬಾಡಿ, ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ ರಡ್ಡೇರ, ದೇವು ಪೂಜಾರ, ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ಶಿವನಂದ ಬಟ್ಟೂರು, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಿವಾಸ ಕಪಟಕರ, ವಿನೋದಕುಮಾರ ಕಪ್ಪತ್ತನವರ, ರೈತ ಮೋರ್ಚಾದ ಅಧ್ಯಕ್ಷರಾಗಿ ಜಗದೀಶ ತೇಲಿ, ಪ್ರಧಾನ ಕಾರ್ಯದರ್ಶಿಗಳಾಗಿ ರವಿ ಬೇಂದ್ರೆ, ಶಿವಪ್ಪ ತಳವಾರ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ಅಶ್ಪಾಕ್ ನಗಾರಿ, ಪ್ರಧಾನ ಕಾರ್ಯದರ್ಶಿಗಳಾಗಿ ಇಸ್ಮಾಯಿಲ್ ಶಿಗ್ಲಿ, ಹಜರತಲಿ ಇಟಗಿ, ಎಸ್‌.ಸಿ ಮೋರ್ಚಾದ ಅಧ್ಯಕ್ಷರಾಗಿ ಶರಣಪ್ಪ ಹರ್ತಿ, ಪ್ರಧಾನ ಕಾರ್ಯದರ್ಶಿಗಳಾಗಿ ರಾಜು ಗಾಮನಗಟ್ಟ್ಟಿ, ಎಸ್‌.ಟಿ ಮೋರ್ಚಾ ಅಧ್ಯಕ್ಷರಾಗಿ ಬಸವರಾಜ ತಳವಾರ, ಪ್ರಧಾನ ಕಾರ್ಯದರ್ಶಿಗಳಾಗಿ ಮೌನೇಶ ತಳವಾರ, ಸೊಮಶೇಖರ ಕಲಘಟಗಿ ಇವರನ್ನು ನೇಮಕ ಮಾಡಲಾಯಿತು. 

ಈ ಸಂದರ್ಭದಲ್ಲಿ  ಮಾಜಿ ತಾಪಂ ಅಧ್ಯಕ್ಷ ಜಾನು ಲಮಾಣಿ, ಜಿಲ್ಲಾ ಬೆಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ ರಟ್ಟಿಹಳ್ಳಿ ಬಿ.ಡಿ ಪಲ್ಲೇದ, ಮಹಿಳಾ ಮಂಡಲದ ಅಧ್ಯಕ್ಷೆ ನಂದಾ ಪಲ್ಲೇದ, ಯಲ್ಲಪ್ಪ ಇಂಗಳಗಿ, ಅಜ್ಜು ಕಪ್ಪತ್ತನವರ, ರೈತ ಮೋರ್ಚಾ ಮಂಡಲ ಅಧ್ಯಕ್ಷ ಶಿವಯ್ಯ ಮಠಪತಿ, ತಾಲುಕಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರವೀಣ ಪಾಟೀಲ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಕ್ಬರಸಾಬ ಯಾದಗೇರಿ, ಅಶೋಕ ವರವಿ ಸೇರಿದಂತೆ ನೊರಾರು ಕಾರ್ಯಕರ್ತರು ಉಪಸ್ಥಿತರಿದ್ದರು.