ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಗಾಗಿ ಪ್ರಾರ್ಥನೆ
Offer special prayers to God and pray for good rains
ಕೊಲ್ಹಾರ 23: ಉತ್ತಮ ಮಳೆ, ಕೃಷಿ ಸಮೃದ್ಧಿ ಹಾಗೂ ಜನಜೀವನದ ಒಳಿತಿಗಾಗಿ ತಾಲೂಕಿನ ಮಟ್ಟಿಹಾಳ ಗ್ರಾಮಸ್ಥರು ಮಂಗಳವಾರ ಕೃಷ್ಣಾ ನದಿ ತೀರದಲ್ಲಿ ಸಂಪ್ರದಾಯಬದ್ಧವಾಗಿ ಗಂಗಾ ಪೂಜೆ ಮತ್ತು ವಿಶೇಷ ಪ್ರಾರ್ಥನೆ ನೆರವೇರಿಸಿದರು.ಹಿಂದೂ ಸಂಪ್ರದಾಯದಲ್ಲಿ ಗಂಗಾಮಾತೆಯ ಆರಾಧನೆ ಹಾಗೂ ಜಲಾಭಿಷೇಕಕ್ಕೆ ವಿಶೇಷ ಮಹತ್ವವಿದ್ದು, ಉತ್ತಮ ಮಳೆ ಮತ್ತು ಸಮೃದ್ಧ ಬೆಳೆಗಾಗಿ ಈ ಆಚರಣೆಯನ್ನು ಅನಾದಿ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಗಂಗಾಜಲವು ಶಿವನಿಗೆ ಅತ್ಯಂತ ಪ್ರಿಯವಾದುದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಮುಂಗಾರು ಆರಂಭವಾದರೂ ಸಮರ್ಕ ಮಳೆಯಾಗದ ಕಾರಣ ರೈತರಲ್ಲಿ ಆತಂಕ ಮನೆ ಮಾಡಿದೆ. ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಕೆರೆ-ಕಟ್ಟೆಗಳು ಬತ್ತುತ್ತಿರುವ ಪರಿಸ್ಥಿತಿಯಲ್ಲಿ ಉತ್ತಮ ಮಳೆಯಾಗಲೆಂದು ವಿಶೇಷ ಪ್ರಾರ್ಥನೆ ಆಯೋಜಿಸಲಾಯಿತು.ನೂರಾರು ಮುತ್ತೈದೆಯರು ಕುಂಭಮೇಳದೊಂದಿಗೆ ಕೃಷ್ಣಾ ನದಿ ದಡಕ್ಕೆ ತೆರಳಿ ಗಂಗಾಮಾತೆಗೆ ಅಭಿಷೇಕ ನೆರವೇರಿಸಿದರು. ಅರಿಶಿನ, ಕುಂಕುಮ, ಹೂವು ಹಾಗೂ ನೈವೇದ್ಯವನ್ನು ಅರ್ಿಸಿ, ವರುಣ ದೇವರನ್ನು ಪ್ರಾರ್ಥಿಸಿ ನಾಡಿನಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ನೆಲೆಸಲೆಂದು ಸಂಕಲ್ಪ ಮಾಡಿದರು.ಪೂಜೆ ಬಳಿಕ ಗ್ರಾಮಸ್ಥರು ಮತ್ತು ಮಹಿಳೆಯರು ಕೊಲ್ಹಾರದ ಕೃಷ್ಣಾ ನದಿ ದಡದಿಂದ ಹತ್ತಾರು ಕಿಲೋಮೀಟರ್‌ಗಳ ಪಾದಯಾತ್ರೆ ಮೂಲಕ ಮಟ್ಟಿಹಾಳ ಗ್ರಾಮಕ್ಕೆ ಆಗಮಿಸಿ, ಗ್ರಾಮದ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ತಮ ಮಳೆಗಾಗಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಸಿದ್ದು ಬಿರಾದಾರ, ಈರ್ಪ ಬಿರಾದಾರ, ಯಮನಪ್ಪ ಬಿರಾದಾರ, ಪರಸು ಗೋಳಗೊಂಡ, ಸಗಪ್ಪ ಅಂಗಡಗೇರಿ, ಸಿದ್ದು ರಾ. ಬಿರಾದಾರ, ಈರಣ್ಣ ಮನಗೂಳಿ, ಹಣಮಂತ ತೇಲಿ, ಪರಸು ಗು. ಗೋಳಗೊಂಡ, ಸಚಿನ್ ಬಿರಾದಾರ, ದುಂಡಪ್ಪ ಪೂಜಾರಿ, ಬೀರು ಪೂಜಾರಿ, ಸಂಗಪ್ಪ ಬಿರಾದಾರ, ಬಸು ಮಟ್ಟಿಹಾಳ ಹಾಗೂ ಹಣಮಂತ ಬಿರಾದಾರ ಸೇರಿದಂತೆ ಗ್ರಾಮಸ್ಥರು ಮತ್ತು ನೂರಾರು ಮಹಿಳೆಯರು ಭಾಗವಹಿಸಿದ್ದರು.
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 