ರಾಷ್ಟ್ರೀಯ ಮಟ್ಟದ ಲಾ ಫೆಸ್ಟ್: ಆರ್. ಎಲ್. ಲಾ ವಿದ್ಯಾರ್ಥಿಗಳ ಸಾಧನೆ
National Level Law Fest: Achievements of R. L. Law Students
ಬೆಳಗಾವಿ 20: ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಂಗಳೂರು ಎಸ್. ಡಿ. ಎಮ್ ಲಾ ಕಾಲೇಜು ಆಯೋಜಿಸಿದ ಲೆಕ್ಸ್ ಅಲ್ಟಿಮಾ ರಾಷ್ಟ್ರೀಯ ಮಟ್ಟದ ಲಾ ಫೆಸ್ಟ್‌ನಲ್ಲಿ ಬಹುಮಾನಗಳನ್ನು ಗೆದ್ದಿದ್ದಾರೆ.
ವೃಷಭ್ ಪಾಟೀಲ್ ಅತ್ಯುತ್ತಮ ಜಾಮೀನು ಅರ್ಜಿ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದರು, ಚೇತನಾ ಪಾಟೀಲ್ ಮೂಟ್ ಕೋರ್ಟ್ ಸ್ಪರ್ಧೆಯ ಸೆಮಿಫೈನಲ್ ಹಂತಕ್ಕೆ ಅರ್ಹರಾದರು, ಅಮೋಘ್ ಸಾನಿಕೋಪ್ ಕ್ವಿಜ್ ಸ್ಪರ್ಧೆಯ ಫೈನಲ್ ಹಂತಕ್ಕೆ ಅರ್ಹರಾದರು ಮತ್ತು ರಾಜ್ ಶಾ ವಾದ-ವಿವಾದ, ಮೂಟ್ ಕೋರ್ಟ್ ಹಾಗೂ ಕ್ವಿಜ್ ಸ್ಪರ್ಧೆಗಳಿಗೆ ಅರ್ಹತೆ ಪಡೆದಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಆರ್ ಕುಲಕರ್ಣಿ, ಆಡಳಿತ ಮಂಡಳಿ, ಪ್ರಾಚಾರ್ಯ ಡಾ. ಎ. ಹೆಚ್. ಹವಾಲ್ದಾರ್, ಮೂಟ್ ಕೋರ್ಟ್ ವಿಭಾಗದ ಸಂಯೋಜಕಿ ಪ್ರೊ. ಅಶ್ವಿನಿ ಪರಬ್, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 