ಐ.ಟಿ.ಐ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
ಕಾರವಾರ 12 : ಸಾಲಿನ ಐ.ಟಿ.ಐ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು ಆಸಕ್ತ ಹಾಗೂ ಅರ್ಹ ಎಸ್.ಎಸ್,ಎಲ್.ಸಿ ಉತ್ತೀರ್ಣ, ಅನುತ್ತೀರ್ಣ (ವೆಲ್ಡರ್ ಟ್ರೇಡ್ ಗೆ) ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಛಿಣಜ.ಞಚಿಡಿಟಿಚಿಣಚಿಞಚಿ.ರಠ.ಟಿ ಮೂಲಕ ಮೇ.28 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ನಂತರ ಕಡ್ಡಾಯವಾಗಿ ಮೂಲ ದಾಖಲೆಗಳನ್ನು ಪರೀಶೀಲಿಸಿಕೊಳ್ಳಲು ತಮ್ಮ ಮೊಬೈಲ್ ಸಂಖ್ಯೆಗೆ ಎಸ್.ಎಮ್.ಎಸ್ ಬರುತ್ತದೆ. ನಂತರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಖುದ್ದಾಗಿ ಭೇಟಿ ನೀಡಿ ಸಂಬಂಧಿತ ಮೂಲ ದಾಖಲೆಗಳನ್ನು ಪರೀಶೀಲಿಸಿಕೊಂಡು ದೃಢಿಕೃತ ಝೇರಾಕ್ಸ ಪ್ರತಿಗಳನ್ನು ಸಲ್ಲಿಸಬಹುದಾಗಿದೆ.
ಕುಶಲಕರ್ಮಿ ಯೋಜನೆಯಡಿ, ಇಟಇಅಖಿಖಋಋಓ(ಓಖಕಿಈ), ಈಋಖಿಇಖ(ಓಖಕಿಈ), ಖಿಗಖಓಇಖ(ಓಖಕಿಈ), ಘಇಐಆಇಖ(ಓಖಕಿಈ) ಉದ್ಯೋಗ ಯೋಜನೆಯಡಿಯಲ್ಲಿ ಒಜಛಿಚಿಟಿಛಿ ಇಟಜಛಿಣಡಿಡಿಛಿ ಗಿಜಛಿಟಜ(ಓಖಕಿಈ),ಋಜಣಡಿಚಿಟ ಖಠಠಜಿ ್ಘಆರಣಚಿಟ ಒಚಿಟಿಣಜಿಚಿಛಿಣಣಡಿಟಿರ ಖಿಜಛಿಟಿಛಿಚಿಟಿ(ಓಖಕಿಈ), ಒಚಿಟಿಣಜಿಚಿಛಿಣಣಡಿಟಿರ ಕಡಿಠ ಅಠಣಡಿಠ ಚಿಟಿಜಂಣಣಠಚಿಣಠ(ಓಖಕಿಈ),ಅಓಅ ಒಂಅಊಋಓಋಉ ಖಿಇಅಊಓಋಋ(ಓಖಕಿಈ), ಗಿಡಿಣಣಚಿಟ ಂಟಿಚಿಟಥಿ ಚಿಟಿಜ ಆರಟಿಜಡಿ ಈಇಒ(ಈಟಿಣಜ ಇಟಜಟಜಟಿಣ ಒಜಣಠ)( ಓಖಕಿಈ), ಇಟಿರಟಿಜಜಡಿಟಿರ ಆರಟಿ ಖಿಜಛಿಟಿಛಿಚಿಟಿ(ಓಖಕಿಈ)
ಆಧಾರ್ ನಂಬರ್, ರೇುಷನ್ ಕಾರ್ಡ ನಂಬರ್, ಇ-ಮೇಲ್, ಮೊಬೈಲ್ ನಂಬರ್ ವಿವರಗಳನ್ನು ಕಡ್ಡಾಯವಾಗಿ ನಮೂದಿಸಿ ಪ್ರವೇಶಾತಿ ಸಮಯದಲ್ಲಿ ಸಲ್ಲಿಸಿದ ಇ-ಮೇಲ್, ಮೊಬೈಲ್ ನಂಬರ್‌ಗಳನ್ನು ತರಬೇತಿ ಮುಗಿಸಿ ಪರೀಕ್ಷೆಗೆ ಹಾಜರಾಗುವರೆಗೂ ಬದಲಾಯಿಸದಿರಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಾಡ ನಂದನಗದ್ದಾ ಕಾರವಾರ ಮೊಬೈಲ್ ಸಂಖ್ಯೆ:9448635044,7676993526, 8861930372 ನ್ನು ಸಂಪರ್ಕಿಸುವಂತೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲಾ/ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರು/ಶಿಕ್ಷಕರ ನೇಮಕ ಅರ್ಜಿ ಆಹ್ವಾನ
ಕಾರವಾರ 12 : ಉತ್ತರ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಮೌಲಾನಾ ಆಜಾದ ಮಾದರಿ ಶಾಲಾ/ಕಾಲೇಜುಗಳಲ್ಲಿನ ಖಾಲಿ ಇರುವ ಉಪನ್ಯಾಸಕರು/ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರು/ಶಿಕ್ಷಕರನ್ನು ಗೌರವ ಧನದ ಆಧಾರದ ಮೇಲೆ ಪಡೆಯಲು ಅರ್ಹ ಆಭ್ಯರ್ಥಿಗಳಿಂದ ಜಿಲ್ಲಾ ಹಂತದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅದರಂತೆ ಆಭ್ಯರ್ಥಿಗಳು ಅರ್ಜಿಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‌ಸೈಟ್ ಣಣಠಿ://ಜಠ.ಞಚಿಡಿಟಿಚಿಣಚಿಞಚಿ.ರಠ.ಟಿ/ ನಿಂದ ಡೌನ್‌ಲೋಡ್ ಮಾಡಿಕೊಳ್ಳುವುದು. ಮತ್ತು ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಜಿಲ್ಲಾ ಕಚೇರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉತ್ತರ ಕನ್ನಡ, ಶ್ರಿ. ಶಾರದ ಬ್ಯೂಲ್ಡಿಂಗ್, ಎರಡನೇ ಮಹಡಿ, ಇಂಡಿಯನ್ ಓವರ್‌ಸಿಸ್ ಬ್ಯಾಂಕ್ ಹತ್ತಿರ, ತೇಲಿರಾಮಜಿ ರೋಡ್, ಕಾರವಾರ-581301 ಇಲ್ಲಿಗೆ ಮೇ. 