ನಾಗೇಂದ್ರ ಸಚಿವ ಸ್ಥಾನ ಕಸಿದುಕೊಂಡಿಲ್ಲ; ಅವರ ಕರ್ಮದಿಂದಲೇ ರಾಜೀನಾಮೆ: ಜನಾರ್ದನ ರೆಡ್ಡಿ
Nagendra was not stripped of his ministerial post; he resigned due to his own actions: Janardhana Re
ಬಳ್ಳಾರಿ, ಆ.29: ಮಾಜಿ ಸಚಿವ ಬಿ.ನಾಗೇಂದ್ರ ಅವರ ಸಚಿವ ಸ್ಥಾನವನ್ನು ನಾನಾಗಲಿ, ಶ್ರೀರಾಮುಲು ಅವರಾಗಲಿ ಅಥವಾ ಬಿಜೆಪಿ ಪಕ್ಷವಾಗಲಿ ಕಸಿದುಕೊಂಡಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣದಲ್ಲಿ ಅವರ ಪಾತ್ರದ ಹಿನ್ನೆಲೆಯಲ್ಲಿ ಅವರೇ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ನಗರದ ಸಿರುಗುಪ್ಪ ರಸ್ತೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗೇಂದ್ರ ಅವರು ಕಣ್ಣೀರು ಹಾಕಿ ಮಾತನಾಡುವ ಮೂಲಕ ಜನರ ಅನುಕಂಪ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆರೋಪಗಳಿಗೆ ದಾಖಲೆಗಳ ಮೂಲಕ ಉತ್ತರ ನೀಡಬೇಕು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ದೇಶದ ಆಡಳಿತ ನಡೆಯುತ್ತಿದ್ದು, ವೈಯಕ್ತಿಕ ಹಾಗೂ ಜಾತಿ ಆಧಾರಿತ ಟೀಕೆಗಳನ್ನು ಬದಿಗಿಟ್ಟು ವಾಸ್ತವಾಂಶಗಳ ಕುರಿತು ಮಾತನಾಡಬೇಕು. ನಾಗೇಂದ್ರ ಅವರು ಶಂಬೂಕನ ಕಥೆಯನ್ನು ಉಲ್ಲೇಖಿಸಿರುವುದು ಸರಿಯಲ್ಲ. ವಾಲ್ಮೀಕಿ ಮಹರ್ಷಿ ಹಾಗೂ ರಾಮಾಯಣದ ಕುರಿತು ಮಾತನಾಡುವ ಮೊದಲು ಅದರ ಇತಿಹಾಸ ಮತ್ತು ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು ಎಂದು ರೆಡ್ಡಿ ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರು ತಮ್ಮ ಪಾತ್ರವಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಪ್ರಕರಣದಲ್ಲಿ ತಮ್ಮ ಪಾತ್ರವೇನು ಎಂಬುದನ್ನು ದಾಖಲೆಗಳ ಸಮೇತ ಸ್ಪಷ್ಟಪಡಿಸಬೇಕು. ಕೇವಲ ಮಾತಿನ ಮೂಲಕ ಆರೋಪಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆಂಧ್ರ್ರದೇಶ, ತೆಲಂಗಾಣ, ಗೋವಾ ಸೇರಿದಂತೆ ಮುಂಬೈ ನಿವಾಸಿಗಳಾದ ನೇಹಾ ಕಲಂ ಮನ್ಸೂರಿ, ಜಹಾರ್ ಕಲಂ ಮನ್ಸೂರಿ ಹಾಗೂ ಕಲಂ ಶಕೂರ್ ಮನ್ಸೂರಿ ಅವರ ಖಾತೆಗಳಿಗೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿದೆ ಎಂಬ ಆರೋಪಗಳಿವೆ. ಈ ಹಣ ಅವರ ಖಾತೆಗಳಿಗೆ ಏಕೆ ವರ್ಗಾವಣೆಯಾಯಿತು, ಅವರಿಗೂ ನಿಗಮಕ್ಕೂ ಇರುವ ಸಂಬಂಧವೇನು ಎಂಬುದನ್ನು ನಾಗೇಂದ್ರ ಅವರು ಜನರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 