ಗೋಕಾಕ್

ನಮ್ಮ ಸಂವಿಧಾನವು ಪ್ರಪಂಚದಲ್ಲಿಯೇ ಸರ್ವಶ್ರೇಷ್ಠವಾದುದು

ನಮ್ಮ ಸಂವಿಧಾನವು ಪ್ರಪಂಚದಲ್ಲಿಯೇ ಸರ್ವಶ್ರೇಷ್ಠವಾದುದು

ಲೋಕದರ್ಶನ ವರದಿ 

ಗೋಕಾಕ 16 : ಭಾರತೀಯರಲ್ಲಿ ಸಮಾನತೆಯನ್ನು ಕಂಡುಕೊಳ್ಳಲು ಅಂಬೇಡ್ಕರ್ ಅವರು ಸತತ ಪರಿಶ್ರಮಸಿ ಸಂವಿಧಾನ ನೀಡಿದ್ದಾರೆ.ಅದು ಪ್ರಪಂಚದಲ್ಲಯೇ ಸರ್ವಶ್ರೇಷ್ಠವಾದುದು. ಎಂದು ಗೋಕಾಕದ ಸಾಹಿತಿ ಹಾಗೂ ಸಿದ್ದಾರ್ಥ ಲಲಿತ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು.  ಅವರು ಸಮೀಪದ ಸಿಂಧಿಕುರಬೇಟ ಅಂಬೇಡ್ಕರ್ ನಗರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ ಆರ್ ಅಂಬೇಡ್ಕರ್ ಅವರ 135ನೆಯ ಜಯಂತಿ ಉತ್ಸವದ ಸಂದರ್ಭದಲ್ಲಿ ಉಪನ್ಯಾಸ ನೀಡುತ್ತಾ ಮೇಲು ಕೀಳೀನ ವರ್ಣಭೇದಗಳನ್ನು ಹೋಗಲಾಡಿಸುವುದೇ ಅಂಬೇಡ್ಕರ್ ಅವರ ಧ್ಯೇಯವಾಗಿತ್ತು ಸತತ ಅಧ್ಯಯನ ಶೀಲತೆಯಿಂದ ಸಂವಿಧಾನವನ್ನು ರಚಿಸಿ ನಮ್ಮೆಲ್ಲರಿಗೆ ಉಡುಗೊರೆಯಾಗಿ ನೀಡಿದಂಥ ಅಮೂಲ್ಯವಾದ ಸಂವಿಧಾನವು ಸರ್ವರ ಏಳಿಗೆಯನ್ನೇ ಬಯಸುತ್ತದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಭಾರತದ ಭವಿಷ್ಯ ಅಡಗಿದೆ ಸಾಮಾಜಿಕ ಹಾಗೂ ಶೈಕ್ಷಣಿಕ ಪರಿವರ್ತನೆಯಿಂದ ಭಾರತದ ಅಭ್ಯುದಯ ಹೊಂದಲು ಸಾಧ್ಯವೆಂದು ಹೇಳಿದರು.  ಮಹಾಲಿಂಗಪ್ಪ ಕೆಳಗೇರಿ, ಪರಸಪ್ಪ ಪೂಜಾರಿ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಗಣ್ಯಮಾನ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. 


ಸುದ್ದಿ ಓದಿ