ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಇಷ್ಟದಿಂದ ಓದಿದರೆ ಅಸಾಧ್ಯವಾದ ಮತ್ತೊಂದಿಲ್ಲಾ: ಪದ್ಮಭೂಷಣ ಸುಧಾಮೂರ್ತಿ

* 350 ಕೋಟಿ ರೂಗಳ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ  ಕೆ,ಎಲ್,ಇ, ಸಂಸ್ಥೆ ಪ್ರಾರಂಭಿಸಲಿದೆ, 

* ಮುಂಬೈನಲ್ಲಿ 3 ಎಕರೆ ಸ್ಥಳದಲ್ಲಿ 22 ಕೋಟಿ ರೂಗಳ ವೆಚ್ಚದಲ್ಲಿ ಕನ್ನಡ ಮಾಧ್ಯಮ ಶಾಲೆ  ಪ್ರಾರಂಭಿಸಲಿದೆ.

ಉಳ್ಳಾಗಡ್ಡಿ-ಖಾನಾಪೂರ: ಜೀವನದಲ್ಲಿ ವಿದ್ಯಾರ್ಥಿಗಳು ಪರಿಶ್ರಮದಿಂದ ಕಷ್ಟಪಟ್ಟು ಓದಿದಾಗ ಅಸಾಧ್ಯವಾದುದು ಮತ್ತೊಂದಿಲ್ಲಾ. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಕಲಿಯುವ ಕಾಲದಲ್ಲಿ ಕಲಿತಾಗ ಸಾರ್ಥಕತೆ ಬರುತ್ತದೆ ಇಲ್ಲವಾದಲ್ಲಿ ಕಷ್ಠ ಕಟ್ಟಿಟ್ಟ ಬುತ್ತಿ, ಕಠಿಣ ಶ್ರಮದಿಂದ ಮಾತ್ರ ಮುಂದೆ ಯಶಸ್ಸು ಎಂಬ ಏಣಿಯನ್ನು ಹತ್ತಲು ಸಾಧ್ಯ ಎಂದು ಇನ್ಪೂಸೀಸ್ ಫೌಂಡೇಶನಿನ ಅಧ್ಯಕ್ಷೆ ಮತ್ತು ರಾಜ ಸಭಾ ಸದಸ್ಯರು, ಪದ್ಮಭೂಷಣ ಪುರಸ್ಕೃತರಾದ ಸುಧಾಮೂರ್ತಿ ಹೇಳಿದರು, 

 ಅವರು ಶನಿವಾರ ದಿ,13 ರಂದು ಗವನಾಳ ಗ್ರಾಮದ ಬಳಿ ನೂತನವಾಗಿ ನಿರ್ಮಿಸಿರುವ ಕೆ,ಎಲ್,ಇ, ಸಂಸ್ಥೆಯ ಸಿ,ಬಿ,ಎಸ್,ಇ, ಶಾಲೆಯ ನೂತನ ಕಟ್ಟಡ ಹಾಗೂ ಶಾಲೆಗೆ ಮಾಲೂತಾಯಿ ಶಿವಪುತ್ರ ಶಿರಕೊಳಿ ನಾಮಕರಣ ಸಮಾರಂಭದ ಜೋತಿ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ವಿಧ್ಯೆ ನೀಡಿದ ಶಾಲೆಯನ್ನು ಎಂದಿಗೂ ಮರೆಯಬಾರದು ಅದು ನನ್ನ ತವರುಮನೆ ಇದ್ದ ಹಾಗೆ ಕಲಿತು ಉತ್ತಮ ಮಟ್ಟ-್ದಲ್ಲಿದ್ದಾಗ ದುಡಿಮೆಯ ಒಂದು ಪ್ರತಿಶತದಷ್ಟು ಕಲಿತ ಶಾಲೆಗೆ ದಾನ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಲಿದ ಅವರು, ಕೆ,ಎಲ್,ಇ,ಯ ಭೂಮರೆಡ್ಡಿ ಕಾಲೇಜು ಇರುತ್ತಿರಲಿಲ್ಲಾ ಅಂದರೆ ನಾನು ಈ ಮಟ್ಟದಲ್ಲಿ ಇರುತ್ತಿರಲಿಲ್ಲಾ ನಾನು ಇಂಜಿನಿಯರ್ ಆಗುತ್ತಿರಲಿಲ್ಲಾ ಕೆ,ಎಲ್,ಇ,ಸ್ಥಾಪಿಸಿದ ಋಷಿಗಳಿಗೆ ನಾನು ತಲೆಬಾಗುವೆ ವಿಧ್ಯಾರ್ಥಿಗಳು ಪದವಿ ಮುಗಿದ ನಂತರ ಕೊಟ್ಟ್‌ ಕೆಲಸವನ್ನು ಸರಿಯಾಗಿ ನಿರ್ವಹಿಸಿದರೆ ಜೀವನ ಸಾರ್ಥಕವಾಗುತ್ತದೆ, ಹಸಿದರೆ ಅನ್ನ ನೀರು ದೊರೆಯುತ್ತದೆ ಆದರೆ ನಮ್ಮ ಹೆಜ್ಜೆ ಮೇಲೆ ನಾವು ನಾವಿದ್ದರೆ ಅದೇ ಶ್ರೇಷ್ಠ ಮೇಟ್ಟಿಲು ಹತ್ತುವಾಗ ಅಸಫಲತೆಗಳು ಕಾಣುತ್ತವೆ ಆದರೆ ಅದನ್ನು ತೋರೆದು ಪ್ರಯತ್ನಶೀಲರಾದಾಗ ಯಶಸ್ಸು ಕಟ್ಟಿಟ ಬುತ್ತಿ ಆದ್ದರಿಂದ ಶಿಕ್ಷಕರು, ಗುರು ಹಿರಿಯರು, ನೀಡಿದ ಮಾರ್ಗದಲ್ಲಿ ಸಾಗಿದಾಗ ಉತ್ತಮ ಭವಿಷ್ಯ ಕಟ್ಟಲು ಸಾಧ್ಯ ಶಿಕ್ಷಣಕ್ಕೆ ದಾನವಾಗಿ ಶಿರಕೊಳಿ ಕುಟುಂಬಸ್ಥರು ನೀಡಿರುವ ಭೂದಾನವನ್ನು ಸುಧಾಮೂರ್ತಿಯವರು ಶ್ಲಾಘೀಸಿದರು, 

