ಜಿಲ್ಲೆಯಲ್ಲಿ ಹೊಸ ಬ್ಯಾಂಕ್ ಶಾಖೆಗಳನ್ನು ಆರಂಭಿಸಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ: ಸಂಸದ ಉದಾಸಿ
ಹಾವೇರಿ12: ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೊಸ ಬ್ಯಾಂಕ್ ಶಾಖೆಗಳನ್ನು ಶೀಘ್ರವಾಗಿ ಆರಂಭಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸಂಸದರಾದ ಶಿವಕುಮಾರ ಉದಾಸಿ ಅವರು ಸೂಚನೆ ನೀಡಿದರು.
ಇತ್ತೀಚೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಆಯೋಜಿಸಲಾದ 2018-19 ನೇ ಸಾಲಿನ ಎರಡನೇ ತ್ರೈಮಾಸಿಕ ಅಂತ್ಯ ಸೆಪ್ಟಂಬರ್-2018 ರ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಮುದ್ರಾ ಯೋಜನೆಯಡಿ ಅಧಿಕ ಸಂಖ್ಯೆಯಲ್ಲಿ ಸಾಲಗಳನ್ನು ವಿತರಣೆ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ ವಿಜಯಾ ಬ್ಯಾಂಕ್ ಪ್ರಾಂತೀಯ ವ್ಯವಸ್ಥಾಪಕ ಚಿದಾನಂದ ಹೆಗ್ಡೆ ಅವರು ಮಾತನಾಡಿ, ಹಾವೇರಿ ಜಿಲ್ಲೆಯ ಒಟ್ಟು ವಾಷರ್ಿಕ ಗುರಿಯಲ್ಲಿ ಪ್ರತಿಶತ ಶೇ 40 ರಷ್ಟು ಸಾಧನೆಯಾಗಿದೆ. ಆದ್ಯತಾ ರಂಗಕ್ಕೆ ಶೇ 41 ರಷ್ಟು, ಕೃಷಿ ರಂಗಕ್ಕೆ ಶೇ 32 ರಷ್ಟು, ಕೈಗಾರಿಕಾ ರಂಗಕ್ಕೆ ಶೇ. 95 ರಷ್ಟು ಮತ್ತು ಇತರೆ ಆಧ್ಯತಾ ರಂಗಕ್ಕೆ ಶೇ 39 ರಷ್ಟು ಸಾಲ ವಿತರಣೆಯಾಗಿರುತ್ತದೆ. ವಾಣಿಜ್ಯ ಬ್ಯಾಂಕ್ಗಳು ವಾಷರ್ಿಕ ಗುರಿಯ ಪ್ರತಿಶತ 36 ರಷ್ಟು ಸಾಲ ವಿತರಣೆ ಮಾಡಿದ್ದರೆ, ಕೆ.ವಿ.ಜಿ ಬ್ಯಾಂಕ್ ಪ್ರತಿಶತ ಶೇ.54 ರಷ್ಟು, ಕೆ.ಸಿ.ಸಿ ಬ್ಯಾಂಕ್ ಶೇ. 12 ರಷ್ಟು ಮತ್ತು ಕೆ.ಎಸ್.ಎಫ್.ಸಿ ಪ್ರತಿಶತ 12 ರಷ್ಟು ಸಾಧನೆ ಮಾಡಿರುತ್ತವೆ ಎಂದು ತಿಳಿಸಿದರು.
