ನದಿಯಲ್ಲಿ ಎತ್ತಿನ ಮೈ ತೊಳೆಯುವಾಗ ಕಾಲು ಜಾರಿ ಬಿದ್ದು ಓರ್ವ ಸಾವು, ಮತ್ತೋರ್ವನಿಗೆ ಶೋಧ
ಹಾವೇರಿ, ಅ 24: ಹಾವೇರಿ ಜಿಲ್ಲೆಯ ಹಂದಿಗನೂರು ಗ್ರಾಮದಲ್ಲಿ ಎತ್ತಿನ ಮೈ ತೊಳೆಯುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ ಪ್ರಶಾಂತ್ ಸೋಮಪ್ಪ ಕೊಂಚಿಗೇರಿ (18) ಎಂಬ ಯುವಕ ವರದಾ ನದಿಯಲ್ಲಿ ಕೊಚ್ಚಿ ಹೋಗಿದ್ದು, ಆತನ ರಕ್ಷಣೆಗೆ ಮುಂದಾದ ಪರಮೇಶಪ್ಪ ಕಮ್ಮಾರ (62) ಸಹ ನೀರಿನಲ್ಲಿ ಮುಳುಗಿರುವುದಾಗಿ ವರದಿಯಾಗಿದೆ. ಪ್ರಶಾಂತ್ ಎತ್ತುಗಳನ್ನು ತೊಳೆಯಲು ನದಿ ಬಳಿ ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದು ಎತ್ತುಗಳನ್ನು ತೊಳೆಯುತ್ತಿದ್ದ ಪರಮೇಶಪ್ಪ ಆತನನ್ನು, ಹಿಡಿದುಕೊಳ್ಳಲು ಮುಂದಾಗಿ ಅವರೂ ಅಪಾಯಕ್ಕೆ ಸಿಲುಕಿದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್ಡಿಆರ್ಎಫ್ ತಂಡ ಕಾರ್ಯಾಚರಣೆ ನಡೆಸಿ ಪರಮೇಶ್ವರಪ್ಪ ಅವರ ದೇಹವನ್ನು ಹೊರತೆಗೆದಿದ್ದಾರೆ. ಪ್ರಶಾಂತ್ಗಾಗಿ ಶೋಧ ಮುಂದುವರಿದಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 