ದಿವ್ಯ ಸಾನಿಧ್ಯ ವಹಿಸಿದ್ದ  ನಿಡಸೋಸಿಯ ಶಿವಲಿಮಗೇಶ್ವರ ಶ್ರೀಗಳು ಆಶಿರ್ವಚನ ನೀಡಿ ನಮ್ಮ ಪೂರ್ವಜರು ಶಿಕ್ಷಣಕ್ಕಾಗಿ ಬಹುದೂರದ ಪುನಾ, ಮುಂಬೈ ನಂತಹ ನಗರಗಳಿಗೆ ತೆರಳುತ್ತಿದ್ದರು, ಆದರೆ ಕತ್ತಲೆಇದ್ದ ನಾಡಿನಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ದಿಲ್ಲಿಯಿಂದ ಹೊರದೇಶದ ವರೆಗೆ ಕೆ,ಎಲ್,ಇ, ಸಂಸ್ಥೆ ಕಾರ್ಯಮಾಡಿದೆ ಇಂಥಹ ಸಂಸ್ಥೆ ಬೆಳೆಯಲು ಮಠ-ಮಾನ್ಯಗಳು, ಸಪ್ತ ಋಷಿಗಳು ಶ್ರಮ ಪಟ್ಟಿದ್ದಾರೆ, ಎಂದ ಅವರು ಶಿರಕೋಳಿ ಕುಟುಂಬದ ದಾನ ರೂಪಗಳ ಮತ್ತು ಕಾರ್ಯಗಳ ಬಗ್ಗೆ ಮಾತನಾಡಿದರು, 

