ರೈತರಿಗೆ ಬೀಜ, ಗೊಬ್ಬರದ ಕೊರತೆಯಾದರೇ ಅಧಿಕಾರಿಗಳು ಹೊಣೆಗಾರರು: ಶಾಸಕ ಪಠಾಣ

Officials are responsible if farmers face shortage of seeds and fertilizers: MLA Pathana

ರೈತರಿಗೆ ಬೀಜ, ಗೊಬ್ಬರದ ಕೊರತೆಯಾದರೇ ಅಧಿಕಾರಿಗಳು ಹೊಣೆಗಾರರು: ಶಾಸಕ ಪಠಾಣ

ಶಿಗ್ಗಾವಿ 25: ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಗೆಅಗತ್ಯ ಬೀಜ, ಗೊಬ್ಬರದಾಸ್ತಾನು ಸಾಕಷ್ಟ್ರಿದೆ. ಡಿಎಪಿ ಗೊಬ್ಬರದಕೊರತೆ ಮಾತ್ರಕಾಣುತ್ತಿದೆ. ಈ ಕುರಿತು ಸರಕಾರ ಸಚಿವರ ಗಮನ ಸೆಳೆದು ಪರಿಹಾರ ಕಂಡುಕೊಳ್ಳುವುದಾಗಿ ಶಾಸಕ ಯಾಸೀರಖಾನ್ ಪಠಾಣ ಭರವಸೆ ನೀಡಿದರು.  ಪಟ್ಟಣದಡಾ.ಅಂಬೇಡ್ಕರ್ ಆಡಳಿತ ಭವನದಲ್ಲಿ ನಡೆದ ಮುಂಗಾರು ಕೃಷಿ ಚಟುವಟಿಕೆಗಳ ಕುರಿತು ಪೂರ್ವಭಾವಿಯಾಗಿರೈತರುರೈತ ಮುಖಂಡರು ಸೇರಿದಂತೆ ಅವಳಿ ತಾಲೂಕಿನ, ಅಧಿಕಾರಿಗಳು, ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದಅವರು ಬೀಜ, ಗೊಬ್ಬರ ನಿಗಧಿಪಡಿಸಿದ ದರಕ್ಕೆ ಮಾರಾಟ ಮಾಡಿ. ವ್ಯಾಪಾರಸ್ಥರುತಮ್ಮ ಸಮಸ್ಯೆಗಳನ್ನು ನಮ್ಮಜೊತೆಗೆ ಹಂಚಿಕೊಳ್ಳಿ ಸ್ಪಂದಿಸಿ ಪರಿಹಾರಕಲ್ಪಿಸುವ ಕೆಲಸ ಮಾಡುತ್ತೇನೆಎಂದರು.ರೈತರಿಗೆಕಡ್ಡಾಯವಾಗಿ ಲಿಂಕ್‌ಗೊಬ್ಬರ ವಿತರಿಸದಂತೆ ಕ್ರಮಕೈಗೊಳ್ಳಿ, ವಿಮೆ ಪಾವತಿಸುವ ವೇಳೆಯಲ್ಲಿ ಏಜೇಂಟರ್‌ಗೆ ಅವಕಾಶ ಕೊಡದೇರೈತರಿಗೆ ನ್ಯಾಯ ಸಿಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನಕಬ್ಬು ಬೆಳೆಗೂ ವಿಮೆ ಸೌಲಭ್ಯಕಲ್ಪಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಈ ಕುರಿತು ಸರಕಾರದ ಗಮನ ಸೆಳೆದು ಪರಿಹಾರಕಲ್ಪಿಸುವ ಭರವಸೆ ನೀಡಿದರು.25 ಕೋಟಿ ವೆಚ್ಚದಲ್ಲಿ ಹೋತನಹಳ್ಳಿ ಭಾಗದ ಕೆರೆಗಳ ಅಭಿವೃದ್ಧಿಕಾಮಗಾರಿ ಕೈಗೊಳ್ಳಲಾಗುತ್ತಿದೆ.  

