ಪುಟ್ ಪಾತ್ ಮೇಲಿನ ಅಂಗಡಿಗಳು ತೆರವಿಗೆ ಅಗತ್ಯ ಕ್ರಮ - ಜಿಲಾಧಿಕಾರಿ
Necessary action to clear shops on footpaths - District Magistrate
ಹೂವಿನಹಡಗಲಿ 16 : ಜಿಲ್ಲೆಯಲ್ಲಿ ಜನರ ಜೀವನಾಡಿ ಬಹುತೇಕ ಕೆರೆಗಳು ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೂಡಲೇ ಕೆರೆಗಳ ಸಂರಕ್ಷಣೆ ಜತೆಗೆ ಒತ್ತುವರಿಯನ್ನು ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹೇಳಿದರು. .ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದು.ಸರ್ಕಾರದ ನಿರ್ದೇಶನದಂತೆ ಈಗಾಗಲೇ ಲ್ಯಾಂಡ್ ಬೀಟ್ ಮೂಲಕ ಸರ್ಕಾರಿ ಭೂಮಿ ಒತ್ತುವರಿ ಕುರಿತು ಮಾಹಿತಿ ಸಂಗ್ರಹಿಸಿ ಅನೇಕ ಕಡೆಗಳಲ್ಲಿ ತೆರವು ಗೊಳಿಸಲಾಗಿದ್ದು ಉಳಿದ ಕಡೆಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಭೂ ಮಾಪನ ಇಲಾಖೆಯಲ್ಲಿ ನಕಾಶೆ, ಆಕಾರ್ ಬಂದ್ ಸೇರಿದಂತೆ ಮಹತ್ವ ದಾಖಲೆಗಳೇ ಇಲ್ಲ.
ಅರ್ಜಿ ಹಾಕಿದ ರೈತರಿಗೆ ನಮ್ಮಲ್ಲಿ ಲಭ್ಯ ಇಲ್ಲ ಎಂದು ಹಿಂಬರಹ ನೀಡುತ್ತಿದ್ದಾರೆ. ಕೇಳಿದರೆ ಸಿಬ್ಬಂದಿ ಕೊರತೆ ನೆಪ ಹೇಳುತ್ತಾರೆ ಇದೀಗ 6 ಸರ್ವೇಯರ್ ನಿಯೋಜಿಸಿದ ದ್ದು ಕೆಲಸ ನಡೆಯುತ್ತದೆ ಎಂದರು. ಗ್ರಾಮಗಳಲ್ಲಿ ಸ್ಮಶಾನಕ್ಕೆ ಸರ್ಕಾರಿ ಭೂಮಿ ಕೊಡುವುದಾಗಿ ಹೇಳಿದ ಅವರು ಭೂಮಿ ಇಲ್ಲದಿದ್ದರೆ ಖರೀದಿ ಮಾಡಿ ಸ್ಮಶಾನಕ್ಕೆ ಜಾಗ ನೀಡುತ್ತವೆ ಎಂದರು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ಹೊಸದಾಗಿ ವೃತ್ತ ನಿರ್ಮಾಣ ಮತ್ತು ಹೊಸ ಮೂರ್ತಿ ಪ್ರತಿಷ್ಟಾಪನೆಗಾಗಿ, ಹಳೆ ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸುವ ಕುರಿತು ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದಾಗ ಒಬ್ಬ ಮಹಿಳಾ ಪೊಲೀಸ್ ಮಾತ್ರ ಇದ್ದು, ಪಿಎಸ್‌ಐ ಮಣಿಕಂಠಇರಲಿಲ್ಲ ಕೂಡಲೇ ಬರಲಿಕ್ಕೆ ಹೇಳಿದರು ಬರಲಿಲ್ಲ ಕೇಸು ಮಾಡುವುದಾಗಿ ಎಚ್ಚರಿಕೆ ನೀಡಿದರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾಗಳಿಗೆ ದೂರವಾಣಿ ಕರೆ ಮಾಡಿದ್ದಾರೆ. ಕೂಡಲೇ ಪುಟ್ಪಾತ್ ವೀಕ್ಷಣೆ ಮಾಡುತ್ತಿ ದ್ದಾಗ ಪಿಎಸ್‌ಐ ಪ್ರತ್ಯಕ್ಷ ವಾದರು. ಡಿಸಿ ಪಿಎಸ್ ಐ ವಿಚಾರಿಸಿದಾಗ ಬಂದೋಬಸ್ತಗೆ ಹೋಗಿರುವುದಾಗಿ ಹೇಳಿದರು. ಪುಟ್ ಪಾತ್ ನ ಮೇಲಿನ ಅಂಗಡಿಗಳನ್ನು ಕೂಡಲೇ ತೆರವು ಮಾಡಲು ತಹಶಿಲ್ದಾರರ ಮತ್ತು ಮುಖಾಧಿಕಾರಿ ಇಮಾಮ್ ಸಾಹೇಬ್ ಅವರಿಗೆ ಸೂಚಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 