ಸೆ.17ರಂದು ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 16ನೇ ಪುಣ್ಯಸ್ಮರಣೋತ್ಸವ
Padma Bhushan on September 17. 16th Remembrance Day of Pandita Puttaraja Gawai
ಗದಗ, ಸೆ.15: ಗಾನಗಂಧರ್ವ ಕಲಾ ಟ್ರಸ್ಟ್, ಗದಗ ಹಾಗೂ ನಾದಶ್ರೀ ಸಂಗೀತ ಪಾಠಶಾಲೆ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ಸೆ.17ರಂದು ಸಂಜೆ 6 ಗಂಟೆಗೆ ಗದಗದ ವಿವೇಕಾನಂದ ಬಡಾವಣೆಯಲ್ಲಿರುವ ನಾದಶ್ರೀ ಸಂಗೀತ ಪಾಠಶಾಲೆಯಲ್ಲಿ ಪರಮಪೂಜ್ಯ ಪದ್ಮಭೂಷಣ ಲಿಂ. ಡಾ. ಪಂ. ಪುಟ್ಟರಾಜ ಗವಾಯಿಗಳ 16ನೇ ಪುಣ್ಯಸ್ಮರಣೋತ್ಸವ ಹಾಗೂ ನಾದಶ್ರೀ ಸಂಗೀತ ಪಾಠಶಾಲೆಯ 3ನೇ ವಾರ್ಷಿಕೋತ್ಸವ ನಡೆಯಲಿದೆ.
ಗದಗ ಮುಕ್ಕಣ್ಣೇಶ್ವರ ಮಠದ ಸದ್ಗುರು ಪೂಜ್ಯ ಶ್ರೀ ಶಂಕರಾನಂದ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮುಂಡರಗಿಯ ಬೃಹನ್ಮಠದ ವೀರೇಶ್ವರ ಶರಣರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಗದಗ ಗಾನಗಂಧರ್ವ ಕಲಾ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಪಂಚಾಕ್ಷರಿ ಅಧ್ಯಕ್ಷತೆ ವಹಿಸುವರು.
ಗದಗದ ಸೌಖ್ಯದ ಆಸ್ಪತ್ರೆಯ ಮೂತ್ರರೋಗ ಶಸ್ತ್ರಚಿಕಿತ್ಸಕರು ಹಾಗೂ ಮೂತ್ರಪಿಂಡ ಕಸಿ ತಜ್ಞ ಡಾ. ಪ್ರವೀಣ ಡಂಬಳ ಅತಿಥಿಯಾಗಿ ಭಾಗವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಕಾರ್ಯಕ್ರಮ ಉದ್ಘಾಟಿಸುವರು.
ಇದೇ ಸಂದರ್ಭದಲ್ಲಿ ಜಯದೇವಿ ಎ. ಕವಲೂರು ಅವರಿಗೆ ಶ್ರೀಗುರು ಪುಟ್ಟರಾಜ ಪುರಸ್ಕಾರ ಹಾಗೂ ಶಿಕ್ಷಣ ಕ್ಷೇತ್ರದ ಶ್ರೀ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕವಿತಾ ಕೆ. ಕೊಣ್ಣೂರ, ಸಿದ್ದರಾಮಪ್ಪ ಶಿವನತ್ತಿ, ಬಸವರಾಜ ಅಂಗಡಿ ಹಾಗೂ ಗಂಗಣ್ಣ ಡಿ. ಮಲ್ಲಾಡ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.
ಸ್ವರಮನದಲಿ ಹನುಮಂತ ಎ. ಹೂಗಾರ ತಬಲಾ ವಾದನ, ಕುಮಾರಿ ಭಾಗ್ಯ ಶೇಖರಯ್ಯ ವಿಭೂತಿ ಅವರಿಂದ ಬಾನ್ಸುರಿ ವಾದನ ಹಾಗೂ ನಾದಶ್ರೀ ಸಂಗೀತ ಪಾಠಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ವಿವರಗಳನ್ನು ಗಾನಗಂಧರ್ವ ಕಲಾ ಟ್ರಸ್ಟ್ ಕಾರ್ಯದರ್ಶಿ ಸಿದ್ದಲಿಂಗಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 