ವಿದ್ಯುತ್ ಖಾಸಗೀಕರಣಕ್ಕೆ ವಿರೋಧ: ಎಐಕೆಎಂಎಸ್ ಆಗ್ರಹ

ವಿದ್ಯುತ್ ಖಾಸಗೀಕರಣಕ್ಕೆ ವಿರೋಧ: ಎಐಕೆಎಂಎಸ್ ಆಗ್ರಹ Opposition to power privatization: AIKMS demands

ಧಾರವಾಡ 19 : ಮಾನವನ ನಾಗರೀಕ ಸಮಾಜದ ಬೆಳವಣಿಗೆಯಲ್ಲಿ ವಿದ್ಯುತ್ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಇಂದು ವಿದ್ಯುತ್ ಮೂಲಭೂತ ಅವಶ್ಯಕತೆಯಾಗಿದೆ. ಅಂತೇ ದೇಶದ ಮೂಲೆ ಮೂಲೆಯಲ್ಲೂ ವಿದ್ಯುತ್ ನೀಡುವ ಜವಾಬ್ದಾರಿಯನ್ನು ಸರ್ಕಾರವು ವಹಿಸಬೇಕಾಗಿದೆ ಆದರೆ ದುರಂತವೆಂದರೆ ಸರ್ಕಾರವು ವಿದ್ಯುತ್ ಸರಬರಾಜು ಖಾಸಗೀಕರಣ ಮಾಡಲು ಹೊರಟಿರುವುದು ಜನವಿರೋಧಿ ನಡೆಯಾಗಿದೆ. ಇಂದಿನ ಹವಮಾನ ವೈಪರಿತ್ಯದಿಂದಾಗಿ ಕೃಷಿ ಕ್ಷೇತ್ರವೇ ಸಂಪೂರ್ಣವಾಗಿ ನೆಲಕಚ್ಚಿದೆ.  

ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ರೈತ ಕೃಷಿ ಕಾರ್ಮಿಕರ ನೆರವಿಗೆ ಧಾವಿಸಿ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ ಕೃಷಿ ಕ್ಷೇತ್ರವನ್ನು ಉಳಿಸಬೇಕಾಗಿದೆ. ಖಾಸಗಿ ಕಂಪನಿಗಳಿಗೆ ಸರ್ಕಾರವು ವಿದ್ಯುತ್ ಸರಬರಾಜನ್ನು ವಹಿಸಿಕೊಟ್ಟರೆ ರೈತರ ಪಂಪ್ಸೆಟ್ಗಳಿಗೆ ಸ್ಮಾರ್ಟ್‌ ಮೀಟರ್ ಅಳವಡಿಸಿ ರೈತರನ್ನು ಮಣ್ಣು ಪಾಲು ಮಾಡಲು ಹೊರಟಿದೆ. ಇದನ್ನು ಎಐಕೆಎಂಎಸ್ ಸಂಪೂರ್ಣವಾಗಿ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡಬಾರದು ಮತ್ತು ವಿದ್ಯುತ್ ಸರಬರಾಜಿಗೆ ಟಾಟಾ ಕಂಪನಿಗೆ ಪರವಾನಾಗಿ ನೀಡಬಾರದು ಎಂದು ಂಋಏಒಖ ಧಾರವಾಡ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.