ಮಳೆಗಾಗಿ ಪಾದಯಾತ್ರೆ: ಗಂಗಾಜಲ ತಂದು ಗ್ರಾಮದ ದೇವರಿಗೆ ಜಲಾಭಿಷೇಕ
Padayatra for rain: Bringing Ganga water to perform *Jalabhisheka* for the village deity
ಹೂವಿನಹಡಗಲಿ 18: ತಾಲೂಕಿನ ಹೊಳಗುಂದಿ ಗ್ರಾಮದ ರೈತರು ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು. ಸುಮಾರು 10 ಮಂದಿ ರೈತರು ಪಾದಯಾತ್ರೆ ಮೂಲಕ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪಾತಾಳ ಗಂಗೆಯಿಂದ ಬಿಂದಿಗೆಯಲ್ಲಿ ಪವಿತ್ರ ಜಲ ತಂದು ಗ್ರಾಮದ ಕರಿಗಲ್ಲು ದೇವರಿಗೆ ಜಲಾಭಿಷೇಕ ನೆರವೇರಿಸಿ ಭಕ್ತಿಭಾವ ಮೆರೆದರು.
ಕಳೆದ ಒಂದು ತಿಂಗಳಿನಿಂದ ತಾಲೂಕಿನಲ್ಲಿ ಸಮರ್ಕ ಮಳೆಯಾಗದ ಕಾರಣ ಬಿತ್ತನೆ ಮಾಡಿದ ಬೆಳೆಗಳು ಒಣಗುವ ಹಂತ ತಲುಪಿವೆ. ತೀವ್ರ ಬಿಸಿಲಿನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಉತ್ತಮ ಮಳೆಯಾಗಲೆಂದು ವಿವಿಧ ರೀತಿಯ ಧಾರ್ಮಿಕ ಆಚರಣೆಗಳು ಮತ್ತು ಪ್ರಾರ್ಥನೆಗಳನ್ನು ಕೈಗೊಂಡಿದ್ದಾರೆ.
ಗ್ರಾಮದಲ್ಲಿ ಶಿವನಾಮ ಸಂಕೀರ್ತನೆ, ಭಜನೆ, ಮಹಿಳೆಯರಿಂದ ಗುಗ್ಗರಿ ಸೇವೆ ಹಾಗೂ ಹಾಲುಸ್ವಾಮಿ ಪಲ್ಲಕ್ಕಿ ಉತ್ಸವ ಸೇರಿದಂತೆ ಹಲವು ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಲಾಯಿತು. ಆದರೂ ಮಳೆ ಸುರಿಯದ ಹಿನ್ನೆಲೆಯಲ್ಲಿ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್. ಗುರುಸಿದ್ದಪ್ಪ, ಬಿ. ಪರಮೇಶಪ್ಪ, ಫಕ್ಕೀರ್ಪ ಕೆ., ಸ್ವರೂಪಾನಂದ, ಹೆಚ್. ನಾಗರಾಜ, ಡಿ.ವಿ. ನಾಗಪ್ಪ, ಹೆಚ್. ಸಿದ್ದಪ್ಪ, ಹೆಚ್.ಎಂ. ಮಲ್ಲಿಕಾರ್ಜುನಯ್ಯ, ಬಿ.ಎಂ. ವೀರೇಶ್, ಕೆ. ಕೊಟ್ರೇಶ್ ಸೇರಿದಂತೆ ಭಜನಾ ಸಂಘದ ಸದಸ್ಯರು ಹಾಗೂ ಯುವ ರೈತರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 