ಪರಕನಹಟ್ಟಿ ರೇಲ್ವೆ ನಿಲುಗಡೆ ಪೂಜಾ ಕಾರ್ಯಕ್ರಮ

ಪರಕನಹಟ್ಟಿ ರೇಲ್ವೆ ನಿಲುಗಡೆ ಪೂಜಾ ಕಾರ್ಯಕ್ರಮ  Parakanahatti Railway Station Pooja Program

ಲೋಕದರ್ಶನ ವರದಿ 

ಬೆಳಗಾವಿ 02: ಹುಕ್ಕೇರಿ ತಾಲ್ಲೂಕಿನ ಪರಕನಹಟ್ಟಿ ಗ್ರಾಮದ ರೇಲ್ವೆ ನಿಲ್ದಾಣದಲ್ಲಿ ಮಿರಜದಿಂದ ಹುಬ್ಬಳ್ಳಿಗೆ ಹೊರಡುವ (ಟ್ರೈನ ನಂಬರ್ 17331)  ರೇಲ್ವೆ ನಿಲುಗಡೆಯಾಗಿದು ಸಮಾಜ ಸೇವಕ ಅಶೋಕ್ ಚೌಗಲಾ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇಸಿದರು. 

ಹುಬ್ಬಳ್ಳಿಯಿಂದ ಮಿರಜ ಕಡೆಗೆ ಹೊರಡುವ (ಟ್ರೈನ್ ನಂಬರ (17332)  ರೇಲ್ವೆ ಮಧ್ಯಾಹ್ನ 3.57 ಗಂಟೆಗೆ ಮತ್ತು ಮಿರಜದಿಂದ ಕ್ಯಾಸರಲಾಕ್ ಕಡೆಗೆ ಹೊರಡುವ ರೇಲ್ವೆಯು (ಟ್ರೈನ್ ನಂಬರ (17333) ರೇಲ್ವೆ ಮಧ್ಯಾಹ್ನ 1.44 ಗಂಟೆಗೆ ಮತ್ತು ಕ್ಯಾಸರಲಾಕದಿಂದ ಮಿರಜ ಕಡೆಗೆ ಹೊರಡುವ (ಟ್ರೈನ ನಂಬರ 17334) ರೇಲ್ವೆಯು ರಾತ್ರಿ 9.33 ಗಂಟೆಗೆ ಪರಕನಹಟ್ಟಿ ಗ್ರಾಮದ ರೇಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ.  

ಪೂಜಾ ಕಾರ್ಯಕ್ರಮದಲ್ಲಿ ಕರಗುಪ್ಪಿ ಗ್ರಾಮದ ಸಮಾಜ ಸೇವಕ ಅಶೋಕ ಚೌಗಲಾ, ಮಲ್ಲಿಕಾರ್ಜುನ ಮಗದುಮ್ಮ, ದುಂಡಪ್ಪಾ ದೇವರಮನಿ, ಪ್ರಕಾಶ ಪೈರಾಶಿ, ರಾಜು ಮರೆನ್ನವರ, ಬಸವರಾಜ ಮಾಸ್ತಿಹೋಳಿ, ವಿಠ್ಠಲ್ ಮನಗುತ್ತಿ, ಶಿವಬಸಪ್ಪ ಶಿರೂರ್, ಶಿವಲಿಂಗ ಹೆಬ್ಬಾಳ, ಈಶ್ವರ ಮುನ್ನುಲಿ, ಲಕ್ಶ್ಮಣ ಮಳಿಕೇರಿ, ಈರ​‍್ಪ ಪೈರಾಶಿ, ಅಶೋಕ ಮಾಸ್ತಿಹೋಳಿ, ಮಲ್ಲಪ್ಪ ಶಿರೂರ್, ಮಹಾಂತೇಶ್ ಪಂಚಣ್ಣವರ ಹಾಗೂ ಅಂಕಲಗುಡಿಕ್ಷೇತ್ರ, ಪರಕನಹಟ್ಟಿ ಮಾವನೂರ. ಹಟ್ಟಿಆಲೂರ ಗ್ರಾಮಸ್ತರು ಇದ್ದರು.