ಕಲಬುರಗಿ ವೃದ್ಧನ ಸೊಸೆ, ಆಯಾಗೆ ಸೋಂಕು; ಸೋಂಕಿತರ ಸಂಖ್ಯೆ 226ಕ್ಕೇರಿಕೆ
ಬೆಂಗಳೂರು, ಏ 12, ಕಲಬುರಗಿಯಲ್ಲಿ ಕೊರೋನಾ ಸೋಂಕಿನಿಂಧ ಮೃತಪಟ್ಟ 70 ವರ್ಷದ ವೃದ್ಧನ ಸೊಸೆ ಮತ್ತು ಆಯಾಗೆ ಕೂಡ ಸೋಂಕು ದೃಢಪಟ್ಟಿದೆ.ಕಲಬುರಗಿಯ ವೃದ್ಧನ 24 ವರ್ಷದ ಸೊಸೆ ಮತ್ತು ಆತನೊಂದಿಗೆ ಸಂಪರ್ಕ ಹೊಂದಿದ್ದ 38 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.ಉಳಿದಂತೆ ಮೈಸೂರಿನ 32 ವರ್ಷದ ಗಂಡು, ಬಿಬಿಎಂಪಿ ವ್ಯಾಪ್ತಿಯ ಮೂವರು, ವಿಜಯಪುರದ 60 ವರ್ಷದ ಮಹಿಳೆ, ಬೆಳಗಾವಿಯ ನಾಲ್ವರು ವ್ಯಕ್ತಿಗಳಲ್ಲಿ ಸೋಂಕು ತಗುಲಿದೆ ಎಂದು ವರದಿ ತಿಳಿಸಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 226ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ ಆರು ಮಂದಿ ಸೋಂಕಿನಿಂದ ಮೃತರಾಗಿದ್ದು, 47 ಜನರು ಗುಣಮುಖರಾಗಿದ್ದಾರೆ.ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಎಂದರೆ 76, ಮೈಸೂರಿನಲ್ಲಿ 48 ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆ 12 ಪ್ರಕರಣಗಳೊಂದಿಗೆ 3ನೇ ಸ್ಥಾನದಲ್ಲಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 