ಪಾಕಿಸ್ತಾನ ಹತಾಶವಾಗಿದೆ, ಅದೊಂದು ಟೆರರಿಸ್ಟ ರಾಷ್ಟ್ರ : ಆರ್. ವಿ.ದೇಶಪಾಂಡೆ
ಕಾರವಾರ 16: ಪಾಕಿಸ್ತಾನ ಯುದ್ಧದಲ್ಲಿ ಭಾರತದ ಎದುರು ಸೋತಿದೆ. ಹತಾಶವಾಗಿದೆ, ಅದೊಂದು ಟೆರರಿಸ್ಟ ರಾಷ್ಟ್ರ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಕಾರವಾರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪಾಕಿಸ್ತಾನ ಸುಧಾರಿಸಬೇಕು. ಆದರೆ ಅವರು ಹಾಗೆ ಮಾಡುತ್ತಿಲ್ಲ. ಅವರು ಭಾರತದ ಜೊತೆ ಸಂಬಂಧ ಸುಧಾರಿಸಬೇಕು. ಅಲ್ಲಿ ಸಹ ಪ್ರಗತಿಯಾಗಬೇಕು. ಅಭಿವೃದ್ಧಿಯಾಗಬೇಕು , ವ್ಯಾಪಾರ ವಹಿವಾಟು ಹೆಚ್ಚಬೇಕು ಎಂದು ಬಯಸುವವ ನಾನು ಎಂದರು.
ನಮ್ಮ ಸೈನಿಕರಿಗೆ ನಾವು ಮೆಚ್ಚುಗೆ ಕೊಡಬೇಕು, ಸೈನ್ಯವನ್ನು ಗೌರವಿಸಬೇಕು. ಅವರಿಂದ ನಮಗೆ ಪಾಕಿಸ್ತಾನದ ವಿರುದ್ಧ ಗೆಲುವು ಸಿಕ್ಕಿದೆ . ನಮ್ಮ ದೇಶದ ಗೆಲುವಿಮ ಹಿಂದೆ ಸೈನಿಕರ ಶ್ರಮ ಇದೆ ಎಂದರು.ನಮ್ಮ ಸೈನಿಕರನ್ನು ಯಾರೇ ಟೀಕಿಸಿದರೂ ಅದು ತಪ್ಪು ಎಂದರು. ಸೇನೆಗೆ ಬಗ್ಗೆ ನಮಗೆ ಅಭಿಮಾನ ಇರಬೇಕು ಎಂದು ಹಿರಿಯ ಕಾಂಗ್ರೆಸ್ಸಿಗರೂ ಆದ ಆರ್ .ವಿ.ದೇಶಪಾಂಡೆ ಹೇಳಿದರು.