ನೀರಾವರಿ ಸೌಲಭ್ಯಕ್ಕಾಗಿ 100 ಕೋಟಿ ವೆಚ್ಚದಲ್ಲಿಕಾಮಗಾರಿ ನಡೆಯಲಿದೆಎಂದರು.ನಮ್ಮದಾರಿ, ನಮ್ಮ ಹೊಲ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿಗೆ ಕ್ರಮಕೈಗೊಳ್ಳುತ್ತೇನೆ. ಶಿಗ್ಗಾವಿ ಕ್ಷೇತ್ರದಲ್ಲಿ ಬೀಜ, ಗೊಬ್ಬರದಕೊರತೆಯಾದರೇ ಕೃಷಿ, ತೋಟಗಾರಿಕೆ, ತಹಸೀಲ್ದಾರರು ಅವರೇ ಹೊಣೆಗಾರರುಎಂದು ತಿಳಿಸಿದ ಶಾಸಕರು, ವಿಶೇಷವಾಗಿ ಮಧ್ಯಪ್ರದೇಶದ ಮಾದರಿಯಲ್ಲಿ 350 ಕೋಟಿ ವೆಚ್ಚ ದಲ್ಲಿ ಸವಣೂರಏತ್ ನೀರಾವರಿಯೋಜನೆಅನುಷ್ಠಾನಕ್ಕೆ ಪ್ರಯತ್ನಿಸಲಾಗುತ್ತಿದೆಎಂದರು.   

ಬೆಳೆ ವಿಮೆ ಪಾವತಿಸುವರೈತರಿಗೆ ಪರಿಹಾರ ಬರಬೇಕಾದರೇಏಜೇಂಟರರು ಅಕ್ರಮ ಹಣ ಪಡೆಯುತ್ತಿರುವ ಆರೋಪಗಳು ಬಲುವಾಗಿ ಕೇಳಿ ಬಂದ ಹಿನ್ನಲೆಯಲ್ಲಿ ಶೀಘ್ರದಲ್ಲೇ ಜಿಲ್ಲಾಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಮಾಡಿಏಜೆಂಟರು ಮತ್ತುತಪ್ಪು ಮಾಡಿದ ವಿಮಾ ಕಂಪನಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು.ಸರಕಾರ ನೀಡುವ ಕೃಷಿ ಚಟುವಟಿಕೆಗಳ ಸೌಲಭ್ಯಅರ್ಹರಿಗೆತಲುಪಿಸುವ ಕೆಲಸವಾಗಲಿ, ಅನರ್ಹರಿಗೆ ವಿತರಿಸದಂತೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯಾಸೀರಖಾನ್ ಪಠಾಣ ಸೂಚಿಸಿದರು.   

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಕೊಟ್ರೇಶ್‌ಗೆಜಲಿ, ತಹಸೀಲ್ದಾರ ರವಿಕುಮಾರಕೊರವರ, ತಾಪಂ.ಇಓ ಮಂಜುನಾಥ ಸಾಳೋಂಕಿ, ತಾಲೂಕ ಕೃಷಿಕ ಸಮಾಜದಅಧ್ಯಕ್ಷ ಹನುಮರೆಡ್ಡಿ,ರೈತ ಮುಖಂಡರಾದಯಲ್ಲಪ್ಪ ತಳವಾರ, ಈಶ್ವರಗೌಡ ಪಾಟೀಲ, ಭರತ್‌ಎಸ್‌.ಜಿ, ಗುಡ್ಡಪ್ಪ ಜಲದಿ, ಎಸ್‌.ವಿ.ಪಾಟೀಲ, ಶಂಭುಲಿಂಗಪ್ಪಆಜೂರ, ಮಾಲತೇಶ ಸಾಲಿ ಸೇರಿದಂತೆ ವಿವಿಧ ವ್ಯಾಪಾರಸ್ಥರುರೈತರು ಪಾಲ್ಗೊಂಡಿದ್ದರು.