ಹೂವಿನ ಹಡಗಲಿ

ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯ: ಕಾಂಚನ ಕುಮಾರ್

ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯ: ಕಾಂಚನ ಕುಮಾರ್

ಹೂವಿನ ಹಡಗಲಿ 26: ಬಣಜಿಗ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸಂಘಟನಾ ಕಾರ್ಯದರ್ಶಿ ಕಾಂಚನ ಕುಮಾರ್ ಅಭಿಮತ ವ್ಯಕ್ತಪಡಿಸಿದರು. 

ಪಟ್ಟಣದ ಎಂ ಬಿ ಆಯಿಲ್ ಮಿಲ್ ನಲ್ಲಿ ಮಂಗಳವಾರ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮಾಜಿಕವಾಗಿ ಸದೃಢವಾಗಿ ಬೆಳೆಯಲು ಸಂಘಟನೆ ಅಗತ್ಯ ಜತೆಗೆ ರಾಜಕೀಯ ಸ್ಥಾನ ಮಾನ ಸಿಗಬೇಕು ಎಂದರು. ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಮುಂಡವಾಡ ಉಮೇಶ ಅಧ್ಯಕ್ಷತೆ ವಹಿಸಿಸಮಾಜದ ಏಳಿಗೆಗೆ ಸದಾ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿರಿ ಎಂದರು.

ಗೌರವಾಧ್ಯಕ್ಷ ರುದ್ರ​‍್ಪ ಕರಿಶೆಟ್ಟಿ ರಾಜ್ಯ ಬಣಜಿಗ ವಿಶ್ವಸ್ಥ ಮಂಡಳಿ ಸದಸ್ಯ ಮುರುಗೇಶ ತುರಕಾಣಿ, ಹಿರೇಹಡಗಲಿ ಘಟಕದ ಅಧ್ಯಕ್ಷ ಶಿವಯೋಗೆಪ್ಪ ಹಲಗೇರಿ ಗಿರಿಮಲ್ಲಿಗೆ ಮಹಿಳಾ ಸಹಕಾರಿಯ ಅಧ್ಯಕ್ಷ ಸವಿತಾ ಅಂಗಡಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಯಲಗಚ್ಚಿನಯುವ ಘಟಕದ ಅಧ್ಯಕ್ಷ ಐ ಎಸ್ ವಿಜಯಕುಮಾರ್ ಇದ್ದರು. ಕುಂಬಾರಿ ಸವಿತಾ, ನಾಗರತ್ನ ಕುಂಚೂರು, ಎ ಭುವನೇಶ್ವರಿ ಶೈಲಜಾ ಪವಾಡಶೆಟ್ರು ನಿರ್ವಹಿಸಿದರು. ತಾಲೂಕಿನ ವಿವಿಧ ಗ್ರಾಮಗಳ ಸಮಾಜದ ಬಾಂಧವರು ಭಾಗವಹಿಸಿದ್ದರು. 


ಸುದ್ದಿ ಓದಿ