ನೇಹಾ ಕೊಲೆ: ಫಯಾಜಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಯರಗಟ್ಟಿ 19: ಹುಬ್ಬಳ್ಳಿಯಲ್ಲಿ ನಿನ್ನೆ ನೇಹಾ ಎಂಬ ಯುವತಿಯನ್ನು ಭೀಕರ ಕೊಲೆ ಮಾಡಿದ ಫಯಾಜನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಸಮೀಪದ ಮುನವಳ್ಳಿಯ ಪಂಚಲಿಂಗೇಶ್ವರ ಸರ್ಕಲ್‌ದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. 

ಫಯಾಜ್, ಮುನವಳ್ಳಿಯ ಹೆಸರಿಗೆ ಕಪ್ಪು ಮಸಿ ಬಳಿದಿದ್ದಾನೆ. ಯಾರ ಮಗುವಾದರು ಅಷ್ಟೇ. ನೇಹಾಳ ಕೊಲೆ ಮುನವಳ್ಳಿಯ ಜನತೆಯ ಹೃದಯ ಘಾಸಿಗೊಳಿಸಿದೆ ಎಂದು ಕಂಬನಿ ಮಿಡಿದಿದ್ದಾರೆ. 

ಫಯಾಜ್‌ನಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಮುನವಳ್ಳಿಯ ಹಿಂದೂ ಮುಸ್ಲಿಮ್ ಧರ್ಮಿಯರು ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು ನಾನು ಒಬ್ಬ ಹೆಣ್ಣುಮಗಳ ತಂದೆಯಾಗಿ ತೀವ್ರವಾಗಿ ಖಂಡಿಸುತ್ತೇನೆ. ನನಗೂ ಓರ್ವ ಹೆಣ್ಣು ಮಗಳಿದ್ದು ಇಂಥ ಘಟನೆಗಳನ್ನು ನಾನು ಸಹಿಸಲ್ಲ. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ  ಮಹಾನಗರ ಪಾಲಿಕೆ ಸದಸ್ಯರು ಆದ  ನಿರಂಜನ ಹಿರೇಮಠ ಅವರ ಪುತ್ರಿಯ ಕೊಲೆ ನನಗೆ ಆಘಾತ ತರಸಿದ್ದು, ಕೊಲೆಗಡುಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ, ಅವರಗೆ ಕಠಿಣ ಕಾನೂನು ಕ್ರಮ ಕೈಗೊಂಡು ಅವರಿಗೆ ತಕ್ಕ ಪಾಠ ಕಲಿಸಬೇಕು. ಆ ಯುವತಿಯ ಕುಟುಂಬಕ್ಕೆ ನ್ಯಾಯ ಸಿಗಲಿ, ಈ ತರಹದ ಅನ್ಯಾಯಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿದರು. 

ಇತ್ತೀಚೆಗೆ ರಾಜ್ಯದಲ್ಲಿ  ನೂರಾರು ಪ್ರೀತಿ ಪ್ರೇಮಗಳ ನೆಪಗಳ ಸುತ್ತ ಹತ್ಯೆಗಳು, ಆಸಿಡ್ ದಾಳಿಗಳು ನಮ್ಮ ನಡುವೆ ನಡೆಯುತ್ತಲೇ ಇವೆ. ಈ ಕೃತ್ಯಗಳು ಅಮಾನವೀಯ ಹಾಗು ಶಿಕ್ಷಾರ್ಹ. ಇಂತಹ ಘಟನೆಗಳು ನಡೆದಿವೆ ಆದರು ಮಹಿಳೆಯರ ವಿಚಾರದಲ್ಲಿ ರಾಜ್ಯ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. 

ಈರಣ್ಣಾ ಕಡಾಡಿ, ಸಂಸದರು, ಬೆಳಗಾವಿ