ಗೋಕಾಕ್

ಶಿಂದಿಕುರಬೇಟ ಗ್ರಾಮದಲ್ಲಿ ಪಾಂಡುರಂಗ ಸಪ್ತಾಹ ಪ್ರಾರಂಭ

ಶಿಂದಿಕುರಬೇಟ ಗ್ರಾಮದಲ್ಲಿ ಪಾಂಡುರಂಗ ಸಪ್ತಾಹ ಪ್ರಾರಂಭ

ಲೋಕದರ್ಶನ ವರದಿ 

 ಗೋಕಾಕ  29: ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ 21ನೇ ವರ್ಷದ ಅಂಗವಾಗಿ ಶ್ರೀ ಶ್ರೇಷ್ಠ ಜ್ಞಾನೇಶ್ವರಿ ಪಾರಾಯಣ ಅಖಂಡ ಹರಿನಾಮ ಸೋಹಳಾ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ಸಪ್ತಾಹವು ದಿ.29ರಿಂದ 31ರವರೆಗೆ ಅತೀ ವಿಜೃಂಭಣೆಯಿಂದ ಜರುಗಲಿದೆ.ದಿ.29 ಮತ್ತು 30ರಂದು ಮುಂಜಾನೆ ಕಾಕಡಾರತಿ ಹಾಗೂ ಪೋಥೀ ವಾಚನ, ರಾಮಜಪ,ಹರಿಪಾಠ,ಕೀರ್ತನ ಜರುಗಲಿದೆ.ದಿ.31ರಂದು ಮುಂಜಾನೆ ಕಾಕಡಾರತಿ ನಂತರ ಶ್ರೀ ಜ್ಞಾನೇಶ್ವರಿ ಪಾರಾಯಣ ಸಮಾಪ್ತಿ,ದಿಂಡಿ ಸೋಹಳಾ, ಸುಮಂಗಲೆಯರ ಆರತಿಯೊಂದಿಗೆ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿಯರ ಪಲ್ಲಕ್ಕಿ ಉತ್ಸವ ನಂತರ ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ. ಘಟಪ್ರಭಾದ ಮಾರುತಿ ವಂಜೇರಿ ಇವರು ಪಾರಾಯಣ ನಡೆಸಿಕೊಡುವರು.ಶ್ರೀ ಬಾಳು ಮಹಾರಾಜ ಭೋಸಲೆ ಮತ್ತು ಮಾಣಿಕ್ ಬೀಸೆ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಪ್ತಾಹ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