19 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್ ಣಣಠಿ://ಜಠ.ಞಚಿಡಿಟಿಚಿಣಚಿಞಚಿ.ರಠ.ಟಿ/ ಅಥವಾ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಉತ್ತರ ಕನ್ನಡ, ಕಾರವಾರ ದೂರವಾಣಿ ಸಂಖ್ಯೆ 08382-220336/ ಅಥವಾ ಆಯಾ ತಾಲೂಕಿನ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಕ್ಕೆ ಕಚೇರಿ ಸಮಯದಲ್ಲಿ ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿತ್ರ ಶೀರ್ಷಿಕೆ: ಯುದ್ದದಂತಹ ತುರ್ತು ಸಂದರ್ಭದಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕೇಂದ್ರ ಗೃಹಸಚಿವಾಲಯದ ನಿರ್ದೇಶನದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ನಡೆದ “ಆಪರೇಷನ್ ಅಭ್ಯಾಸ್” ಅಣಕು ಪ್ರದರ್ಶನ ಕಾರ್ಯಕ್ರಮದ ಸಂದರ್ಭದಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿನ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದ ಕಾರ್ಯವಿಧಾನವನ್ನು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ವೀಕ್ಷಿಸಿ, ಸಿಬ್ಬಂದಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಇದ್ದರು.
ಆಸ್ತಿ ತೆರಿಗೆ ರಿಯಾಯಿತಿ : ಅವಧಿ ವಿಸ್ತರಣೆ
ಕಾರವಾರ 12 :ಕಾರವಾರ ನಗರ ಸಭೆ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ/ಅನುಭೋಗದಾರರಿಗೆ ಘನ ಸರಕಾರವು ಆಸ್ತಿತೆರಿಗೆ ಪಾವತಿಸಲು ಪ್ರೋತ್ಸಾಹ ನೀಡಲು 2025-26 ನೇ ಸಾಲಿನ ಏಪ್ರಿಲ್ ಮಾಹೆಯಲ್ಲಿ ಆಸ್ತಿತೆರಿಗೆ ಪಾವತಿಸಿದ್ದಲ್ಲಿ 5ಅ ರಿಯಾಯಿತಿ ಇರುವ ಪ್ರಯೋಜನವನ್ನು ಜೂನ್ 30 ವರೆಗೆ ವಿಸ್ತರಣೆ ಮಾಡಲಾಗಿದೆ ಸಾರ್ವಜನಿಕರು ಸಕಾಲದಲ್ಲಿ ಆಸ್ತಿತೆರಿಗೆ ಪಾವತಿಸಿ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುವಂತೆ ನಗರಸಭೆ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಟಾ ವಿದ್ಯುತ್ ವ್ಯತ್ಯಯ
ಕಾರವಾರ 12 : ಕೆ.ಪಿ.ಟಿ.ಸಿ.ಎಲ್ ಕುಮಟಾ 110 ಕೆ.ವಿ ಉಪ ಕೇಂದ್ರದಲ್ಲಿ ಬ್ರೇಕರ್-2 ನಿರ್ವಹಣೆ ಕಾರ್ಯ ಇರುವುದರಿಂದ, ಮೇ.14 ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರ ಶಾಖೆಯ ಕುಮಟಾ ಟೌನ್, ಚಿತ್ರಗಿ, ಹಾಗೂ ಗ್ರಾಮೀಣ ಶಾಖೆಯ ಬಾಡಾ, ಮಾಸೂರ, ಧಾರೇಶ್ವರ ಫೀಡರಿನ ಎಲ್ಲಾ ಭಾಗಗಳಲ್ಲಿ ಹಾಗೂ 33ಕೆ.ವಿ ಗೋಕರ್ಣ ಉಪವಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಇರುವುದರಿಂದ ಗೋಕರ್ಣ ಶಾಖೆಯ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರ, ಗಂಗಾವಳಿ, ಓಂ ಬೀಚ್ ಫೀಡರಿನ ಎಲ್ಲಾ ಭಾಗದಲ್ಲಿ ಹಾಗೂ 33ಕೆ.ವಿ ಮರಾಕಲ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಮರಾಕಲ್ ಮಾರ್ಗದ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಚಂದಾವರ ಹಾಗೂ ಮೂರುರು ಫೀಡರಿನ ಎಲ್ಲಾ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ, ಕುಮಟಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.