ಯುದ್ದ ವಿರೋಧಿಸಿ ವಿಶ್ವ ಶಾಂತಿಗಾಗಿ ಹಾರೈಸಿ
Oppose war and wish for world peace
ಲೋಕದರ್ಶನ ವರದಿ
ದಾಂಡೇಲಿ - ಮಾ. 13: ದಾಂಡೇಲಿಯ ಸೋಮಾನಿ ಸರ್ಕಲ್‌ನಲ್ಲಿ ಗುರುವಾರ ಸಂಜೆ ಯುದ್ದ ವಿರೋಧಿಸಿ ವಿಶ್ವ ಶಾಂತಿಗಾಗಿ ಹಾರೈಸಿ, ಯುದ್ದದಲ್ಲಿ ಮಡಿದವರಿಗೆ ದೀಪಗಳೊಂದಿಗೆ ಸಂತಾಪ ಸೂಚಿಸಿ ಸಿಐಟಿಯೂದಿಂದ ಸಭೆ ನಡೆಸಲಾಯಿತು. ಸಿಐಟಿಯೂ ಜಿಲ್ಲಾ ಉಪಾಧ್ಯಕ್ಷೆ ಯಮುನಾ ಗಾಂವಕರ್, ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ. ಸ್ಯಾಮಸನ್ ಮಾತನಾಡಿ ಪಾಶ್ಚಾತ್ಯ ರಾಷ್ಟ್ರಗಳ ನಡುವೆ ನಡೆದಿರುವ ಯುದ್ದ ಸಾವಿರಾರು ಜನರ ಬಲಿ ತೆಗೆದುಕೊಳ್ಳುವ ಸರ್ವಾಧಿಕಾರಿ ಧೋರಣೆಯಾಗಿದೆ. ಯುದ್ದ ನಿಲ್ಲಿಸಿ ಶಾಂತಿ ಸ್ಥಾಪನೆಯಾಗಲಿ ಬೆಲೆ ಎರಿಕೆ ತಡೆಗಟ್ಟಿ ಸಾಮ್ರಾಜ್ಯ ಶಾಹಿಗೆ ಮಣೆ ಹಾಕುವ ಭಾರತದ ನೀತಿ ಹಿಮ್ಮೆಟ್ಟಿಸಿ ಎಂದರು. ಸಭೆಯಲ್ಲಿ ಡಿ.ವಾಯ್.ಎಪ್.ಐ ತಾಲೂಕಾ ಕಾರ್ಯದರ್ಶಿ ಇಮ್ರಾನ್, ಮುಖಂಡರಾದ ಕಾಂತರಾಜ್, ವಿಜಯ ಹರಿಜನ, ತಾಲ್ಮನ್ ಹಿಲ್ಲೂರಿ, ಇಷಾದ್ ಬೇಲೂರ್ ಜಾಫರ್ ಮಾಸನಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 