ಪ್ರಾಸ್ತಾವಿಕವಾಗಿ ಕಾರ್ಯಾಧ್ಯಕ್ಷರಾದ ಡಾಽಽ ಪ್ರಭಾಕರ ಕೋರೆ ಮಾತನಾಡಿ ಕೆ,ಎಲ್,ಇ, ಸಂಸ್ಥೆ ನಡೆದು ಬಂದ ದಾರಿ, ಸಂಸ್ಥೆ ರೂಪುಗೊಳ್ಳಲು ಸಪ್ತ ಋಷಿಗಳು ಪಟ್ಟ ಕಷ್ಟ- ಸಂಕಷ್ಟಗಳನ್ನು ಸ್ಮರಿಸಿದ ಅವರು ಗ್ರಾಮೀಣ ವಲಯದಲ್ಲಿ 310 ನೇಯ ಸಂಸ್ಥೆ ಇದಾಗಿದ್ದು ಇಲ್ಲಿ ಉನ್ನತ ಶಿಕ್ಷಣ ನೀಡುವ ಉದ್ದೇಶ ವ್ಯಕ್ತಪಡಿಸಿದ ಅವರು ಲಿಂಗರಾಜ ಮಹಾರಾಜರು ಮತ್ತು ಭೂಮರೆಡ್ಡಿ ಹೀಗೆ ಹಲವು ಮಾಹಾನರು ಈ ಸಂಸ್ಥೆಯ ಬೆಳವಣಿಗೆಗೆ ತಮ್ಮ ಧಾರೆಯನ್ನು ಎರೆದಿದ್ದಾರೆ. ಸದ್ಯ 4500 ಹಾಸಿಗೆಯುಳ್ಳ ಆಸ್ಪತ್ರೆ ನಡೆಸುತ್ತಿದ್ದು ಮುಂಬರುವ ದಿನಗಳಲ್ಲಿ 350 ಕೋಟಿ ರೂಗಳ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ಕೆ,ಎಲ್,ಇ, ಸಂಸ್ಥೆ ಪ್ರಾರಂಭಿಸಲಿದೆ, ಇಂದು ಲಿಂಗರಾಜ ಮಹಾರಾಜರ ಮತ್ತು ಭೂಮರೆಡ್ಡಿ ದಾನಿಯವರ ಪಟ್ಟಿಯಲ್ಲಿ ಅಪ್ಪಾಸಾಹೇಬ ಶಿರಕೋಳಿ ಸೇರಿದ್ದಾರೆ ಅವರು ಈ ಶಾಲೆ ಪ್ರಾರಂಭಿಸಲು 5 ಎಕರೆ ಭೂಮಿಯನ್ನು ದಾನದ ರೂಪದಲ್ಲಿ ನೀಡಿದ್ದಾರೆ, ಮುಂಬೈನಲ್ಲಿ 3 ಎಕರೆ ಸ್ಥಳದಲ್ಲಿ 22 ಕೋಟಿ ರೂಗಳ ವೆಚ್ಚದಲ್ಲಿ ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸಲಾಗುವುದು ಎಂದರು. ಕೆ.ಎಲ್‌.ಇ ಅಧ್ಯಕ್ಷ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ 1966 ರಲ್ಲಿ ಪ್ರಾರಂಭವಾದ ಕೆ.ಎಲ್‌.ಇ ಸಂಸ್ಥೆ ಶಿಕ್ಷಣ ವೈಧ್ಯಕೀಯ, ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಮಾಡಿದೆ ಈ ಬಾಗದ ಮಕ್ಕಳ ಭವಿಷ್ಯಕ್ಕಾಗಿ ದಾನ ಮಾಡಿರುವ ಶಿರಕೋಳಿ ಕುಟುಂಬದ ಸೇವೆ ಅನನ್ಯ ಎಂದರು, ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಮಾತನಾಡಿ ಈ ಭಾಗದಲ್ಲಿನ ಒಳ್ಳೆಯ ಶಿಕ್ಷಕರನ್ನು ನೀಡಿ ಮಕ್ಕಳ ಭವಿಷ್ಯಕ್ಕಾಗಿ ಸಹಕರಿಸುವಂತೆ ಆಡಳಿತ ಮಂಡಳಿಯವರನ್ನು ಕೊರಿ ಶಿರಕೋಳಿ ಕುಟುಂಬದ ದಾನವನ್ನು ಕೊಂಡಾಡಿದರು, 

ಈ ಸಂದರ್ಭದಲ್ಲಿ ಪದ್ಮಭೂಷಣ ಸುಧಾಮೂರ್ತಿ ಹಾಗೂ ದಾನಿಗಳಾದ ಶಿರಕೊಳಿ ಕುಟುಂಬವನ್ನು ಸತ್ಕರಿಸಲಾಯಿತು, ಕಾರ್ಯಕ್ರಮದಲ್ಲಿ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಶಾಸಕ ನಿಖಿಲ್ ಕತ್ತಿ, ರಾಹುಲ್ ಜಾರಕಿಹೊಳಿ, ಅಪ್ಪಾಸಾಹೇಬ ಶಿರಕೋಳಿ, 

ಸಂಕೇಶ್ವರ ಗವನಾಳ ವಲಯದ ಮುಖಂಡರು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಶಿಕ್ಷಕ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು,