ಅಭಿವೃದ್ಧಿ ಜೊತೆಗೆ ಹಿಂದು-ಮುಸ್ಲಿಂ ಸೌಹಾರ್ದದ ಸಾಂಸ್ಕೃತಿಕ ಹಿರಿಮೆ
Navaratri festival in the city's Indira Nagar
ಪಟ್ಟಣದ ಇಂದಿರಾ ನಗರದಲ್ಲಿ ಕಳೆಗಟ್ಟಿದ ನವರಾತ್ರಿ ಉತ್ಸವ:
ಚಿಕ್ಕೋಡಿ 28 : ಪಟ್ಟಣದ ಇಂದಿರಾ ನಗರದಲ್ಲಿ ಈ ಬಾರಿ ನವರಾತ್ರಿ ಉತ್ಸವವು ವಿಭಿನ್ನವಾಗಿ ಕಳೆಗಟ್ಟಿದೆ. ಪುರಸಭೆ ಸದಸ್ಯ ಸಾಭೀರ ಜಮಾದಾರ ಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಉತ್ಸವವು ಭಕ್ತಿಭಾವದ ಜೊತೆಗೆ ಸೌಹಾರ್ದ ಮತ್ತು ಸಾಂಸ್ಕೃತಿಕ ಏಕತೆಯ ಸಂದೇಶವನ್ನೂ ಹರಡುತ್ತಿದೆ.ಪ್ರತಿದಿನ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಹಮ್ಮಿಕೊಂಡಿರುವ ದಾಂಡಿಯಾ ಕಾರ್ಯಕ್ರಮಗಳು ಜನಮನ ಸೆಳೆಯುತ್ತಿವೆ.
ಹಬ್ಬದಲ್ಲಿ ಹಿಂದುಹಿಮುಸ್ಲಿಂ ಸಮುದಾಯದ ನಾಗರಿಕರು ಒಂದಾಗಿ ಪಾಲ್ಗೊಂಡು, ಪರಸ್ಪರ ಸಹಕಾರ ಮತ್ತು ಸಹಭಾಗಿತ್ವದ ಮೂಲಕ ಭಾವೈಕ್ಯತೆಗೂ ಸಾಕ್ಷಿಯಾಗುತ್ತಿದ್ದಾರೆ.ಉತ್ಸವಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತನಿಗೂ ಪ್ರತಿದಿನ ವಿಭಿನ್ನ ರೀತಿಯ ಪ್ರಸಾದ ಸೇವೆ ಕಲ್ಪಿಸಿರುವುದು ವಿಶೇಷ ಆಕರ್ಷಣೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚೈತನ್ಯವನ್ನು ತುಂಬಿಸಿರುವ ಈ ಉತ್ಸವವು ಪಟ್ಟಣದ ಜನತೆಗೆ ಹಬ್ಬದ ಖುಷಿಯ ಜೊತೆಗೆ ಸೌಹಾರ್ದದ ಉತ್ಸವ ಎಂಬ ಹೆಗ್ಗಳಿಕೆಯನ್ನು ತಂದಿದೆ.ಕಳೆದ 10 ವರ್ಷದಿಂದ ಸಾಮಾಜಿಕ ಸೇವೆ ಮಾಡುತ್ತಾ ಬಂದಿರುವ ಸಾಭೀರ ಜಮಾದಾರ ಅವರು ಧಾರ್ಮಿಕ ಕಾರ್ಯಗಳಿಗೆ ಅಷ್ಟೇ ಮಹತ್ವ ಕೊಡುತ್ತಾರೆ. ಗಣೇಶ ಉತ್ಸವ ಅದ್ದೂರಿಯಾಗಿ ಆಚರಿಸಿ ಜನಮನ ಸೆಳೆದಿದ್ದರು.ಪಟ್ಟಣದ ತಮ್ಮ ವಾರ್ಡದ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಅವರು ಅಭಿವೃದ್ಧಿ ಜೊತೆಗೆ ಭಾವೈಕ್ಯತೆಗೂ ಬುನಾದಿ ಹಾಕುತ್ತಿರುವ ಈ ನವರಾತ್ರಿ, ಚಿಕ್ಕೋಡಿ ಪಟ್ಟಣದ ಜನತೆಗೆ ಹಬ್ಬದ ಸಂಭ್ರಮವನ್ನು ಇನ್ನಷ್ಟು ದಟ್ಟಗೊಳಿಸಿದೆ.ಪಟ್ಟಣದ ಇಂದಿರಾ ನಗರದಲ್ಲಿ ಪ್ರತಿ ವರ್ಷವು ನವರಾತ್ರಿಸಂಭ್ರಮದಿಂದ ಆಚರಣೆ ನಡೆಯುತ್ತದೆ.
ಸಾಭೀರ ಜಮಾದಾರ ಅವರು ದಾಂಡಿಯಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ಕೊಡುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ನಿವಾಸಿ ಅಕ್ಷತಾ ದೊಡಮನಿ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 