ಅಮೂರ್ತತೆಯಲ್ಲಿ ಪ್ರಕೃತಿ: ಸುಶೀಲ್ ತರಬರ ಚಿತ್ರಕಲಾ ಪ್ರದರ್ಶನ
Nature in Abstraction: Sushil Tarabara's Art Exhibition
ಬೆಳಗಾವಿ, ಆ.12: ಬೆಳಗಾವಿಯ ಚಿತ್ರಕಲಾವಿದ ಸುಶೀಲ್ ತರಬರ ಅವರ ‘ಅಮೂರ್ತತೆಯಲ್ಲಿ ಪ್ರಕೃತಿ’ ಚಿತ್ರಕಲಾ ಪ್ರದರ್ಶನ ಬೆಂಗಳೂರಿನ ಚಿತ್ರಕಲಾ ಪರಿಷತ್ ಸಭಾಭವನದಲ್ಲಿ ಆ.4ರಿಂದ 9ರವರೆಗೆ ನಡೆಯಿತು. ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಪ್ರದರ್ಶನ ಆಯೋಜಿಸಲಾಗಿತ್ತು.
ಹಿರಿಯ ಕಲಾವಿದ ಬಾಬು ಜಟ್ಕರ್ ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಆರ್. ಸೂರಿ ಅವರು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿಗಳು, ಪ್ರಕೃತಿಯನ್ನು ವಾಸ್ತವಿಕವಾಗಿ ಚಿತ್ರಿಸುವ ಬದಲು ಸುಶೀಲ್ ಅವರ ವರ್ಣಚಿತ್ರಗಳು ಅದರ ಆತ್ಮವನ್ನು ಸೆರೆಹಿಡಿಯುತ್ತವೆ. ಅವು ವೀಕ್ಷಕರಲ್ಲಿ ಭಾವನೆ, ನೆನಪು ಮತ್ತು ಕಲ್ಪನೆಗಳನ್ನು ಅನುಭವಿಸುವಂತೆ ಮಾಡುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಯೊಂದು ಕಲಾಕೃತಿಯೂ ದೃಶ್ಯಪ್ರಪಂಚ ಮತ್ತು ಆಂತರಿಕ ಭೂದೃಶ್ಯದ ನಡುವಿನ ಸಂವಾದವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ಅಮೂರ್ತತೆ ಶಾಂತಿ, ಸಾಮರಸ್ಯ ಹಾಗೂ ಚಿಂತನೆಯ ಭಾಷೆಯಾಗಿ ಮೂಡಿಬಂದಿದ್ದು, ತನ್ನದೇ ಆದ ಕಲಾಭಾಷೆಯ ಮೂಲಕ ವೀಕ್ಷಕರೊಂದಿಗೆ ಸಂವಹನ ನಡೆಸುತ್ತದೆ ಎಂದು ಅವರು ಹೇಳಿದರು.
ಬೆಳಗಾವಿಯ ಸ್ವತಂತ್ರ ಕಲಾವಿದರಾಗಿರುವ ಸುಶೀಲ್ ತರಬರ ಅವರು ಹಂಪಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ನವದೆಹಲಿಯ ಲಲಿತ ಕಲಾ ಅಕಾಡೆಮಿಯ ಅಂತರರಾಷ್ಟ್ರೀಯ ಕಲಾಮೇಳ, ಇಂಡಿಯಾ ಬಿನಾಲೆ, ಕಲಾ ಸ್ಪಂದನ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಅವರು ಭಾಗವಹಿಸಿದ್ದಾರೆ. ಬೆಂಗಳೂರು, ಗೋವಾ, ನವದೆಹಲಿ ಹಾಗೂ ಧಾರವಾಡಗಳಲ್ಲಿ ಹಲವು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದಾರೆ.
ಚಿತ್ರಕಲಾವಿದ ಸುಶೀಲ್ ತರಬರ, ವಿಶ್ವನಾಥ ಗುಗ್ಗರಿ ಸೇರಿದಂತೆ ಹಲವು ಕಲಾವಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 