ಪುಣೆಯಿಂದ ಗೋವಾಗೆ ಟೆಸ್ಟ್ ಕಿಟ್ ಗಳನ್ನು ಸಾಗಿಸಿದ ನೌಕಾಪಡೆಯ ವಿಮಾನ
ಪಣಜಿ, ಏ7, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನೌಕಾಪಡೆ ಸರ್ಕಾರದೊಂದಿಗೆ ಕೈಜೋಡಿಸಿದೆ. ದಕ್ಷಿಣ ಗೋವಾದ ಡಬೋಲಿಯಂನ ಐಎನ್ ಎಸ್ ಹಂಸದಿಂದ ನೌಕಾಪಡೆಯ ಡೋರ್ನಿಯರ್ ವಿಮಾನ ಪುಣೆಗೆ ಹಾರಾಟ ನಡೆಸಿ, ಅಲ್ಲಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ(ಎನ್ ಐವಿ) ಡಾ.ದಿಲೀಪ್ ಹಿಂಗೆ ಅವರನ್ನು ಗೋವಾಗೆ ಕರೆತಂದಿದೆ.ಇದರೊಂದಿಗೆ ಅನೇಕ ಕೋವಿಡ್-19 ಪರೀಕ್ಷಾ ಕಿಟ್ ಗಳನ್ನು ಕೂಡ ಕರೆತರಲಾಗಿದೆ. ಡಾ.ಹಿಂಗೆ ಅವರು ಗೋವಾ ವೈದ್ಯಕೀಯ ಕಾಲೇಜಿನ ವೈರಾಲಜಿ ಪ್ರಯೋಗಾಲಯದ ಮೈಕ್ರೋ ಬಯೋಲಜಿಸ್ಟ್ ಗಳಿಗೆ ತರಬೇತಿ ನೀಡುವ ನಿರೀಕ್ಷೆಯಿದೆ ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 