ತಾಲೂಕುವಾರು ಸಾಧನೆಯಲ್ಲಿ ಹಾನಗಲ್ ಪ್ರಥಮ ಸ್ಥಾನದಲ್ಲಿದ್ದರೆ, ಬ್ಯಾಡಗಿ ದ್ವಿತೀಯ ಸ್ಥಾನದಲ್ಲಿದೆ. ಶಿಗ್ಗಾಂವ, ಹಿರೇಕೆರೂರು, ಹಾವೇರಿ, ಸವಣೂರ ಹಾಗೂ ರಾಣೇಬೆನ್ನೂರು ಕ್ರಮವಾಗಿ ನಂತರದ ಸ್ಥಾನಗಳಲ್ಲಿರುತ್ತವೆ. ಜಿಲ್ಲೆಯಲ್ಲಿ ದುರ್ಬಲ ವರ್ಗದವರಿಗೆ ಇಲ್ಲಿಯವರೆಗೆ ಒಟ್ಟು ರೂ. 596.76 ಕೋಟಿ ಸಾಲ ವಿತರಣೆ ಆಗಿರುತ್ತದೆ. ಡಿ.ಆರ್.ಐ ಅಡಿಯಲ್ಲಿ ರೂ 0.01 ಕೋಟಿ ವಿತರಣೆ ಆಗಿರುತ್ತದೆ. ಅಲ್ಪ ಸಂಖ್ಯಾತರಿಗೆ ರೂ. 509.43 ಕೋಟಿ ಆಗಿರುತ್ತದೆ ಎಂದು ಹೇಳಿದರು.
ಅದೇ ರೀತಿ 2017-18 ರ ಮುಂಗಾರು ಹಂಗಾಮಿನಲ್ಲಿ ಪಿ.ಎಮ್.ಎಫ್.ಬಿ.ವಾಯ್ ಅಡಿಯಲ್ಲಿ 144825 ಕ್ಕಿಂತ ಅಧಿಕ ಅಜರ್ಿಗಳನ್ನು ನೋಂದಾಯಿಸಿದ್ದು ಈ ಸಾಲಿನಲ್ಲಿ 35576 ಫಲಾನುಭವಿಗಳಿಗೆ ರೂ. 28.84 ಕೋಟಿ ಕ್ಲೇಮ್ ಬಂದಿರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಬಾರ್ಡನ ಹಾವೇರಿ ಜಿಲ್ಲೆಯ ಸಾಮಥ್ರ್ಯ ಆಧಾರಿತ ಸಾಲ ಯೋಜನೆ (ಕಐಕ ಃಠಠಞ) 2019-2020 ನ್ನು ಸಂಸದರಾದ ಶಿವಕುಮಾರ ಉದಾಸಿಯವರು ಬಿಡುಗಡೆಗೊಳಿಸಿದರು.
ಹಾವೇರಿ ಜಿಲ್ಲೆಯ ನಬಾರ್ಡನ ಅಭಿವೃದ್ಧಿ ವ್ಯವಸ್ಥಾಪಕರಾದ ಮಹದೇವ ಕೀತರ್ಿ ಅವರು ಮಾತನಾಡಿ, ಹಾವೇರಿ ಜಿಲ್ಲೆಗೆ 2019-2020 ವಾಷರ್ಿಕದಲ್ಲಿ ರೂ.4789 ಕೋಟಿಯಷ್ಟು ಸಾಲ ಯೋಜನೆಯನ್ನು ಹಾಕಿಕೊಂಡಿದ್ದು, ಇದು 2018-19 ನೇ ಸಾಲಿಗಿಂತ ರೂ.231 ಕೋಟಿ ಹೆಚ್ಚು ಇರುತ್ತದೆ. ಈ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯು ಮುಂದಿನ ಆಥರ್ಿಕ ವರ್ಷದ ಸಾಲ ವಿತರಣೆಯ ಗುರಿ ನಿಗದಿ ಪಡಿಸಲು ಒಂದು ಕೈಪಿಡಿಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಬ್ಯಾಡಗಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಕೆ ಕರಿಯಣ್ಣನವರ, ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ದೀಪಾ ಅತ್ತಿಗೇರಿ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಕೆ. ಲೀಲಾವತಿ, ಜಿ.ಪಂ.ಉಪಕಾರ್ಯದಶರ್ಿ ಜಿ.ಗೋವಿಂದಸ್ವಾಮಿ, ವಿಜಯ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎನ್.ಕದರಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 