ಬೆಳಗಾವಿ : ಪ್ರಾರ್ಥನಾ ಮಂದಿರದಲ್ಲಿದ್ದ ಧರ್ಮಗ್ರಂಥವನ್ನು ಕಿಡಿಗೇಡಿಗಳು ಸುಟ್ಟು ಹಾಕಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದ್ದು, ಈ ಕೃತ್ಯ ನಡೆಸಿರುವ ದುಷ್ಕರ್ಮಿಗಳನ್ನು ಬಂಧಿಸಿ, ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಮುಸ್ಲಿಂ ಸಮಾಜ ಬಾಂಧವರು ರಸ್ತೆಗೀಳಿದು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ತಾಲ್ಲೂಕಿನ ಸಂತಿ ಬಸ್ತವಾಡದಲ್ಲಿ ನಿರ್ಮಾಣ ಹಂತದ ಪ್ರಾರ್ಥನಾ ಮಂದಿರದ ಕೆಳಮಹಡಿಯಲ್ಲಿದ್ದ ಧರ್ಮಗ್ರಂಥವನ್ನು ಹೊತ್ತೊಯ್ದ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ.
ಈ ಬಗ್ಗೆ ಸೋಮವಾರ ಬೆಳಗಿನ ಜಾವ ಪ್ರಾರ್ಥನೆ ಮಾಡಲು ಪ್ರಾರ್ಥನಾ ಮಂದಿರಕ್ಕೆ ಬಂದಾಗ ಧರ್ಮಗ್ರಂಥ ಇಲ್ಲದಿರುವುದು ಬೆಳಕಿಗೆ ಬಂದಿದೆ. ಪ್ರಾರ್ಥನೆ ಮುಗಿಸಿದ ಬಳಿಕ ಸುತ್ತಲಿನ ಪ್ರದೇಶದಲ್ಲಿ ಪ್ರಾರ್ಥನಾ ಮಂದಿರದ ಸಿಬ್ಬಂದಿಯಿಂದ ಹುಡುಕಾಟ ನಡೆಸಿದಾಗ ಆಗ ಖಾಲಿ ಜಮೀನಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಧರ್ಮಗ್ರಂಥಗಳು ಪತ್ತೆಯಾಗಿವೆ.
ಇನ್ನು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬಳಿಕ ಗ್ರಾಮದಲ್ಲಿ ಜಮಾವಣೆಗೊಂಡ ಮುಸ್ಲಿಂ ಯುವಕರಿಂದ ಪ್ರತಿಭಟನೆ ನಡೆಸಿ ಅಲ್ಲಿಂದ ವಿಟಿಯು ಬಳಿ ಪ್ರತಿಭಟನೆ ನಡೆಸುವದಾಗಿ ಪಟ್ಟು ಹಿಡಿದಿದ್ದಾರೆ. ಅಲ್ಲಿಂದ ರ್ಯಾಲಿ ಮೂಲಕ ಚನ್ನಮ್ಮ ವೃತಕ್ಕೆ ಆಗಮಿಸಿದ ಸಮಾಜದ ಜನರು ಬಳಿಕ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬಳಿಕ ತೇರಾ ಮೇರಾ ರಿಸ್ತಾ ಕ್ಯಾ, ಲಾ ಇಲಾಹಿ ಇಲ್ಲಲ್ಲಾ ಹಾಗೂ ಅಲ್ಲಾ ಹು ಅಕ್ಬರ್ ಮತ್ತು ಹಿಂದೂಸ್ತಾನ್ ಜಿಂದಾಬಾದ್ ಅಂತಾ ಘೋಷಣೆ ಕೂಗಿದರು.
ಸ್ಥಳದಲ್ಲೇ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಡಿಸಿಪಿ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ಎಸಿಪಿ ಸದಾಶಿವ ಕಟ್ಟಿಮನಿ, ಸೇರಿ ಐವರು ಸಿಪಿಐಗಳ ಮತ್ತು ಸಿಬ್ಬಂದಿ ಗಳಿಂದ ಭದ್ರತೆ ನಿಯೋಜಿಸಲಾಗಿತ್ತು.
ಬಳಿಕ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಭೇಟಿ.
ಶಾಸಕ ರಾಜು ಸೇಠ್ ಆಗಮನ ಬಳಿಕ ನಗರ ಪೊಲೀಸ್ ಆಯುಕ್ತರ ಜೊತೆಗೆ ಚರ್ಚೆ ನಡೆಸಲಾಯಿತು.