ಸಾರ್ಥಕ ಜೀವನಕ್ಕೆ ಪುರಾಣ ಪ್ರವಚನಗಳು ಪೂರಕ: ಮುರುಘರಾಜೇಂದ್ರ ಶ್ರೀ

ಬೈಲಹೊಂಗಲ 30: ಸಾರ್ಥಕ ಜೀವನಕ್ಕೆ ಪುರಾಣ ಪ್ರವಚನಗಳು ಪೂರಕವಾಗಿವೆ ಎಂದು ಮುನವಳ್ಳಿ ಸೋಮಶೇಖರಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.  

ಅವರು ಪಟ್ಟಣದ ದಾನಮ್ಮದೇವಿ ದೇವಸ್ಥಾನದ 15 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುರಾಣ ಪ್ರವಚನ ಆಲಿಸುವುದರಿಂದ ಒಳ್ಳೆಯ ವಿಚಾರಗಳು ಮೂಡುತ್ತವೆ. ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ. ಯುವ ಜನತೆ ಹೆಚ್ಚಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಧ್ಯಾತ್ಮಿಕದತ್ತ ಒಲವು ತೋರಬೇಕು.  ಭಕ್ತಿ ಬದುಕನ್ನು ದಿವ್ಯಗೊಳಿಸುವ ಮಧುರ ಸಾಧನ. ಹಿರಿಯರಾಗಲಿ ಕಿರಿಯರಾಗಲಿ ಅವರ ಮನಸ್ಸುಗಳಲ್ಲಿ ಭಕ್ತಿ ಭಾವವನ್ನು ಒಡ ಮೂಡಬೇಕು. ಭಗವಂತನ, ಮಹಾತ್ಮರ, ಶರಣರ ತತ್ವಾದರ್ಶಗಳನ್ನು ಆಲಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.  

ಪ್ರವಚನಕಾರ ನರಗುಂದ ತಪೋತಾಣ ಪತ್ರಿವನಮಠದ ಡಾ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ, ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಮಡಿವಾಳೇಶ್ವರಮಠದ ಮಡಿವಾಳೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.  

ದಾನಮ್ಮದೇವಿ ದೇವಸ್ಥಾನ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟ ಶಿವರಂಜನ ಬೋಳನ್ನವರ, ಡಾ. ಎನ್  ಎಂ  ಪಾಟೀಲ, ವೇದಿಕೆ ಮೇಲೆ ಇದ್ದರು. ಜಿ ಜಿ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

ವ್ಹಿ ಕೆ ಬಡ್ಲಿ, ಬಿ ಎಂ ಮೂಲಿಮನಿ, ಎಂ ಬಿ ರೊಟ್ಟಿ, ಬಿ ಸಿ ಕರೀಕಟ್ಟಿ, ನೀಲಪ್ಪ ಕಲ್ಲೂರ, ಈಶ್ವರ ಅಂಗಡಿ, ಜಿ ಬಿ ಶೀಗಿ ಹಳ್ಳಿ, ಜಗದೀಶ ಜಂಬಗಿ,ಸೋಮಪ್ಪ ಶಿರವಂತಿ, ಬಸಯ್ಯ ಹಿರೇಮಠ, ವ್ಹಿ ಎ ಅಣ್ಣಿಗೇರಿ, ಜಿ ಬಿ ಮೆಳವಂಕಿ, ಎಂ ಎನ್ ತೋರಣಗಟ್ಟಿ, ಈರ​‍್ಪ ಸತ್ತಿಗೇರಿ, ಶಿವಾನಂದ ದೊಡವಾಡ, ಬಸವರಾಜ ತಲ್ಲೂರ, ಶಿವಲಿಂಗಪ್ಪ ಖಾನಪ್ಪನವರ, ಅನಿಲ ರಾಜಣ್ಣವರ,  ಬಸವರಾಜ  ಹುಣಶೀಕಟ್ಟಿ, ವಿ ಎಂ ಹಣಬರಟ್ಟಿ,ಮಹಾಂತೇಶ ಮತ್ತಿಕೊಪ್ಪ ಪ್ರಕಾಶ ಬಡ್ಲಿ ಹಾಗೂ ಭಕ್ತರು ಇದ್ದರು.